Bigg Boss : ನಿಧಿ ಸುಬ್ಬಯ್ಯ ಮತ್ತು ದಿವ್ಯ ಸುರೇಶ್ ನಡುವೆ ಯಾರಿಗೂ ತಿಳಿಯದೇ ಆದ ಒಪ್ಪಂದವೇನು?
ಬಿಗ್ ಬಾಸ್ ನಲ್ಲಿ ಹೊಸ ಮುಖಗಳು ಕಾಣಿಸಿಕೊಳ್ಳುತ್ತಿರುವ ಹೊತ್ತಿಗೆ ಆಟ ಜೋರಾಗೇ ನಡೆಯುತ್ತಿದೆ. ದಿನಕ್ಕೊಂದು ಆಟ ಆಡುತ್ತಾ ಸ್ಪರ್ಧಿಗಳು ನೋಡುಗರಿಗೆ ಮನರಂಜನೆ ನೀಡುತ್ತಿದ್ದಾರೆ. ಈ ನಡುವೆ ದಿವ್ಯ ಸುರೇಶ್ ಹಾಗೂ ನಿಧಿ ಸುಬ್ಬಯ್ಯ ನಡುವೆ ಒಪ್ಪಂದವೊಂದು ಆಗಿದೆ.
ಹೌದು… ಬಿಗ್ ಬಾಸ್ ಸ್ಪರ್ಧಿಗಳಿಗೆ ಪ್ರೇಮ ಪತ್ರ ಬರೆಯುವ ಟಾಸ್ಕ್ ನ್ನು ನೀಡಲಾಗಿದೆ. ಈ ಟಾಸ್ಕ್ ಆಡುತ್ತಿರುವ ಮನೆಯ ಎಲ್ಲಾ ಹುಡುಗರಿಗೆ ‘ಬಿಗ್ ಬಾಸ್ ಬಾಯ್ಸ್’ ಹಾಸ್ಟೆಲ್ ಕ್ರಿಯೇಟ್ ಮಾಡಲಾಗಿದೆ. ಈ ಹಾಸ್ಟಲ್ ನ ವಾರ್ಡನ್ ಆಗಿ ಪ್ರಶಾಂತ್ ಸಂಬರಗಿ ಅವರನ್ನು ಆಯ್ಕೆ ಮಾಡಲಾಗಿದೆ. ಜೊತೆಗೆ ಹುಡುಗಿಯರಿಗೆ ‘ಬಿಗ್ ಬಾಸ್ ಗರ್ಲ್ಸ್’ ಹಾಸ್ಟೆಲ್ ಕ್ರಿಯೇಟ್ ಮಾಡಲಾಗಿದೆ. ಈ ಹಾಸ್ಟಲ್ ನ ವಾರ್ಡನ್ ಆಗಿ ನಿಧಿ ಸುಬ್ಬಯ್ಯ ಆಗಿದ್ದಾರೆ.
ಈ ಟಾಸ್ಕ್ ನ ಪ್ರಕಾರ ಹುಡುಗರು ಹುಡುಗಿಯರಿಗೆ ಹೆಚ್ಚೆಚ್ಚು ಪ್ರೇಮ ಪತ್ರ ಬರೆದುಕೊಡಬೇಕು. ಯಾರು ಹೆಚ್ಚು ಪ್ರೇಮ ಪತ್ರ ಕೊಡುತ್ತಾರೋ, ಯಾರು ಹೆಚ್ಚು ಪತ್ರ ಸಂಗ್ರಹಿಸುತ್ತಾರೋ ಜೊತೆಗೆ ಹಾಸ್ಟಲ್ ವಾರ್ಡನ್ ಗಳಾದ ನಿಧಿ ಹಾಗೂ ಪ್ರಶಾಂತ್ ಇಬ್ಬರು ಕೂಡ ಹುಡುಗರು ಹುಡಗಿಯರಿಗೆ ಬರೆದ ಪತ್ರವನ್ನು ಪತ್ತೆ ಹಚ್ಚಬೇಕು. ಹೀಗೆ ಯಾರು ಹೆಚ್ಚು ಪತ್ರವನ್ನು ಸಂಗ್ರಹಿಸಿರುತ್ತಾರೋ ಅವರೇ ಮುಂದಿನ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗುತ್ತಾರೆ.
ಈ ಟಾಸ್ಕ್ ನಲ್ಲಿ ನಿಧಿ ಹಾಗೂ ದಿವ್ಯ ನಡುವೆ ಒಪ್ಪಂದವೊಂದು ಆಗಿದೆ. ಹುಡುಗಿಯರು ಬಚ್ಚಿಟ್ಟ ಪತ್ರದ ಬಗ್ಗೆ ನಿಧಿಗೆ ದಿವ್ಯ ಸುಳಿವು ಕೊಟ್ಟರೆ ನಿಧಿ ದಿವ್ಯಳ ಪತ್ರಗಳನ್ನು ಕಸಿದುಕೊಳ್ಳುವುದಿಲ್ಲ. ಇದಕ್ಕೆ ಸ್ವತ: ದಿವ್ಯ ಒಪ್ಪಿಕೊಂಡು ನಿಧಿಗೆ ಹುಡುಗಿಯರು ಇಟ್ಟ ಪತ್ರದ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಹೀಗಾಗಿ ನಿಧಿ ಹೆಚ್ಚೆಚ್ಚು ಪತ್ರಗಳನ್ನು ಸಂಗ್ರಹಿಸುತ್ತಿದ್ದಾರೆ. ಆದರೆ ದಿವ್ಯಳ ಬಳಿ ನಿಧಿ ಬಳಿ ಇರುವುದಕ್ಕಿಂತ ಹೆಚ್ಚು ಪತ್ರಗಳಿವೆಯಾ? ಇಲ್ಲವೋ ಅನ್ನೋದು ಮಾತ್ರ ಇನ್ನೂ ತಿಳಿದಿಲ್ಲ.
ಕ್ಯಾಪ್ಟನ್ ಆಗೋ ಆಸೆಯಿಂದ ದಿವ್ಯಾ ಸುರೇಶ್ ನಿಧಿಗೆ ಸಹಕರಿಸಲು ಒಪ್ಪಿಕೊಂಡಿದ್ದಾರೆ. ಆದರೆ ಈ ಆಟದಲ್ಲಿ ಸಹಕರಿಸಿದ ದಿವ್ಯ ಗೆಲ್ತಾರಾ? ಅಥವಾ ನಿಧಿ ಗೆಲ್ತಾರಾ? ಕ್ಯಾಪ್ಟನ್ ಟಾಸ್ಕ್ ಗೆ ಯಾರು ಅರ್ಹರಾಗುತ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.