ಐಪಿಎಲ್ ನಲ್ಲಿ ದಾಖಲೆ ಬರೆದ ರೋಹಿತ್ ತಂಡ : ಫೈನಲ್ ಪ್ರವೇಶಿಸಿದ ಮುಂಬೈ ಇಂಡಿಯನ್ಸ್!

ಐಪಿಎಲ್ 2020ರಲ್ಲಿ ಫೈನಲ್ ಹಂತ ತಲುಪುವ ಮೂಲಕ ಹೊಸ ದಾಖಲೆ ಬರೆದ ಮುಂಬೈ ಇಂಡಿಯನ್ಸ್ ತಂಡ ಉತ್ತಮ ಆಟದ ಮೂಲಕ ಫೈನಲ್ ಪ್ರವೇಶಿಸಿದೆ. ನಿನ್ನೆ ಕ್ವಾಲಿಫೈಯರ್ 1 ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ ಜಯ ದಾಖಲಿಸಿದ ಮುಂಬೈ ಇಂಡಿಯನ್ಸ್ ತಂಡ ಫೈನಲ್ ಗೆ ಅರ್ಹತೆ ಪಡೆದಿದೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರೋಹಿತ್ ಪಡೆ 20 ಓವರ್ ಗಳಲ್ಲಿ 200/5 ಸ್ಕೋರ್ ಮಾಡಿತ್ತು. ಡೆಲ್ಲಿ ತಂಡ ಶೂನ್ಯಕ್ಕೆ ಮೂರು ವಿಕೆಟ್ ಕಳೆದುಕೊಂಡು ಅತ್ಯಂತ ಕಳಪೆ ಆರಂಭ ಪಡೆದುಕೊಂಡಿತು. ಕೊನೆಗೆ 20 ಓವರ್ ಗಳಲ್ಲಿ 143/8 ಸ್ಕೋರ್ ಮಾಡಿ 57 ರನ್ ಗಳಿಂದ ಪಂದ್ಯ ಕಳೆದುಕೊಂಡಿತು.

2010ರಿಂದ ಮುಂಬೈ ಇಂಡಿಯನ್ಸ್ ತಂಡ 6 ಬಾರಿ ಐಪಿಎಲ್ ಫೈನಲ್ಸ್ ತಲುಪಿ, 4 ಬಾರಿ ಕಪ್ ಗೆದ್ದಿದ್ದು, ಒಂದು ಬಾರಿ ರನ್ನರ್ ಆಪ್ ಆಗಿದೆ. ಮುಂಬೈ ತಂಡ 2013, 2015, 2017 ಹಾಗೂ 2019ರಲ್ಲಿ ಕಪ್ ಗೆದ್ದಿದೆ.

2010: ಸೆಮಿಫೈನಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸಿ ಫೈನಲ್ ಪ್ರವೇಶ. ಫೈನಲ್ ನಲ್ಲಿ ಚೆನ್ನೈ ವಿರುದ್ಧ ಸೋಲು, ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ.

2011: ಎಲಿಮಿನೇಟರ್ ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಸೋಲಿಸಿ, ಕ್ವಾಲಿಫೈಯರ್ 2 ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋಲು ಕಂಡಿತು.

2012: ಎಲಿಮಿನೇಟರ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲು.

2013: ಕ್ವಾಲಿಫೈಯರ್ 1ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲು, ಕ್ವಾಲಿಫೈಯರ್ 2 ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆಲುವು, ಫೈನಲ್ ಪಂದ್ಯದಲ್ಲಿ ಚೆನ್ನೈ ವಿರುದ್ಧ ಗೆದ್ದು ಮೊದಲ ಬಾರಿಗೆ ಚಾಂಪಿಯನ್.

2014: ಎಲಿಮಿನೇಟರ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲು.

2015: ಕ್ವಾಲಿಫೈಯರ್ 1ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲುವು, ಫೈನಲ್ ಪ್ರವೇಶ, ಫೈನಲ್ ನಲ್ಲಿ ಮತ್ತೆ ಚೆನ್ನೈ ವಿರುದ್ಧ ಗೆದ್ದು ಚಾಂಪಿಯನ್ಸ್.

2017: ಕ್ವಾಲಿಫೈಯರ್ 1ರಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ ವಿರುದ್ಧ ಸೋಲು, ಕ್ವಾಲಿಫೈಯರ್ 2ರಲ್ಲಿ ಕೆಕೆಆರ್ ವಿರುದ್ಧ ಗೆಲುವು, ಫೈನಲ್ಸ್ ನಲ್ಲಿ ಪುಣೆ ವಿರುದ್ಧವೇ ಗೆದ್ದು ಮುಂಬೈ ಚಾಂಪಿಯನ್ಸ್

2019: ಕ್ವಾಲಿಫೈಯರ್ 1ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲುವು-ಫೈನಲ್ಸ್ ನಲ್ಲಿ ಚೆನ್ನೈ ವಿರುದ್ಧವೇ ಗೆದ್ದು ಮುಂಬೈ ಚಾಂಪಿಯನ್ಸ್ ಒಟ್ಟಾರೆ, 199 ಪಂದ್ಯಗಳಿಂದ 114 ಗೆಲುವು, 80 ಸೋಲು ಶೇ 58.79 ಸರಾಸರಿ ಹೊಂದಿರುವ ಮುಂಬೈ ಇಂಡಿಯನ್ಸ್ ತಂಡ 5ನೇ ಬಾರಿಗೆ ಚಾಂಪಿಯನ್ಸ್ ಆಗಲು ಇನ್ನೊಂದು ಪಂದ್ಯ ಗೆದ್ದರೆ ಸಾಕು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights