FACT CHECK | ಶ್ರೀನಗರದಲ್ಲಿ ಉಗ್ರನನ್ನು ಹಿಡಿದ ಸೈನಿಕರು ಎಂದು ಬ್ರೆಜಿಲ್‌ನ ವಿಡಿಯೋ ಹಂಚಿಕೆ

“ಈ ವಿಡಿಯೋ ನೋಡಿ ಇದು ಭಾರತೀಯ ಸೇನೆ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಉಗ್ರನೊಬ್ಬನನ್ನು ಸೆರೆಹಿಡಿದ ಪರಿ. ಈ ಉಗ್ರ ಸೈನಿಕರ ಕೈಯಿಂದ ತಪ್ಪಿಸಿಕೊಂಡು ಓಡಿ ಹೋಗಲು ಪ್ರಯತ್ನಿಸುತ್ತಿದ್ದಾಗ ದೇಶದ ಸೈನಿಕರು ಇವನನ್ನು ಬೆಂಬಿಡದೆ ಹಿಂಬಾಲಿಸಿ ಸೆರೆ ಹಿಡಿದಿದ್ದಾರೆ. ಆ ಮೂಲಕ ದೇಶದಲ್ಲಿ ಆಗುತ್ತಿದ್ದ ಅನಾಹುತವನ್ನು ತಪ್ಪಿಸಿದ್ದಾರೆ.” ಎಂಬ ಬರಹದೊಂದಿಗೆ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

fact police body 1

ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ,  ಈ ವೈರಲ್ ವಿಡಿಯೋದ ವಿಸ್ತೃತ ಭಾಗವು ಬ್ರೆಜಿಲ್ ಸುದ್ದಿ ಸಂಸ್ಥೆಯಾದ ಆರ್‌ಐಸಿ ನೊಟಿಸಿಯಾ 24ರಲ್ಲಿ ಲಭ್ಯವಾಗಿದೆ. ಈ ವಿಡಿಯೋ ಜೊತೆ ಇದ್ದ ಮಾಹಿತಿ ಪ್ರಕಾರ ವಾಹನ ಚಾಲನಾ ಪರವಾನಗಿ ಇಲ್ಲದ ಹದಿಹರೆಯದ ಯುವಕನೊಬ್ಬ ಪೊಲೀಸರು ಎಷ್ಟೇ ಎಚ್ಚರಿಕೆ ನೀಡಿದರೂ ಅಪಾಯಕಾರಿಯಾಗಿ ವಾಹನ ಚಾಲನೆ ಮಾಡಿ ಸಿಕ್ಕಿಬಿದ್ದಿದ್ದಾನೆ. ಎಂದು ವರದಿಯಾಗಿದೆ.

2021ರ ಆಗಸ್ಟ್‌ 2 ರಂದು ಬ್ರೆಜಿಲ್‌ನ ಸುದ್ದಿ ಸಂಸ್ಥೆ ಒಬೆಮ್‌ಡಿಟೋ ಮಾಡಿದ ವರದಿ ಲಭ್ಯವಾಗಿದೆ. ಈ ವರದಿ ಪ್ರಕಾರ. ಹದಿ ಹರೆಯದ ಯುವಕನ ಬೈಕ್‌ ಅನ್ನು ಹಿಂಬಾಲಿಸಿದ ಪೊಲೀಸರು, ಆತ ಕೆಳಗೆ ಬಿದ್ದ ಬಳಿಕ ಬಂಧಿಸಿದರು ಎಂದು ಮಾಹಿತಿ ನೀಡಲಾಗಿದೆ. ಈ ಘಟನೆಯು ಬ್ರೆಜಿಲ್ ದೇಶದ ಕೇಂದ್ರ ಭಾಗವಾದ ಪೆರೋಲಾ ಎಂಬಲ್ಲಿ ನಡೆದಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿತ್ತು. ಡೈಲಿ ಮೋಷನ್ ಕೂಡಾ ಈ ಕುರಿತು ವರದಿ ಮಾಡಿದೆ

ಇದಲ್ಲದೆ ಪೋರ್ಚುಗಲ್‌ ಸುದ್ದಿ ಸಂಸ್ಥೆ ಇಸ್ಟೋಯ್ ಕೂಡಾ ಈ ಕುರಿತಾಗಿ ವರದಿ ಮಾಡಿದೆ. ಬ್ರೆಜಿಲ್‌ನ ಪೆರೋಲಾ ಎಂಬಲ್ಲಿ 17 ವರ್ಷ ವಯಸ್ಸಿನ ಬಾಲಕನನ್ನು ಬಂಧನ ಮಾಡಲಾಗಿದೆ ಎಂದು ವಿವರಿಸಿದೆ. ಬಾಲಕನ ಬಲಿ ವಾಹನ ಚಾಲನಾ ಪರವಾನಗಿ ಇರಲಿಲ್ಲ. ಆತ ಅತಿ ವೇಗವಾಗಿ ಹಾಗೂ ಅತ್ಯಂತ ನಿರ್ಲಕ್ಷ್ಯದಿಂದ ವಾಹನ ಚಾಲನೆ ಮಾಡುತ್ತಿದ್ದ. ರಸ್ತೆಯ ರಾಂಗ್ ಸೈಡ್‌ನಲ್ಲಿ ವಾಹನ ಚಲಾಯಿಸಿ ಪಾದಚಾರಿಗಳು ಹಾಗೂ ಇತರ ವಾಹನ ಚಾಲಕರಿಗೆ ತೊಂದರೆ ಮಾಡಿದ ಎಂದೂ ವಿವರಿಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ,  ವಾಹನ ಚಾಲನಾ ಪರವಾನಗಿ ಇಲ್ಲದ ಹದಿಹರೆಯದ ಯುವಕನೊಬ್ಬ ಪೊಲೀಸರು ಎಷ್ಟೇ ಎಚ್ಚರಿಕೆ ನೀಡಿದರೂ ಅಪಾಯಕಾರಿಯಾಗಿ ವಾಹನ ಚಾಲನೆ ಮಾಡಿ ಸಿಕ್ಕಿಬಿದ್ದಿ ಬ್ರೆಜಿಲ್‌ನ ಘಟನೆಯನ್ನು, ಭಾರತದ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಭಯೋತ್ಪಾದಕನನ್ನು ಬಂಧಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ದುಬೈ ರಸ್ತೆಯ ಚಿತ್ರವನ್ನು ಉತ್ತರ ಪ್ರದೇಶದ ನೋಯ್ಡಾದ್ದು ಎಂದು ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights