ಯೋಗೇಶ್ ಗೌಡ ಹತ್ಯೆ ಪ್ರಕರಣ- ಇಂದು ನ್ಯಾಯಾಧೀಶರ ಮುಂದೆ ವಿನಯ್ ಕುಲಕರ್ಣಿ!
ಧಾರವಾಡದ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿಯನ್ನು ಸಿಬಿಐ ವಶಕ್ಕೆ ಪಡೆದುಕೊಂಡಿದ್ದು ಒಂದು ದಿನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ. ಇಂದು ಅವರ ವಿಚಾರಣೆ ನಡೆಯಲಿದೆ. ನಾಳೆ ವಿನಯ್ ಕುಲಕರ್ಣಿ ಅವರ ಹುಟ್ಟುಹಬ್ಬವಿದ್ದು 55 ವರ್ಷ ಪೂರ್ಣಗೊಳ್ಳಲಿದೆ. ಹೀಗಾಗಿ ಕೋರ್ಟ್ ಇಂದು ಯಾವ ತೀರ್ಪು ನೀಡಲಿದೆ ಎನ್ನುವ ಕುತೂಹಲ ಮೂಡಿದೆ.
ನಿನ್ನೆ ಹಿಂಡಲಿಗ ಜೈಲಿಗೆ ನಿನ್ನೆ ಅವರನ್ನು ಶಿಫ್ಟ್ ಮಾಡಲಾಗಿತ್ತು. ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ವಿಚಾರಣೆ ವೀಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರು ನಡೆಸಲಿದ್ದಾರೆ. ವಿನಯ್ ಕುಲಕರ್ಣಿಗೆ ಜೈಲಾ? ಕಸ್ಟಡಿನಾ? ಎನ್ನುವ ಕುತೂಹಲ ಮೂಡಿದೆ. ನ್ಯಾಯದೀಶ ಪಂಚಾಕ್ಷರಿ ಮುಂದೆ ವಿನಯ್ ಕುಲಕರ್ಣಿ ಹಾಜರಾಗಲಿದ್ದಾರೆ.
ಸಿಬಿಐ ವಶಕ್ಕೆ 14 ದಿನಗಳ ಕಾಲ ಕೊಡಿ ಎಂದು ಸಿಬಿಐ ಪರ ವಕೀಲರು ಮನವಿ ಮಾಡಲಿದ್ದಾರೆ. ಸಚಿವರಿಗೆ ಬೇಲ್ ಕೊಡುವ ವಿಚಾರ ಇಲ್ಲಿ ಪ್ರಸ್ತಾಪವಾಗಿಲ್ಲ. ಇವರು ಎರಡು ಆಯ್ಕೆ ಇದ್ದು, ಒಂದು ನ್ಯಾಯಾಂಗ ಬಂಧನಕ್ಕೆ ಒಳಪಡಿಸಬಹುದು. ಇಲ್ಲವೇ ಸಿಬಿಐ ಕಸ್ಟಡಿ ವಿಚಾರಣೆಗೆ ಒಳಪಡಿಸಬಹುದು.
ಜೈಲಿನಲ್ಲಿ ವಿನಯ್ ಗೆ ಬೆಳಿಗ್ಗೆ 10.30ಕ್ಕೆ ಮಧ್ಯಹ್ನನದ ಊಟವನ್ನು ನೀಡಲಾಗಿದೆ. ಸಿಬ್ಬಂದಿ ಬ್ರೇಕ್ ಫಾಸ್ಟ್ ಸಮಯದಲ್ಲಿ ಊಟವನ್ನು ಕೊಟ್ಟಿದ್ದು ನೋಡಿ ವಿನಯ್ ಶಾಕ್ ಆಗಿದ್ದಾರೆ. ಜೈಲಿನ ನಿಯಮಗಳಂತೆ ಸಿಬಂಧಿ ಊಟ ನೀಡಿದ್ದರು.