FACT CHECK | ಸಿಎಂ ಸಿದ್ದರಾಮಯ್ಯ ಬಸವಣ್ಣನವರ ಪುತ್ಥಳಿಗೆ ಅನುದಾನ ಕಡಿತಗೊಳಿಸಿದ್ದು ನಿಜವೇ?
ಸಿಎಂ ಸಿದ್ದರಾಮಯ್ಯ ಅವರು ಲಂಡನ್ನಲ್ಲಿ ನಿರ್ಮಾಣವಾದ ಬಸವಣ್ಣನವರ ಪುತ್ಥಳಿಗೆ ಯಾವುದೇ ಅನುದಾನವನ್ನು ನೀಡಿಲ್ಲ. 2018ರಲ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆ ಅಂದಿನ ಮುಖ್ಯಮಂತ್ರಿ ಆಗಿದ್ದ ಜಗದೀಶ್ ಶೆಟ್ಟರ್ ಅವರು ನೀಡಿದ್ದ ಅನುದಾನವನ್ನು ಕಡಿತಗೊಳಿಸಿದ್ದರು ಎಂಬ ವಿಡಿಯೋವನ್ನು ವಿವಿಧ ಬರಹಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

ಇನ್ನು ಇದೇ ವಿಡಿಯೋದಲ್ಲಿ ಹಲವು ಸುಳ್ಳು ಆರೋಪಗಳನ್ನು ಮಾಡಲಾಗಿದ್ದು, ಅದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಬಸವಣ್ಣನವರ ಪುತ್ತಳಿಯ ಉದ್ಘಾಟನೆಯ ಸಂದರ್ಭದಲ್ಲಿ ಬಂದಿದ್ದರು ಎಂಬ ಕಾರಣಕ್ಕಾಗಿ ಸಿಎಂ ಸಿದ್ದರಾಮಯ್ಯನವರು ಅಂದು ಬಸವಣ್ಣನವರ ಪ್ರತಿಮೆಯ ಉದ್ಘಾಟನೆಗೆ ಬರಲಿಲ್ಲ. ಆದರೆ ಇಂದು ಲಂಡನಿಗೆ ತೆರಳಿದ್ದಾಗ ಸಿಎಂ ಸಿದ್ದರಾಮಯ್ಯನವರು ಬಸವಣ್ಣನವರ ಪ್ರತಿಮೆಯ ಬಳಿ ಫೋಟೋ ತೆಗೆಸಿಕೊಂಡು ಅದನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಭಾವನಾತ್ಮಕವಾಗಿ ಬರೆದುಕೊಂಡು ನಾಟಕವಾಡಿದ್ದಾರೆ ಎಂದು ನಿಂದನಾತ್ಮಕವಾಗಿರುವ ವಿಡಿಯೋವೊಂದು ವೈರಲಾಗುತ್ತಿದೆ.
ಲಂಡನ್ನ ಥೇಮ್ಸ್ ಪಾರ್ಕ್ನಲ್ಲಿರುವ ಬಸವೇಶ್ವರರ ಪುತ್ಥಳಿ ಮುಂದೆ ನಿಂತಿರುವ ಚಿತ್ರವನ್ನು 2018ರಲ್ಲಿ ಸಿದ್ದರಾಮಯ್ಯ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಲಂಡನ್ನ ಥೇಮ್ಸ್ ಪಾರ್ಕ್ನಲ್ಲಿರುವ ಅಣ್ಣ ಬಸವಣ್ಣನವರ ಪುತ್ಥಳಿ ನೋಡಿ ಕಣ್ಣುತುಂಬಿ ಬಂತು. ನಿಜವಾದ ವಿಶ್ವಗುರು ನಮ್ಮ ಬಸವಣ್ಣ ಎಂದು ಅವರು ಬಸವಣ್ಣನನ್ನು ಕೊಂಡಾಡಿದ್ದರು.
ಲಂಡನ್ನ ಜೇಮ್ಸ್ ಪಾರ್ಕ್ನಲ್ಲಿರುವ ಅಣ್ಣ ಬಸವಣ್ಣನವರ ಪುತ್ಥಳಿ ನೋಡಿ ಕಣ್ತುಂಬಿ ಬಂತು. ನಿಜವಾದ ವಿಶ್ವಗುರು ನಮ್ಮ ಬಸವಣ್ಣ. pic.twitter.com/5gh7sG4sj4
— Siddaramaiah (@siddaramaiah) September 14, 2018
ಈ ವಾಟ್ಸಾಪ್ನಲ್ಲಿ ವೈರಲ್ ಆಗಿರುವ ಸಿದ್ದರಾಮಯ್ಯನವರ ವಿಡಿಯೋವನ್ನು ಹಲವು ಬಲಪಂಥೀಯ ವಾಟ್ಸಾಪ್ ಗುಂಪುಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಈ ವಿಡಿಯೋದಲ್ಲಿ ಹೇಳಿರುವ ಅಂಶಗಳು ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್
ಸದ್ಯಕ್ಕೆ ವೈರಲ್ ಆಗುತ್ತಿರುವ ವಿಡಿಯೋ ಆರು ವರ್ಷಗಳ ಹಿಂದಿನ ಘಟನೆಗೆ ಸಂಬಂಧಿಸಿದಾಗಿದೆ. ಈ ಆರೋಪಗಳನ್ನು ಡಾ.ನಿರಜ್ ಪಾಟೀಲ್ ಎಂಬ ವ್ಯಕ್ತಿಯ ಹೇಳಿಕೆಯ ಆಧಾರದ ಮೇಲೆ ಮಾಡಲಾಗುತ್ತೆ. ಈ ನೀರಜ್ ಪಾಟೀಲ್ ಅವರು ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ಮಾತನಾಡುವಾಗ ಸಿಎಂ ಸಿದ್ದರಾಮಯ್ಯನವರು ಜಗದೀಶ್ ಶೆಟ್ಟರ್ ನೀಡಿದ್ದ ಅನುದಾನವನ್ನ ಕಡಿತಗೊಳಿಸಿದ್ದರು. ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಮೆ ಉದ್ಘಾಟನೆಗೆ ಬರುತ್ತಿದ್ದಾರೆ ಎಂದಾಗ ಸಿಎಂ ಸಿದ್ದರಾಮಯ್ಯ ಆ ಕಾರ್ಯಕ್ರಮಕ್ಕೆ ಬರಲು ನಿರಾಕರಿಸಿದ್ದರು ಎಂದು ಆರೋಪಿಸಿದ್ದರು

ಆದರೆ ಇದೇ ವೇಳೆ ಈ ಹೇಳಿಕೆಗಳಿಗೆ ಸಿಎಂ ಸಿದ್ದರಾಮಯ್ಯನವರು ಕೂಡ ಪ್ರತಿಕ್ರಿಯೆ ನೀಡಿದ್ದು, ನಾನು ಬಸವಣ್ಣನವರ ಪ್ರತಿಮೆಯ ಉದ್ಘಾಟನೆಗೆ ಯಾವುದೇ ರೀತಿಯ ಅನುದಾನವನ್ನ ನೀಡಿಲ್ಲ ಜೊತೆಗೆ ಯಾವುದೇ ಅನುದಾನವನ್ನು ಕಡಿತವು ಗೊಳಿಸಿಲ್ಲ ಎಂಬುದನ್ನ ಸ್ಪಷ್ಟಪಡಿಸಿದ್ದಾರೆ. ಇಷ್ಟು ಮಾತ್ರವಲ್ಲದೆ ಬಿಜೆಪಿಯವರು ಅಥವಾ ಪ್ರಧಾನಿ ಅವರು ಆ ಕಾರ್ಯಕ್ರಮಕ್ಕೆ ಬರುತ್ತಾರೆ ಎನ್ನುವ ಕಾರಣಕ್ಕೆ ನಾನು ಹೋಗಲಿಲ್ಲ ಎಂಬುದು ಸುಳ್ಳು. ಬದಲಾಗಿ ಆ ಸಂದರ್ಭದಲ್ಲಿ ಬೇರೆ ಕಾರ್ಯಕ್ರಮಗಳು ನಿಗದಿಯಾಗಿದ್ದ ಕಾರಣಕ್ಕಾಗಿ ಪ್ರತಿಮೆ ಉದ್ಘಾಟನೆಯ ಕಾರ್ಯಕ್ಕೆ ಹೋಗಲಾಗಿಲ್ಲ ಎಂಬುದನ್ನ ಸ್ಪಷ್ಟಪಡಿಸಿದ್ದಾರೆ.
ಲಂಡನ್ನ ಥೇಮ್ಸ್ ಪಾರ್ಕ್ನಲ್ಲಿರುವ ಬಸವೇಶ್ವರರ ಪುತ್ಥಳಿ ಮುಂದೆ ನಿಂತಿರುವ ಚಿತ್ರವನ್ನು 2018ರಲ್ಲಿ ಸಿದ್ದರಾಮಯ್ಯ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬಸವಣ್ಣ ಅವರ ಪುತ್ಥಳಿಯನ್ನು ಕಂಡು ಭಾವುಕರಾಗಿದ್ದಾಗಿ ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ. ಲಂಡನ್ನ ಥೇಮ್ಸ್ ಪಾರ್ಕ್ನಲ್ಲಿರುವ ಅಣ್ಣ ಬಸವಣ್ಣನವರ ಪುತ್ಥಳಿ ನೋಡಿ ಕಣ್ಣುತುಂಬಿ ಬಂತು. ನಿಜವಾದ ವಿಶ್ವಗುರು ನಮ್ಮ ಬಸವಣ್ಣ ಎಂದು ಅವರು ಬಸವಣ್ಣನನ್ನು ಕೊಂಡಾಡಿದ್ದಾರೆ.
ಲಂಡನ್ನ ಜೇಮ್ಸ್ ಪಾರ್ಕ್ನಲ್ಲಿರುವ ಅಣ್ಣ ಬಸವಣ್ಣನವರ ಪುತ್ಥಳಿ ನೋಡಿ ಕಣ್ತುಂಬಿ ಬಂತು. ನಿಜವಾದ ವಿಶ್ವಗುರು ನಮ್ಮ ಬಸವಣ್ಣ. pic.twitter.com/5gh7sG4sj4
— Siddaramaiah (@siddaramaiah) September 14, 2018
ಇನ್ನು ಈ ಘಟನೆಯ ನಂತರ ಕಾಂಗ್ರೆಸ್ ಜೆಡಿಎಸ್ ಸರ್ಕಾರ ಹಾಗೂ ಬಿಜೆಪಿ ಸರ್ಕಾರಗಳು ಆಡಳಿತ ನಡೆಸಿವೆ. ಈ ಸರ್ಕಾರಗಳ ಅವಧಿಯಲ್ಲಿ ಕೂಡ ನಿರಜ್ ಪಾಟೀಲ್ ಹೇಳಿಕೆಗೆ ಯಾವುದೇ ರೀತಿಯ ಅಧಿಕೃತ ಮಾಹಿತಿಗಳು ಅಥವಾ ಸಾಕ್ಷಿಗಳು ಲಭ್ಯವಾಗಿಲ್ಲ. ಅವರ ಎಲ್ಲಾ ಹೇಳಿಕೆಗಳಿಗೆ ಪೂರಕವಾದ ಯಾವುದೇ ಸಾಕ್ಷಿಗಳು ಸಿಕ್ಕಿಲ್ಲ ಹಾಗಾಗಿ ವೈರಲ್ ಆಗುತ್ತಿರುವ ವಿಡಿಯೋ ಮತ್ತು ಅದರಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಡಲಾಗುತ್ತಿರುವ ಆರೋಪಗಳು ಸುಳ್ಳು ಎಂದು ಸ್ವತಃ ಸಿದ್ದರಾಮಯ್ಯನರೇ ಸ್ಪಷ್ಟಪಡಿಸಿದ್ದಾರೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ಗೆ ಚಪ್ಪಲಿ ತೂರಿದ್ದು ನಿಜವೇ?

