FACT CHECK | POKಯಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಪ್ರದಶೀಸಲಾಗಿದೆ ಎಂದು ಎಡಿಟೆಡ್ ವಿಡಿಯೋ ಹಂಚಿಕೆ

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (POK) ಇದೇ ಮೊದಲ ಭಾರಿಗೆ ಭಾರತದ ದ್ವಜ ಹಾರಾಡಿದೆ. ಪಾಕಿಸ್ತಾನ ಸೇನೆ ಹಾಗೂ ಪಾಕಿಸ್ತಾನ ಪೊಲೀಸ್ ವಿರುದ್ಧ ನಡೆಯುತ್ತಿರುವ ಬೃಹತ್ ಪ್ರತಿಭಟನೆಯಲ್ಲಿ ಸ್ಥಳೀಯರು ಭಾರತದ ತ್ರಿವರ್ಣ ಧ್ವಜ ಹಾರಿಸಿದ್ದಾರೆ. ಎಂದು 11 ಮೇ 2024ರಂದು ಸುವರ್ಣ ನ್ಯೂಸ್ ತನ್ನ ವೆಬ್‌ಸೈಟ್‌ನಲ್ಲಿ ವರದಿಯನ್ನು ಪ್ರಕಟಿಸಿದೆ

ಸುವರ್ಣ ನ್ಯೂಸ್‌ ಪ್ರಕಟಿಸಿದ ವರದಿ
ಸುವರ್ಣ ನ್ಯೂಸ್‌ ಪ್ರಕಟಿಸಿದ ವರದಿ

ಈ ವರದಿಯಲ್ಲಿ ಪಾಕಿಸ್ತಾನದಲ್ಲಿ ಭಾರತದ ಧ್ವಜ ಪ್ರದರ್ಶಿಸಲಾಗಿದೆ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರತಿಪಾದಿಸಿದೆ.  ಹಾಗಿದ್ದರೆ ಸುವರ್ಣ ನ್ಯೂಸ್ ವರದಿ ಮಾಡಿರುವ ಹಾಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನಿಜವಾಗಿಯೂ ಭಾರತದ ಧ್ವಜವನ್ನು ಪ್ರದರ್ಶಿಸಲಾಗಿದೆಯೇ ಎಂದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ

ಫ್ಯಾಕ್ಟ್‌ಚೆಕ್ :

ಇಂಡಿಯಾ  ಟುಡೆ ಸಂಸ್ಥೆ ನಡೆಸಿದ ಈ ವರದಿ ಕುರಿತು ಫ್ಯಾಕ್ಟ್‌ಚೆಕ್ ನಡೆಸಿದ್ದು, ವೈರಲ್ ವಿಡಿಯೋವನ್ನು ತಿರುಚಲಾಗಿದೆ ಎಂದು ಕಂಡುಹಿಡಿದಿದೆ.

ಪಾಕಿಸ್ತಾನದಲ್ಲಿ ಭಾರತದ ಧ್ವಜ ಪ್ರದರ್ಶಿಸಲಾಗಿದೆ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರತಿಪಾದಿಸಿ ಹಂಚಿಕೊಳ್ಳಲಾಗುತ್ತಿರುವ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜಿನಲ್ಲಿ ಸರ್ಚ್ ಮಾಡಿದಾಗ,  ಇದೇ ರೀತಿಯ ಹಲವು ವೈರಲ್ ಪೋಸ್ಟ್‌ಗಳು ಕಂಡು ಬಂದಿದೆ. ಆದರೆ ಈ ಫೋಟೋದ ಮೂಲವನ್ನು ಹುಡುಕಿದಾಗ ಹಲವರು ಈ ಫೋಟೋಗೆ ಹೋಲಿಕೆ ಆಗುವ ಮತ್ತೊಂದು ಫೋಟೋವನ್ನು ಹಂಚಿಕೊಂಡಿದ್ದಾರೆ. ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅದೇ ಮೂಲ ಫೋಟೋ ಎಂಬುದು ತಿಳಿದುಬಂದಿದೆ. ಇಲ್ಲಿ ಮೂಲ ಫೋಟೋವನ್ನು ತದ್ವಿರುದ್ಧವಾಗಿ ತಿರುಗಿಸಲಾಗಿದೆ ಅಥವಾ ಫ್ಲಿಪ್ ಮಾಡಿ ಎಡಿಟ್ ಮಾಡಲಾಗಿದೆ ಎಂಬುದು ಫೋಟೋ ಪರಿಶೀಲಿಸಿದ ನಂತರ ಸ್ಪಷ್ಟವಾಗಿದೆ.

ಮೂಲ ಫೋಟೋ
ಮೂಲ ಫೋಟೋ
ತಿರುಚಿರುವ ಫೋಟೋ
ತಿರುಚಿರುವ ಫೋಟೋ

ಇನ್ನೂ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ಕುರಿತು ಹುಡುಕಿದಾಗ ಈ ಘಟನೆ 12 ಮೇ 2024 ರಂದು ಪಾಕಿಸ್ತಾನದ ಪುಂಚ್ ಜಿಲ್ಲೆ ಅಥವಾ ಪಿಓಕೆಯ ಪ್ರಮುಖ ನಗರವಾಗಿರುವ ರಾವಾಲ್‌ಕೋಟ್‌ನಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆದಿರುವುದು ನಿಜ ಎಂಬುದು ತಿಳಿದುಬಂದಿದೆ. ಇನ್ನು ಯೂಟ್ಯಬ್‌ ಶಾರ್ಟ್ಸ್‌ ಒಂದರಲ್ಲೂ ಈ ಘಟನೆಗೆ ಸಂಬಂಧಪಟ್ಟಂತೆ ವಿಡಿಯೋದಲ್ಲಿನ ದೃಶ್ಯಕ್ಕೂ ಫೋಟೋದಲ್ಲಿನ ದೃಶ್ಯಕ್ಕೂ ಸಾಮ್ಯತೆ ಇದ್ದರಿಂದ ಇದು ಒಂದೇ ಸಮಯದಲ್ಲಿ ತೆಗೆದ ವಿಡಿಯೋ ಮತ್ತು ಫೋಟೋ ಎಂಬುದು ತಿಳಿದುಬಂದಿದೆ.

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸರ್ಕಾರದ ವಿರುದ್ಧ ನಡೆದಿದ್ದ ಈ ಬೃಹತ್ ಪ್ರತಿಭಟನೆಯಲ್ಲಿ ಒಂದು ವೇಳೆ ಭಾರತದ ದ್ವಜ ಪ್ರದರ್ಶನವಾಗಿದ್ದು ನಿಜವೇ ಆಗಿದ್ದರೆ ಆ ಕುರಿತು ಪಾಕಿಸ್ತಾನದ ಮಾಧ್ಯಮಗಳು ವರದಿಯನ್ನು ಮಾಡಬೇಕಿತ್ತು. ಈ ಕುರಿತು ಪರಿಶೀಲನೆ ನಡೆಸಿದಾಗ ಪಾಕಿಸ್ತಾನದ ಮಾಧ್ಯಮಗಳು ಭಾರತದ ಧ್ವಜ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಸುದ್ದಿಗಳನ್ನು ಮಾಡಿಲ್ಲ.

ಈ ಕುರಿತು ಸಾಮ ಟಿವಿ ಎಂಬ ಪಾಕಿಸ್ತಾನದ ಸುದ್ದಿ ಮಾಧ್ಯಮದ ಎಕ್ಸಿಕ್ಯೂಟಿವ್ ಎಡಿಟರ್ ಆದ ಜಬ್ಬರ್ ಚೌದರಿ ಎಂಬುವವರು ಇಂಡಿಯಾ ಟುಡೆ ಸುದ್ದಿವಾಹಿನಿಗೆ ಈ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದು ಪಾಕಿಸ್ತಾನದಲ್ಲಿ ಭಾರತದ ಧ್ವಜವನ್ನು ಪ್ರದಶೀಸಲಾಗಿಲ್ಲ. ವೈರಲಾಗುತ್ತಿರುವ ಫೋಟೋ ಸಂಪೂರ್ಣವಾಗಿ ತಿರುಚಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ

ಒಟ್ಟಾರೆಯಾಗಿ ಹೇಳುವುದಾದರೆ, ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಭಾರತದ ತ್ರಿವರ್ಣ ಧ್ವಜ ಕಂಡು ಬಂದಿದೆ ಎಂಬುದು ಸುಳ್ಳಾಗಿದೆ ಮತ್ತು ಇದೇ ಸುಳ್ಳು ಸುದ್ದಿಯನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆಗೆ ಹಲವು ಮಾಧ್ಯಮಗಳು ಹಂಚಿಕೊಂಡು ಜನರನ್ನು ದಾರಿ ತಪ್ಪಿಸಲು ಮುಂದಾಗಿದೆ. ಹಾಗಾಗಿ ಪಿಒಕೆಯಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಪ್ರದರ್ಶಿಸಲಾಗಿದೆ ಎಂಬುದು ಸುಳ್ಳು.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ದುಬೈ ರಸ್ತೆಯ ಚಿತ್ರವನ್ನು ಉತ್ತರ ಪ್ರದೇಶದ ನೋಯ್ಡಾದ್ದು ಎಂದು ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights