FACT CHECK | ಪ್ರಧಾನಿ ಮೋದಿ ಗುರುದ್ವಾರದಲ್ಲಿ ಭಕ್ತರಿಗೆ ಊಟವನ್ನು ಬಡಿಸಿದಂತೆ ನಟಿಸಿದ್ದಾರೆ ಎಂಬುದು ನಿಜವೇ?

ಬಿಹಾರದಲ್ಲಿ ಲೋಕಸಭೆ ಚುನಾವಣೆ ಪ್ರಚಾರ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರದ ರಾಜಧಾನಿ ಪಾಟ್ನಾ ನಗರದಲ್ಲಿನ ತಾಖತ್ ಶ್ರೀ ಹರಿಮಂದಿರ್ ಜಿ ಪಾಟ್ನಾ ಸಾಹಿಬ್ ಗುರುದ್ವಾರಕ್ಕೆ ಇತ್ತೀಚೆಗೆ ಭೇಟಿ ನೀಡಿದರು.  ಸಿಖ್ ಸಮುದಾಯದ ಜನರಿಗೆ ಆಹಾರ ಬಡಿಸುವ ಸೇವಾ ಕಾರ್ಯ ನಡೆಸಿದರು.

ಕೆಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ವಿಡಿಯೋವನ್ನು ಹಂಚಿಕೊಂಡು ಲೋಕಸಭಾ ಚುನಾವಣೆಯಲ್ಲಿ ಸಿಖ್ ಮತದಾರರನ್ನು ಸೆಳೆಯಲು ಫೋಟೋಶೂಟ್‌ ಮಾಡಿಸಿದ್ದಾರೆ. ಖಾಲಿಯಾಗಿರುವ ಬಕೆಟ್‌ ಮತ್ತು ಸೌಟನ್ನು ಹಿಡಿದು  ಊಟ ಬಡಿಸುವಂತೆ ನಟಿಸುತ್ತಿದ್ದಾರೆ. ಇಲ್ಲಿಯಾದರೂ ನೀವು ನಟಿಸುವುದನ್ನು ಬಿಟ್ಟು ಆಹಾರ ನೀಡುವ ಸೇವೆಯನ್ನು ಪ್ರಾಮಾಣಿಕವಾಗಿ ಸೇವೆ ಮಾಡಬಾರದೇ ಪ್ರಧಾನಿ ಮೋದಿಯವರೇ ಎಂದು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಪ್ರಧಾನಿ ಮೋದಿ ಪಾಟ್ನಾದ ತಾಖತ್ ಶ್ರೀ ಹರಿಮಂದಿರ್ ಜಿ ಪಾಟ್ನಾ ಸಾಹಿಬ್ ಗುರುದ್ವಾರಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿ ಪ್ರಚಾರಕ್ಕಾಗಿ ಊಟ ಬಡಿಸಿದಂತೆ ನಟಿಸಲು, ಖಾಲಿ ಬಕೆಟ್ ಮತ್ತು ಖಾಲಿ ಸೌಟು ಹಿಡಿದು ಫೋಟೊ ಶೂಟ್ ನಡೆಸಿದ್ದಾರೆ ಎಂದು ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಮೇ 13, 2024 ರಂದು ANI ಸುದ್ದಿ ವಾಹಿನಿಯು ಎಕ್ಸ್ ನಲ್ಲಿ ಹಂಚಿಕೊಂಡ ಫೋಸ್ಟ್‌ವೊಂದು ಲಭ್ಯವಾಗಿದೆ.

ANI ಸುದ್ದಿ ವಾಹಿನಿಯು ತನ್ನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಪ್ರಧಾನಿ ಮೋದಿ ಸರತಿಯಲ್ಲಿ ಕುಳಿತ ಭಕ್ತರಿಗೆ ಊಟ ಬಡಿಸುತ್ತಿರುವುದು ಸ್ಪಷ್ಟವಾಗಿದೆ.

ಗುರುದ್ವಾರದ ಸಿಖ್ ಸಮುದಾಯದ ಅಡುಗೆ ಹಾಲ್‌ಗೆ ತೆರಳಿದ ಅವರು ಸ್ಟೀಲ್ ಬಕೆಟ್‌ನಲ್ಲಿದ್ದ ಆಹಾರವನ್ನು ಸಾಲಿನಲ್ಲಿ ಕುಳಿತಿದ್ದ ಜನರಿಗೆ ಬಡಿಸಿದರು. ಅಲ್ಲದೆ ಅಡುಗೆ ಕೋಣೆಯಲ್ಲಿ ದಾಲ್ ಹಾಗೂ ಇತರೆ ಖಾದ್ಯ ತಯಾರಿಸುವ ಕಾರ್ಯದಲ್ಲಿಯೂ ನೆರವಾದರು. ಚಪಾತಿ ಕೂಡ ಲಟ್ಟಿಸಿ ಗಮನ ಸೆಳೆದರು. ಎಂದು ವರದಿಯಲ್ಲಿ ಉಲ್ಲೇಖಿಸಿದೆ.

article_image7

ವಾಸ್ತವವಾಗಿ ಪ್ರಧಾನಿ ಮೋದಿಯವರ ಕೈಯಲ್ಲಿ ಹಿಡಿದಿರುವ ಬಕೇಟ್‌ ಮತ್ತು ಸೌಟಿನಲ್ಲಿ ಶಾವಿಗೆ ಪಾಯಸದಂತಹ ಬಿಳಿ ಬಣ್ಣದ ಸಿಹಿ ತಿನಿಸನ್ನು ಬಡಿಸುತ್ತಿರುವುದು ಸ್ಪಷ್ಟವಗಿದೆ.

ಬಿಹಾರದ ಪಾಟ್ನಾದಲ್ಲಿರುವ ಐತಿಹಾಸಿಕ ಗುರುದ್ವಾರ ಪಾಟ್ನಾ ಸಾಹಿಬ್‍ಗೆ ಭೇಟಿ ನೀಡಿದ ಪಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ, ಬಳಿಕ ಹರಿಮಂದಿರ್ ಜಿ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಿದರು. ಅಲ್ಲಿ ಭಕ್ತರಿಗೆ ಅನ್ನ ಸಂಪರ್ತಣೆ ಮಾಡಿದ್ದಾರೆ. ಅಲ್ಲಿ ಸ್ವತಃ ಅಡುಗೆ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಬಳಿಕ ಅಲ್ಲಿನ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಿದ್ದಾರೆ. ಲೋಕಸಭಾ ಚುನಾವಣೆ ಹಿನ್ನಲೆ ಬಿಹಾರಕ್ಕೆ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಮೋದಿ ಅವರು ಸಿಖ್ ಪೇಟವನ್ನು ಧರಿಸಿ ಸೋಮವಾರ ಸಾಹಿಬ್ ಗುರುದ್ವಾರದಲ್ಲಿ ಆಹಾರ ಸೇವೆಯಲ್ಲಿ ಪಾಲ್ಗೊಂಡರು. ಮೋದಿ ಅವರು ಸ್ಟೀಲ್ ಬಕೆಟ್ ಹಿಡಿದು ಸಿಖ್ಖರಿಗೆ ಆಹಾರ ಬಡಿಸಿದ್ದಾರೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.

ಒಟ್ಟಾರೆಯಾ ಹೇಳುವುದಾದರೆ, ಪ್ರಧಾನಿ ಮೋದಿ ಪಾಟ್ನಾ ನಗರದಲ್ಲಿನ ತಾಖತ್ ಶ್ರೀ ಹರಿಮಂದಿರ್ ಜಿ ಪಾಟ್ನಾ ಸಾಹಿಬ್ ಗುರುದ್ವಾರಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಿದ ದೃಶ್ಯಗಳನ್ನು ಖಾಲಿ ಬಕೆಟ್‌ ಊಟ ಬಡಿಸುತ್ತಿರುವಂತೆ ನಟಿಸುತ್ತಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | POKಯಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಪ್ರದಶೀಸಲಾಗಿದೆ ಎಂದು ಎಡಿಟೆಡ್ ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights