FACT CHECK | ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೆಸರಿನಲ್ಲಿ ಇದೆಯಂತೆ 2 ಸಾವಿರ ಎಕರೆ ಭೂಮಿ?

ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರ ಆಸ್ತಿಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಪೋಸ್ಟ್‌ವೊದು ವೈರಲ್ ಆಗುತ್ತಿದೆ. ಇದರ ಸಾರಾಂಶ ಹೀಗಿದೆ.

ಸಂಸತ್ತಿನ ಕಲಾಪದ ವೇಳೆ ಲೋಕಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಮೋದಿಯನ್ನು ಕುರಿತು ನೀವು ನಮ್ಮ ದಲಿತರಿಗೆ ಪ್ರತಿ ಕುಟುಂಬಕ್ಕೆ ಕನಿಷ್ಠ ಒಂದು ಪ್ರತಿಶತ ಭೂಮಿಯನ್ನು ಮಂಜೂರು ಮಾಡಬೇಕು! ಎಂದು ಕೇಳಿದ್ದರಂತೆ ಅದಕ್ಕೆ ಪ್ರತಿಕ್ರಿಯಿಸುವ ಪ್ರಧಾನಿ ಮೋದಿ ನೀವೇ ದಲಿತರಲ್ಲವೇ?’ ಎಂದು ಖರ್ಗೆ ಅವರನ್ನು ಪ್ರಶ್ನಿಸುತ್ತಾರೆ.

ನೀವು ಹೊಂದಿರುವ ಜಮೀನು ಎಷ್ಟು ಗೊತ್ತಾ?

“ಬೆಂಗಳೂರಿನ ಬನ್ನೇರುಘಟ್ಟ ಪ್ರದೇಶದಲ್ಲಿ 500 ಕೋಟಿ ರೂಪಾಯಿ ವೆಚ್ಚದ ವಾಣಿಜ್ಯ ಸಂಕೀರ್ಣವನ್ನು ಹೊಂದಿದ್ದೀರಿ. ಚಿಕ್ಕಮಗಳೂರಿನಲ್ಲಿ 300 ಎಕರೆ ಕಾಫಿ ಎಸ್ಟೇಟ್ ಇದೆ. ಆ ಜಾಗದಲ್ಲಿ 50 ಕೋಟಿ ರೂಪಾಯಿಯ ಬಂಗಲೆ ಇದೆ! ಕಂಗೇರಿಯಲ್ಲಿ 40 ಕೋಟಿಯ ಫಾರ್ಮ್ ಹೌಸ್!

ರಾಮಯ್ಯ ಕಾಲೇಜಿನಲ್ಲಿ 25 ಕೋಟಿ ಮೌಲ್ಯದ ಕಟ್ಟಡ! ಬೆಂಗಳೂರಿನಲ್ಲಿ ಮತ್ತೊಂದು ಬಂಗಲೆ! ಬಳ್ಳಾರಿ ರಸ್ತೆಯಲ್ಲಿ 17 ಎಕರೆ ಕೃಷಿ ಭೂಮಿ!ಬೆಂಗಳೂರಿನ ಇಂದಿರಾನಗರದಲ್ಲಿ ಮೂರು ಅಂತಸ್ತಿನ ಕಟ್ಟಡವಿದೆ!ಬೆಂಗಳೂರಿನ ಸದಾಶಿವನಗರದಲ್ಲಿ 2 ಬಂಗಲೆಗಳು!

ಮೇಲಿನವುಗಳ ಜೊತೆಗೆ ಮೈಸೂರಿನಲ್ಲಿರುವ ನಿಮ್ಮ ಕುಟುಂಬದ ಸದಸ್ಯರ ಹೆಸರಿನಲ್ಲಿರುವ ಆಸ್ತಿಗಳ ಪಟ್ಟಿಯನ್ನು ನಾನು ಓದಬಹುದೇ? ಗುಲ್ಬುರ್ಗಾ, ಚೆನ್ನೈ, ಗೋವಾ, ಪುಣೆ, ನಾಗ್ಪುರ, ಮುಂಬೈ ಮತ್ತು ದೆಹಲಿಯಲ್ಲಿ? ಒಟ್ಟಾರೆ ನಿಮ್ಮ ಆಸ್ತಿ ಮೌಲ್ಯ ಸಾವಿರಾರು ಕೋಟಿ ಮೌಲ್ಯ. ಈಗ ಮಲ್ಲಿಕಾರ್ಜುನ ಖರ್ಗೆ ಮುಖ ಸಪ್ಪೆ! ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

 

ಕೊಡಗಿನಲ್ಲಿ 800 ಎಕರೆ, ಬನ್ನೇರುಘಟ್ಟದಲ್ಲಿ 1200 ಎಕರೆ, ಇಂದಿರಾನಗರದಲ್ಲಿ ಭಾರೀ ಶಾಪಿಂಗ್ ಕಾಂಪ್ಲೆಕ್ಸ್, ಸದಾಶಿವ ನಗರದಲ್ಲಿ ಖರ್ಗೆ ಆಂಡ್ ಸನ್ಸ್‌ ಪ್ಯಾಲೆಸ್‌ ಎಂಬ ಪ್ರತಿಪಾದನೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಮಲ್ಲಿಕಾರ್ಜುನ ಖರ್ಗೆಯವರ ಆಸ್ತಿ ಮೌಲ್ಯ ಸಾವಿರರು ಕೋಟಿಯೇ? ಮಲ್ಲಿಕಾರ್ಜನ ಖರ್ಗೆ 2020ರಲ್ಲೊ ರಾಜ್ಯಸಭಾ ಚುನಾವಣೆಗೆ ಆಯ್ಕೆಯಾದಾಗ ಚುನಾವಣಾ ಆಯೋಗಕ್ಕೆ ನೀಡಿದ ಅಫಿಡವಿಟ್‌ನಲ್ಲಿ ಆಸ್ತಿಯ ವಿವರ ಏನಿದೆ ಎಂದು ತಿಳಿದುಕೊಳ್ಳೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು 2020 ರ ರಾಜ್ಯಸಭಾ ಚುನಾವಣಾ ವೇಳೆ ಖರ್ಗೆಯವರು ತಮ್ಮ ಆಸ್ತಿಯ ವಿವರಗಳನ್ನು ಅಫಿಡವಿಟ್‌ನಲ್ಲಿ, ಘೋಷಿಸಿಕೊಂಡಿದ್ದಾರೆ. ಅಫಿಡವಿಟ್ ಪ್ರಕಾರ ಖರ್ಗೆ ಅವರ ಕುಟುಂಬದ ಆಸ್ತಿ ಮೌಲ್ಯ ₹ 20.12 ಕೋಟಿ.

ಖರ್ಗೆ ಅವರು ಚುನಾವಣಾ ಆಯೋಗಕ್ಕೆ ನೀಡಿರುವ ಆಸ್ತಿಯ ವಿವರಗಳ ಪ್ರಕಾರ ಖರ್ಗೆ ಅವರ ಬಳಿ ನಗದು ಸೇರಿ ನಾನಾ ಉಳಿತಾಯ ಖಾತೆ, ಠೇವಣಿ, ಬಾಂಡ್‌ನಲ್ಲಿಒಟ್ಟು 2,82,20,805 ರೂ. ಇದ್ದು, 10.71 ಲಕ್ಷ ರೂ. ಮೌಲ್ಯದ ಚಿನ್ನಾಭರಣವಿದೆ. ಜತೆಗೆ, ಇವರಿಗೆ 10 ಲಕ್ಷ ರೂ. ಸಾಲವಿದೆ. ಇನ್ನು ರಾಧಾ ಭಾಯಿ ಅವರ ಬಳಿ 81,29,618 ರೂ. ಹಣವಿದ್ದು, 33.81 ಲಕ್ಷ ರೂ. ಮೌಲ್ಯದ ಆಭರಣಗಳಿವೆ. ಇನ್ನು ಇವರು ವಾಣಿಜ್ಯ ಆಸ್ತಿ ಬಾಡಿಗೆ ಮುಂಗಡ ಸೇರಿ ಒಟ್ಟು 13.75 ಲಕ್ಷ ರೂ. ಸಾಲ ಹೊಂದಿದ್ದಾರೆ.

ಇನ್ನು ಖರ್ಗೆ ಅವರ ಸ್ವಂತ ಹೆಸರಿನಲ್ಲಿ 7,01,18,724 ರೂ. ಮೌಲ್ಯದ ಸ್ಥಿರ ಮತ್ತು ಚರಾಸ್ತಿ ಇದ್ದು, ಪತ್ನಿ ರಾಧಾ ಭಾಯಿ ಹೆಸರಿನಲ್ಲಿ 8,47,56,545 ರೂ. ಮೌಲ್ಯದ ಹಾಗೂ ಅವಿಭಕ್ತ ಕುಟುಂಬದ ಸದಸ್ಯರಾಗಿ ಖರ್ಗೆ ಅವರು 83.95 ಲಕ್ಷ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆಅದನ್ನು ಇಲ್ಲಿ ನೋಡಬಹುದು.

ಮಲ್ಲಿಕಾರ್ಜುನ ಖರ್ಗೆ ಮತ್ತು ಪತ್ನಿ ಹೆಸರಲ್ಲಿ ಇರುವ ಆಸ್ತಿ?

ಬೆಂಗಳೂರಿನ ಮಠದಹಳ್ಳಿಯಲ್ಲಿ ಪತ್ನಿ ಹೆಸರಿನಲ್ಲಿ 1.17 ಕೋಟಿ ರೂ. ಮೌಲ್ಯದ ಆಸ್ತಿ. ಆರ್‌ಎಂವಿ 2ನೇ ಹಂತದಲ್ಲಿ 4.83 ಕೋಟಿ ರೂ. ಮೌಲ್ಯದ ಮನೆ. ಕಲಬುರಗಿ ಬಸವನಗರದಲ್ಲಿ 46.35 ಲಕ್ಷ ರೂ. ಮೌಲ್ಯದ ಮನೆ. ಬೆಂಗಳೂರಿನ ಕಮಿಷನರೇಟ್‌ ರಸ್ತೆಯಲ್ಲಿ 1.79 ಕೋಟಿ ರೂ. ಮೌಲ್ಯದ ವಾಣಿಜ್ಯ ಆಸ್ತಿ. ರಾಧಾ ಭಾಯಿ ಹೆಸರಿನಲ್ಲಿ ಬೆಂಗಳೂರಿನ ಆರ್‌.ಟಿ.ನಗರದಲ್ಲಿ 1.17 ಕೋಟಿ ರೂ. ಮೌಲ್ಯದ ವಾಣಿಜ್ಯ ಆಸ್ತಿ. ಸದಾಶಿವನಗರದಲ್ಲಿಖರ್ಗೆ ಮತ್ತು ಪತ್ನಿ ಜಂಟಿ ಪಾಲುದಾರಿಕೆಯಲ್ಲಿ ತಲಾ 1.23 ಕೋಟಿ ರೂ. ಮೌಲ್ಯದ ಆಸ್ತಿ. ಚಿತ್ತಾಪುರ ತಾಲೂಕಿನ ಗುಂಡಗುರ್ತಿ ಗ್ರಾಮದಲ್ಲಿ ಕುಟುಂಬದ ಒಟ್ಟು 6.20 ಎಕರೆ ಕೃಷಿ ಜಮೀನು. ಪತ್ನಿ ಹೆಸರಿನಲ್ಲಿಇದೇ ಗ್ರಾಮದಲ್ಲಿ ಒಟ್ಟು 25 ಎಕರೆ ಕೃಷಿ ಜಮೀನು. ಗುಂಡಗುರ್ತಿಯಲ್ಲಿ ಖರ್ಗೆ ಹೆಸರಿನಲ್ಲಿ 1.08 ಎಕರೆ ಕೃಷಿಯೇತರ ಜಮೀನು ಹೊಂದಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ತಾವು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಅವರ ಒಟ್ಟು ಆಸ್ತಿ ಮೌಲ್ಯ ₹ 20.12 ಕೋಟಿ ಎಂಬುದು ಸ್ಪಷ್ಟವಾಗಿದೆ.

ಒಂದು ವೇಳೆ ಪ್ರಧಾನಿ ಮೋದಿ ಸಂಸತ್‌ನಲ್ಲಿ ಖರ್ಗೆಯವರ ವಿಚಾರವನ್ನು ಪ್ರಸ್ತಾಪ ಮಾಡಿರುತ್ತಿದ್ದರೆ, ಅವರೇ ಅದರ ವಿರುದ್ದ ತನಿಖೆ ಮಾಡಿಸಬಹುದಲ್ಲವೇ? ಅಂದರೆ ಮಲ್ಲಿಕಾರ್ಜುನ ಖರ್ಗೆ ಆಧಾಯಮೀರಿ ಆಸ್ತಿ ಹೊಂದಿರುವ ವಿಚಾರ ಪ್ರಧಾನಿ ಮೋದಿಗೆ ತಿಳಿದಿದ್ದರೂ ಯಾಕೆ ಸುಮ್ಮನಿದ್ದಾರೆ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಹಾಗಾಗಿ ಇಂತಹ ಯಾವುದೇ ವಿಚಾರಗಳ ಬಗ್ಗೆ ಸಂಸತ್‌ನಲ್ಲಿ ಚರ್ಚೆಯಾಗಿದೆ ಎಂಬುದು ಸುಳ್ಳು.

ಸುಳ್ಳು : ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೊಡಗಿನಲ್ಲಿ 800 ಎಕರೆ, ಬನ್ನೇರುಘಟ್ಟದಲ್ಲಿ 1200 ಎಕರೆ, ಇಂದಿರಾನಗರದಲ್ಲಿ ಭಾರೀ ಶಾಪಿಂಗ್ ಕಾಂಪ್ಲೆಕ್ಸ್, ಸದಾಶಿವ ನಗರದಲ್ಲಿ ಖರ್ಗೆ ಆಂಡ್ ಸನ್ಸ್‌ ಪ್ಯಾಲೆಸ್‌, ರಾಮಯ್ಯ ಕಾಲೇಜಿನಲ್ಲಿ 25 ಕೋಟಿ ಮೌಲ್ಯದ ಕಟ್ಟಡ! ಬೆಂಗಳೂರಿನಲ್ಲಿ ಮತ್ತೊಂದು ಬಂಗಲೆ! ಬಳ್ಳಾರಿ ರಸ್ತೆಯಲ್ಲಿ 17 ಎಕರೆ ಕೃಷಿ ಭೂಮಿ

ಸತ್ಯಾಂಶ : 2020 ರ ರಾಜ್ಯಸಭಾ ಚುನಾವಣಾ ವೇಳೆ ಭಾರತೀಯ ಚುನಾವಣಾ ಆಯೋಗಕ್ಕೆ ನೀಡಿರುವ ಅಫಿಡವಿಟ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ  ತಮ್ಮ ಕುಟುಂಬದ ಆಸ್ತಿ ವಿವರಗಳನ್ನು ಘೋಷಿಸಿಕೊಂಡಿದ್ದುಅದರ ಒಟ್ಟು ಮೌಲ್ಯ ₹ 20.12 ಕೋಟಿ ಮತ್ತು ಸಾಲ ₹ 23.75 ಲಕ್ಷ ಎಂಬುದು ವಾಸ್ತವ

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಖರ್ಗೆ ವಿರುದ್ದ ಜಾತಿ ತಾರತಮ್ಯ ಮಾಡಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ ಬಿಜೆಪಿ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights