ಸರ್ಕಾರದ ಕೊರೊನಾ ಟಫ್ ರೂಲ್ಸ್ ವಿರುದ್ಧ ಜಿಮ್, ಥಿಯೇಟರ್ ಮಾಲೀಕರ ವಿರೋಧ..!

ಕೊರೊನಾ ತಡೆಗೆ ಸರ್ಕಾರ ಟಫ್ ರೂಲ್ಸ್ ಜಾರಿಗೆ ತಂದಿದೆ. ಇಂದಿನಿಂದ ಥಿಯೇಟರ್ ಗಳಲ್ಲಿ ಶೇ.50ರಷ್ಟು ವೀಕ್ಷಕರಿಗೆ ಮಾತ್ರ ಸಿನಿಮಾ ವೀಕ್ಷಣೆಗೆ ಅವಕಾಶ ನೀಡಬೇಕು ಎಂದು ಸರ್ಕಾರ ಆದೇಶಿದೆ. ಇದನ್ನು ಪ್ರಶ್ನಿಸಿ ಸರ್ಕಾರಕ್ಕೆ ಫಿಲ್ಮ ಚೇಂಬರ್ ಜೊತೆಗೆ ಕೆಲ ನಿರ್ದೇಶಕರು 50% ಆದೇಶ ವಾಪಸ್ ಪಡೆಯಲು ಮನವಿ ಮಾಡಲಿದ್ದಾರೆ.

ಹೌದು…. ಕೊರೊನಾ ತಡೆಗೆ ನಿನ್ನೆ ಸರ್ಕಾರ ಹೊರಡಿಸಿದ ಆದೇಶ ಕೆಲವರ ಕೆಂಗಣ್ಣಿಗೆ ಒಳಗಾಗಿದೆ. ಜಿಮ್,ಪಾರ್ಟಿ ಹಾಲ್ ಗಳು,ಈಜು ಕೊಳ ಗಳು ಮುಚ್ಚಬೇಕು ಎನ್ನುವ ಮಾರ್ಗಸೂಚಿ ಪ್ರಶ್ನಿಸಿ ಜಿಮ್ ಮಾಲೀಕರೂ ಸರ್ಕಾರದ ವಿರುದ್ಧ ಧ್ವನಿಎತ್ತಲಿದ್ದಾರೆ.

ಕೋವಿಡ್-19 ಸೋಂಕಿನ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯದಲ್ಲಿ ಕೈಗೊಂಡ ಕ್ರಮಗಳು.02-04-2021
👉 ವಿದ್ಯಾಗಮವೂ ಸೇರಿದಂತೆ 6-9 ನೇ ತರಗತಿಗಳನ್ನು ಸ್ಥಗಿತಗೊಳಿಸಲಾಗಿದೆ.10,11 ಮತ್ತು 12 ತರಗತಿಗಳು ಪ್ರಸ್ತುತ ಇರುವಂತೆ ಮುಂದುವರೆಯುತ್ತವೆ
👉 ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವಿಲ್ಲ
👉 ಉನ್ನತ ತರಗತಿಗಳನ್ನು ಹೊರತು ಪಡಿಸಿ ಎಲ್ಲ ತರಗತಿಗಳು ಸ್ಥಗಿತ
👉 ಧಾರ್ಮಿಕ ಸ್ಥಳಗಳಲ್ಲಿ ವೈಯಕ್ತಿಕ ಪ್ರಾರ್ಥನೆ ಗೆ ಅವಕಾಶ,ಗುಂಪಿನಲ್ಲಿ ಅವಕಾಶವಿಲ್ಲ
👉 ಜಿಮ್,ಪಾರ್ಟಿ ಹಾಲ್ ಗಳು,ಈಜು ಕೊಳ ಗಳು ಮುಚ್ಚಲ್ಪಟ್ಟಿರುತ್ತವೆ
👉 ಯಾವುದೇ ಮುಷ್ಕರ, ಧರಣಿ,Rally ಗಳು ನಿಷೇಧಿಸಲಾಗಿದೆ
👉 ಸಾರ್ವಜನಿಕ ಸಾರಿಗೆಗಳಲ್ಲಿ ನಿಗದಿಪಡಿಸಿರುವ ಆಸನದ ವ್ಯವಸ್ಥೆ ಮೀರುವಂತಿಲ್ಲ
👉 ಕಛೇರಿಗಳು ಹಾಗೂ ಇತರ ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ ಸಾಧ್ಯವಾದಷ್ಟು ಮನೆಯಿಂದಲೇ ಕರ್ತವ್ಯ ನಿರ್ವಹಿಸಲು ಅಭ್ಯಾಸ/ ವ್ಯವಸ್ಥೆ ಪಾಲಿಸುವುದು

ಆದರೆ ಮಾರ್ಕೇಟ್, ಬಸ್, ಜಿಮ್ ಗಳಲ್ಲಿ ಕೊರೊನಾ ಟಫ್ ರೂಲ್ಸ್ ಫಾಲೋ ಮಾಡುತ್ತಿಲ್ಲ. ಸಾಮಾಜಿಕ ಅಂತರವಿಲ್ಲ, ಮಾಸ್ಕ್ ಹಾಕುತ್ತಿಲ್ಲ, ಸ್ಯಾನಿಟೈಸರ್ ಅಂತೂ ಬಳಸುತ್ತಲೇ ಇಲ್ಲ.

ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಜನರಿಗೆ ಇದು ಗಾಯದ ಮೇಲೆ ಬರೆ ಹಾಕಿದಂತಾಗಿದೆ. ಜನ ಇನ್ನೇನು ದುಡಿಮೆ ಮಾಡಿ ಜೀವನ ಸುಧಾರಿಸಿಕೊಳ್ಳಬೇಕು ಅನ್ನೋ ಹೊತ್ತಲ್ಲಿ ಸರ್ಕಾರ ಮತ್ತೆ ಇಂಥ ನಿಯಮ ಜಾರಿಗೆ ತಂದರೆ ಜನ ಒಂದು ಹೊತ್ತಿನ ಊಟಕ್ಕೂ ಪರದಾಡುವಂತ ಸ್ಥಿತಿ ನಿರ್ಮಾಣವಾಗೋದ್ರಲ್ಲಿ ನೋಡೌಟ್.  ಹೀಗಾಗಿ ಕೊರೊನಾ ತಡೆ ರೂಲ್ಸ್  ಜಾರಿಗೆ ತಂದ ಸರ್ಕಾರದ ವಿರುದ್ಧ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights