ಕೊರೊನಾ ಟಫ್ ರೂಲ್ಸ್ : ಸರ್ಕಾರದ ಆದೇಶಕ್ಕೆ ಬಿಎಂಟಿಸಿ ಡೋಂಟ್ ಕೇರ್…!

ರಾಜ್ಯದಲ್ಲಿ ಕೊರೊನಾ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಬಿಎಂಟಿಸಿ ಸೀಟ್ ಇರುವಷ್ಟು ಮಾತ್ರ ಪ್ರಯಾಣಿಕರು ಪ್ರಯಾಣ ಮಾಡಲು ಸರ್ಕಾರ ಆದೇಶಿಸಿದೆ. ಆದರೆ ಸರ್ಕಾರದ ರೂಲ್ಸ್ ಗೆ ಬಿಎಂಟಿಸಿ ಡೋಂಟ್ ಕೇರ್ ಎನ್ನುತ್ತಿದೆ.

ಹೌದು… ನಿನ್ನೆ ಸಿಎಂ ನೇತೃತ್ವದ ಸಭೆಯಲ್ಲಿ ಕೊರೊನಾ ತಡೆಗೆ ಕೆಲ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಜಾರಿಗೆ ತರಲಾಗಿದೆ. ಈ ನಿಯಮಗಳನ್ನು ಇಂದಿನಿಂದಲೇ ಜಾರಿಗೆ ತರಲು ಸೂಚಿಸಲಾಗಿತ್ತು. ಆದರೆ ಇಂದು ಬೆಳಿಗ್ಗೆ ಸಾರ್ವಜನಿಕರು ಎಂದಿನಂತೆ ಓಡಾಡುತ್ತಿರುವ ದೃಶ್ಯಗಳು ಕಂಡುಬಂದಿದೆ.

ಬಿಎಂಟಿಸಿಯಲ್ಲಿ ನಿಂತು ಪ್ರಯಾಣಿಸುವುದಕ್ಕೆ ನಿರ್ಬಂಧ ಹೇರಲಾಗಿತ್ತು. ಕೊರೊನಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎನ್ನುವ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. 20 ನೇ ತಾರಿಖುವರೆಗೂ ಜನ ತುಂಬಾ ಜಾಗರೂಕರಾಗಿರಲು ಸರ್ಕಾರ ಸೂಚಿಸಿದೆ. ಆದರೂ ಬಿಎಂಟಿಸಿಯಲ್ಲಿ ಹೆಚ್ಚುವರಿ ಪ್ರಯಾಣಿಕರನ್ನು ಹೊತ್ತೊಯ್ಯಲಾಗುತ್ತಿದೆ.

ಬಸ್ ಗಳಲ್ಲಿ ಕೊರೊನಾ ನಿಯಮಗಳನ್ನು ಪಾಲಿಸಲಾಗುತ್ತಿಲ್ಲ. ಬಿಎಂಟಿಸಿ ಎಷ್ಟು ಆಸನಗಳಿವೆಯೋ ಅಷ್ಟೇ ಪ್ರಯಾಣಿಕರು ಪ್ರಯಾಣಿಸಬೇಕು. ಹೆಚ್ಚುವರಿ ಪ್ರಯಾಣಿಕರನ್ನು ಕರೆದುಕೊಂಡು ಹೋಗಬಾರದು ಎನ್ನುವ ಆದೇಶ ಪಾಲಿಸಿದಂತೆ ಇಂದು ಬೆಳಿಗ್ಗೆ ಬಸ್ ಗಳಲ್ಲಿ ಕಾಣಲೇ ಇಲ್ಲ. ಎಂದಿನಂತೆ ಜನ ಓಡಾಡುತ್ತಿದ್ದಾರೆ.

ಸರ್ಕಾರಿ ಬಸ್ ಗಳಲ್ಲಿ ನಿಗಧಿತ ಆಸನಗಳನ್ನು ಮೀರಿ ಜನ ಹತ್ತುತ್ತಿದ್ದಾರೆ. ಸೀಟ್ ಇರುವಷ್ಟೇ ಬಸ್ ಫಿಲ್ ಮಾಡಬೇಕು. ಆದರೆ ಕೆಲ ಕಂಡಕ್ಟರ್ ಗಳಿಗೂ ಈ ಬಗ್ಗೆ ಮಾಹಿತಿಯೇ ಇಲ್ಲ. ರೂಲ್ಸ್ ಜಾರಿಗೆಯಾಗಿ ಇಂದು ಮೊದಲ ದಿನ ಹೀಗಾಗಿ ಜನರಿಗೂ ಹಾಗೂ ಬಸ್ ಕಂಡಕ್ಟರ್ ಗಳಿಗೂ ಈ ಬಗ್ಗೆ ಮಾಹಿತಿ ಇಲ್ಲ. ಹೀಗಾಗಿ ಜನ ಕೊರೊನಾ ರೂಲ್ಸ್ ಫಾಲೋ ಮಾಡುತ್ತಿಲ್ಲ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights