ಪ್ರಧಾನಿ ಮೋದಿ ಬೀದಿ ಪೋಕರಿಯಂತೆ ಮಾತನಾಡುತ್ತಾರೆ: ಸಂಸದೆ ಮೊಹುವಾ ಮೊಹಿತ್ರಾ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ‘ದೀದಿ ಓ ದೀದಿ’ ಎಂದು ಕರೆದು ಪ್ರಧಾನಿ ಮೋದಿ ವ್ಯಂಗ್ಯ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಟಿಎಂಸಿ ಸಂಸದೆ ‘ಇದು ಬೀದಿ ಪೋಕರಿ ಮಾತನಾಡುವ ರೀತಿ’ ಎಂದು ಗುರುವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ನಾವು ಬಂಗಾಳದಲ್ಲಿ ‘ರಾಕ್-ಎರ್ ಚೆಲ್ಲೇ’ ಎಂದು ಕರೆಯುತ್ತೇವೆ, ಇದರರ್ಥ ಬೀದಿ ಬದಿಯ ಪೋಕರಿ ಎಂದು. ಇಂತವರು ರಸ್ತೆ ಬದಿಯ ಕಾಂಪೌಂಡ್ ಮೇಲೆ ಕುಳಿತು ಅಲ್ಲಿ ನಡೆದುಕೊಂಡು ಹೋಗುವ ಮಹಿಳೆಯರಿಗೆ ಛೇಡಿಸುತ್ತಾ, ‘ದೀದಿ ಓ ದೀದಿ’ ಎಂದು ಕರೆಯುತ್ತಾರೆ. ಪ್ರಧಾನ ಮಂತ್ರಿ ಕೂಡಾ ಇದನ್ನೇ ಮಾಡುತ್ತಿದ್ದಾರೆ” ಎಂದು ಮೊಹುವಾ ಮೊಹಿತ್ರಾ ಹೇಳಿದ್ದಾರೆ.

“ಲಕ್ಷಾಂತರ ಜನರು ಸೇರಿರುವ ರ್‍ಯಾಲಿಯಲ್ಲಿ ಪ್ರಧಾನಿ, ಮುಖ್ಯಮಂತ್ರಿಗೆ ಅಪಹಾಸ್ಯದಿಂದ ‘ದೀದಿ ಒ ದೀದಿ’ ಎಂದು ಹೇಳುತ್ತಾರೆ. ನೀವು ಅದನ್ನು ಹೇಳುತ್ತೀರಾ? ಅವರು ತನ್ನ ಯಾಗೆ ತಾಯಿಗೆ ಹೇಳುತ್ತಾರೆಯೇ? ಅವರು ಅದನ್ನು ತನ್ನ ಸಹೋದರಿಗೆ ಹೇಳುತ್ತಾರೆಯೇ? ಅವರು ತನ್ನ ವಿಚ್ಚೇದಿತ ಹೆಂಡತಿಯ ಬಗ್ಗೆ ಹೇಳುತ್ತಾರೆಯೇ? ಅದು ಹೇಗೆ ಸರಿಯಾಗುತ್ತದೆ? ಈ ಪ್ರಧಾನ ಮಂತ್ರಿ ನಮಗೆ ಅಲಂಕಾರಿಕತೆಯ ಬಗ್ಗೆ ಕಲಿಸಲಿದ್ದಾರೆಯೇ? ಇದು ಪ್ರಧಾನ ಮಂತ್ರಿಯೊಬ್ಬರು ಮುಖ್ಯಮಂತ್ರಿಯೊಬ್ಬರಿಗೆ ಹೇಳುವ ಕೀಳು ಮಟ್ಟದ ಮತ್ತು ಅತ್ಯಂತ ಕೆಟ್ಟ ಮಾತಾಗಿದೆ” ಎಂದು ಮೊಹುವಾ ಮಯಿತ್ರಾ ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಗುರುವಾರ ಎರಡನೆ ಹಂತದ ಮತದಾನ ಪ್ರಕ್ರಿಯೆ ನಡೆಯಿತು. ರಾಜ್ಯದಲ್ಲಿ ಒಟ್ಟು ಎಂಟು ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.

ಇದನ್ನೂ ಓದಿ: ಮರಾಠರನ್ನು ಆಕ್ರಮಕಾರರು ಎಂದ ಗೋವಾ ಟೂರಿಸಂ ಇಲಾಖೆ; ವಿರೋಧಕ್ಕೆ ಮಣಿದು ಕ್ಷಮೆಯಾಚಿಸಿದೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights