3 ವರ್ಷಗಳ ಹಿಂದೆಯೇ ಸತ್ತ ವ್ಯಕ್ತಿಗೆ ಲಸಿಕೆ ಹಾಕಿದ ಗುಜರಾತ್‌ ಸರ್ಕಾರ; ಮೆಸೆಜ್‌ ನೋಡಿ ಕುಟುಂಬಸ್ಥರು ಶಾಕ್‌!

ದೇಶಾದ್ಯಂತ ಕೊರೊನಾ ವಿರುದ್ದ ಲಸಿಕೆಯನ್ನು ನೀಡಲಾಗುತ್ತಿದೆ. ಇತ್ತ ದೇಶದ ಜನಸಂಖ್ಯೆಗೆ ಅಗತ್ಯವಿರುವಷ್ಟು ಲಸಿಕೆ ಸಿಗದೆ, ಅಭಾವವು ಉಂಟಾಗಿದೆ. ಇಂತಹ ಸಂದರ್ಭದಲ್ಲಿ ಮೋದಿಯವರ ತವರು ರಾಜ್ಯ ಗುಜರಾತ್‌ನಲ್ಲಿ ಮೂರು ವರ್ಷಗಳ ಹಿಂದೆಯೇ ಸತ್ತ ವ್ಯಕ್ತಿಗೂ ಲಸಿಕೆ ಹಾಕಲಾಗಿದೆ.

ಹರದಾಸ್ ಭಾಯ್ ಕರಿಂಗಿಯಾ ಎಂಬ ವ್ಯಕ್ತಿ 2018ರಲ್ಲೇ ಮರಣ ಹೊಂದಿದ್ದರು. ಆತ ಸತ್ತಿರುವ ಮರಣ ಪ್ರಮಾಣ ಪತ್ರವೂ ಕುಟುಂಬಸ್ಥರ ಬಳಿ ಇದೆ. ಆದರೆ, ಇದೀಘ ಕರಿಂಗಿಯಾ ಅವರಿಗೆ ಲಸಿಕೆ ನೀಡಲಾಗಿದೆ ಎಂದು ಮನೆಯವರ ಮೊಬೈಲ್‌ಗೆ ಮೇ 3ರಂದು ಮೆಸೇಜ್ ಬಂದಿದೆ. ಅಲ್ಲದೆ, ಲಸಿಕೆ ಪ್ರಮಾಣ ಪತ್ರವನ್ನು ನೀಡಲಾಗಿದೆ.

ತಮ್ಮ ಮೊಬೈಲ್‌ಗೆ ಬಂದ ಮೆಸೇಜ್‌ ನೋಡಿ ಮನೆಯವರು ಶಾಕ್ ಆಗಿದ್ದಾರೆ. ಕುಟುಂಬಸ್ಥರು ಮರಣಹೊಂದಿದ್ದ ವ್ಯಕ್ತಿಯ ಮರಣ ಪ್ರಮಾಣ ಪತ್ರವನ್ನು ಮಾಧ್ಯಮ ಮುಂದೆ ಇಟ್ಟು, ಸತ್ತ ವ್ಯಕ್ತಿಗೆ ಲಸಿಕೆ ನೀಡುವುದಾಗಿ ಮೆಸೇಜ್‌ ಬಂದಿದೆ. ಇದು ಹೇಗೆ ಸಾಧ್ಯ ಎಂಬುದು ನಮಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.

ಗುಜರಾತ್‌ನಲ್ಲಿ ಈ ರೀತಿಯ ಘಟನೆ ಇದೇ ಮೊದಲಲ್ಲ. ಈ ಹಿಂದೆ ದಾಹೋದ್ ನ ನರೇಶ್ ಎಂಬುವವರಿಗೆ ಅವರ ತಂದೆಗೆ ಲಸಿಕೆ ನೀಡಲಾಗಿದೆ ಎಂದು ಮೆಸೇಜ್ ಬಂದಿತ್ತು.ಆದರೆ, ಅವರ ತಂದೆ 2011 ರಲ್ಲೆ ನಿಧನರಾಗಿದ್ದರಂತೆ.

ಇದನ್ನೂ ಓದಿ:  ಪತ್ರಕರ್ತನ ವಿರುದ್ಧ ದೇಶದ್ರೋಹ ಪ್ರಕರಣ: ಎಫ್‌ಐಆರ್‌ ರದ್ದುಗೊಳಿಸಿ ಸುಪ್ರೀಂ ಆದೇಶ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights