ಪ್ರತಿ ತಿಂಗಳು ಕಾರ್ಮಿಕರ ಖಾತೆಗೆ ಸರ್ಕಾರದಿಂದ 7,500 ರೂ ಜಮೆ ಮಾಡಿ: ಸೋನಿಯಾ ಗಾಂಧಿ

ವಲಸೆ ಕಾರ್ಮಿಕರ ಸಂಕಷ್ಚಗಳನ್ನು ಪ್ರಧಾನಿ ನರೇಂದ್ರ ಮೋದಿ ಆಲಿಸುತ್ತಿಲ್ಲ, ಅವರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ, ಸರ್ಕಾರದಿಂದ ವಲಸೆ ಕಾರ್ಮಿಕರಿಗೆ ಸರಿಯಾದ ನೆರವು ಸಿಗುತ್ತಿಲ್ಲ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪಿಸಿದ್ದಾರೆ.

ಮುಂದಿನ ಆರು ತಿಂಗಳುಗಳ ಕಾಲ ವಲಸೆ ಕಾರ್ಮಿಕರಿಗೆ ಸರ್ಕಾರದಿಂದ ಪ್ರತಿ ತಿಂಗಳು 7,500 ರರೂ ಹಣ ಕೊಟ್ಟು ಅವರ ಬದುಕನ್ನು ಭದ್ರಗೊಳಸಲು ನೆರವಾಗಬೇಕು ಎಂದು ಸೋನಿಯಾಗಾಂಧಿ ಆಗ್ರಹಿಸಿದ್ದಾರೆ.

ಕಳೆದ 2 ತಿಂಗಳಿಂದ  ಲಾಕ್ ಡೌನ್ ನಿಂದಾಗಿ ಅಪಾರ ಪ್ರಮಾಣದ ಸಮಸ್ಯೆಗಳು ಉಂಟಾಗಿವೆ, ಆರ್ಥಿಕ ವ್ಯವಸ್ಥೆಯಲ್ಲಿ  ಅನೇಕ ತೊಂದರೆಗಳು ಉಂಟಾಗಿದೆ. ಸ್ವಾತಂತ್ರ್ಯಾನಂತರ ಭಾರತದಲ್ಲಿ ಇದೇ ಮೊದಲ ಬಾರಿಗೆ ವಲಸೆ ಕಾರ್ಮಿಕರಿಗೆ ಇಷ್ಟು ದೊಡ್ಡ ಪ್ರಮಾಣದ ಸಂಕಷ್ಟ, ನೋವು ಮತ್ತು ಅವ್ಯವಸ್ಥೆ ಉಂಟಾಗಿದೆ ಎಂದು ಆರೋಪಿಸಿದ್ದಾರೆ.

ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ, ಅನೇಕ ಕಾರ್ಖಾನೆಗಳು ಮುಚ್ಚಿವೆ. ಇಂತಹ ಸಂದರ್ಭದಲ್ಲಿ ಸರ್ಕಾರ ಕಾಳಜಿಯಿಂದ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights