ಇಸ್ರೇಲ್ ಸರ್ಕಾರ ಪತನ ಸಾಧ್ಯತೆ; ಹೊಸ ಸರ್ಕಾರ ರಚನೆಗೆ ವಿಪಕ್ಷಗಳ ಸಿದ್ದತೆ!

ಇಸ್ರೇಲ್‌ನಲ್ಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಸರ್ಕಾರ ಉರುಳುವು ಸಾಧ್ಯತೆ ಹೆಚ್ಚಾಗಿದ್ದು, ನೆತನ್ಯಾಹು ಅವರ ವಿರೋಧಿ ನಾಯಕರು ಮೈತ್ರಿ ಮಾಡಿಕೊಂಡು ಹೊಸ ಒಕ್ಕೂಟ ಸರ್ಕಾರವನ್ನು ರಚನೆ ಮಾಡಲು ಮುಂದಾಗಿದ್ದಾರೆ.

ಪ್ರಮುಖ ವಿರೋಧ ಪಕ್ಷವಾದ ಯೆಸ್‌ ಅಟೈಡ್ ಪಕ್ಷದ ನಾಯಕ ಯೇರ್‌ ಲ್ಯಾಪಿಡ್ ಮತ್ತು ಯೆಮಿನ ಪಕ್ಷದ ನಾಯಕ, ಮಾಜಿ ರಕ್ಷಣಾ ಸಚಿವ ನಫ್ತಾಲಿ ಬೆನೆಟ್‌ ಅವರು ಬುಧವಾರ ಮಧ್ಯರಾತ್ರಿ ಸಭೆ ನಡೆಸಿದ್ದು, ಹೊಸ ಒಕ್ಕೂಟ ರಚಿಸುವ ವಿಚಾರವನ್ನು ಪ್ರಕಟಿಸಿದ್ದಾರೆ. ಈ ಮೂಲಕ ಎರಡು ವರ್ಷಗಳಲ್ಲಿ ದೇಶದಲ್ಲಿ ಮತ್ತೆ ಚುನಾವಣೆ ನಡೆಯುವುದು ತಪ್ಪಲಿದೆ ಎಂದು ಅವರು ಹೇಳಿದ್ದಾರೆ.

ಮುಂದೆ ರಚೆನೆಯಾಗುವ ಒಕ್ಕೂಟ (ಮೈತ್ರಿ) ಸರ್ಕಾರವು ತನ್ನ ಪರ ಮತ ಹಾಕಿದ ಮತ್ತು ಹಾಕದಿರುವ ಇಸ್ರೇಲ್‌ನ ಎಲ್ಲಾ ನಾಗರಿಕರ ಪರವಾಗಿ ಕೆಲಸ ಮಾಡುತ್ತದೆ. ಇಸ್ರೇಲ್ ಸಮಾಜವನ್ನು ಒಂದುಗೂಡಿಸಲು ಎಲ್ಲ ರೀತಿಯಲ್ಲೂ ಕೆಲಸ ಮಾಡಲಿದೆ’ ಎಂದು ಲ್ಯಾಪಿಡ್ ಹೇಳಿದ್ದಾರೆ.

ಒಪ್ಪಂದದ ಪ್ರಕಾರ, ಹೊಸ ಸರ್ಕಾರದಲ್ಲಿ ಲ್ಯಾಪಿಡ್ ಮತ್ತು ಬೆನೆಟ್ ಪ್ರಧಾನಿ ಹುದ್ದೆಯನ್ನು ಪಾಳಿ ಆಧಾರದಲ್ಲಿ ವಿಭಜಿಸಿಕೊಳ್ಳಲಿದ್ದಾರೆ. ಬೆನೆಟ್ ಮೊದಲ ಎರಡು ವರ್ಷ ಸೇವೆ ಸಲ್ಲಿಸಲಿದ್ದಾರೆ. ನಂತರ ಲ್ಯಾಪಿಡ್ ಅಂತಿಮ ಎರಡು ವರ್ಷ ಕಾರ್ಯನಿರ್ವಹಿಸಲಿದ್ದಾರೆ.

ಸಂಸತ್‌ನಲ್ಲಿ ಮುಂದಿನ ವಾರ ಈ ಸಂಬಂಧ ಮತದಾನ ನಡೆಯಲಿದೆ.

ಇದನ್ನೂ ಓದಿ: KSRTC ಕಳೆದುಕೊಂಡ ಕರ್ನಾಟಕ; ಕೇರಳದ ಪಾಲಿಗೆ ಬ್ರಾಂಡ್‌ ನೇಮ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights