ಪ್ರಧಾನಿ ಮೋದಿ ನನ್ನ ಮಗನಿದ್ದಂತೆ: ಶಾಹಿನ್‌ಬಾಗ್ ಅಜ್ಜಿ ಬಿಲ್ಕೀಸ್!
ಶಾಹಿನ್‌ಬಾಗ್ ಪ್ರತಿಭಟನೆಯಲ್ಲಿ ತೊಡಗಿಸಿಕೊಂಡು “ಶಾಹಿನ್‌ಬಾಗ್ ಅಜ್ಜಿ” ಎಂದೇ ಖ್ಯಾತಿ ಪಡೆದಿರುವ ಬಿಲ್ಕೀಸ್ ಬಾನೊ ಅವರಿಗೆ “ಟೈಮ್ಸ್” ನಿಯತಕಾಲಿಕೆ ವರ್ಷದ ಪ್ರಭಾವಿ ಎಂದು ಕರೆದಿದೆ.
ಸಿಎಎ ವಿರೋಧಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಬಿಲ್ಕೀಸ್ ಅವರು “ಪ್ರಧಾನಿ ಮೋದಿಯವರೂ ನನ್ನ ಮಗನಿದ್ದಂತೆ” ಎಂದು ಹೇಳಿದ್ದಾರೆ.
ಸಿಎಎ ವಿರೋಧಿ ಹೋರಾಟದಲ್ಲಿ 82 ವರ್ಷದ ಬಿಲ್ಕಿಸ್ ಬಾನೊ ಅವರ ಪಾಲ್ಗೊಳ್ಳುವಿಕೆ ಗಮನ ಸೆಳೆದಿತ್ತು. ಮಹಿಳೆಯರೇ ಮುನ್ನಡೆಸಿದ್ದ ಈ ಹೋರಾಟವನ್ನು ಹತ್ತಿಕ್ಕಲು ಪ್ರಭುತ್ವ ನಾನಾ ರೀತಿಯ ಕಸರತ್ತು, ಸಂಚುಗಳನ್ನು ರೂಪಿಸಿತ್ತು. ಅದೆಲ್ಲವನ್ನೂ ಎದುರಿಸಿ ನಿಂತಿದ್ದ ಶಾಹಿನ್‌ಬಾಗ್ ಹೋರಾಟ ಕೊರೊನಾ ಲಾಕ್‌ಡೌನ್ ಹೇರಿಕೆಯ ವರೆಗೂ ಮುಂದುವರೆದಿತ್ತು.
ಈ ವಿಚಾರವಾಗಿ ಪ್ರಧಾನಿ ಮೋದಿಯವರು ಮಾತುಕತೆಗೆ ಆಹ್ವಾನಿಸಿದರೆ ಹೋಗುವಿರೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಬಿಲ್ಕೀಸ್ ಅವರು “ಖಂಡತಾ ಹೋಗುತ್ತೇನೆ”, ಮೋದಿಯವರೂ ನನಗೆ ಮಗನಿದ್ದಂತೆ ಎಂದಿದ್ದಾರೆ.
ನಾನು ಅವರಿಗೆ ತಾಯಿ ಇದ್ದಂತೆ. ಪ್ರಧಾನಿ ಮಾತುಕತೆಗೆ ಆಹ್ವಾನಿಸಿದರೆ ಖಂಡಿತಾ ಹೋಗುವೆ, ಎಂದಿದ್ದಾರೆ.
ಇದನ್ನೂ ಓದಿ: ಎಪಿಎಂಸಿ ಮಸೂದೆ: ಕಾರ್ಪೋರೇಟ್ ಕುಣಿಕೆಗೆ ರೈತರ ಕೊರಳು

