ನೋ ಗೂಗಲ್‌ ಪೇ – ನೋ ಫೋನ್‌ ಪೇ, ನೇರವಾಗಿ ಪಾಕೆಟ್‌ ಪೇ: ಟ್ರಾಫಿಕ್‌ ಪೊಲೀಸ್‌ ಅಂಚಾವತಾರ ವಿಡಿಯೋ ವೈರಲ್‌!

ಕೊರೊನಾ ಲಾಕ್‌ಡೌನ್‌ ನಂತರ ಎಲ್ಲಾ ನಗರಗಳಲ್ಲಿಯೂ ಟ್ರಾಫಿಕ್‌ ಪೊಲೀಸರ ಭೇಟೆ ಭರ್ಜರಿಯಾಗಿ ಸಾಗಿದೆ. ಬೆಳಂಬೆಳಗ್ಗೆಯಿಂದಲೇ ಕಾರ್ಯಾಚರಣೆಗೆ ಇಳಿಯುತ್ತಿರುವ ಟ್ರಾಫಿಕ್‌ ಪೊಲೀಸರು, ಬೈಕ್‌-ಕಾರುಗಳ ಸವಾರರ ಬೆನ್ನತ್ತುತ್ತಿದ್ದಾರೆ. ಸರ್ಕಾರಗಳ ದಂಡ ಎಂಬ ತುಘಲಕ್‌ ನಾಮದಿಂದ ತಪ್ಪಿಸಿಕೊಳ್ಳಲು ಸವಾರರು ಪೊಲೀಸರ ಕೈಗೆ ದುಡ್ಡು ತುರಿಕಿ ಎಸ್ಕೇಪ್‌ ಆಗುವ ಸಂಗತಿಗಳೂ ಹೆಚ್ಚುತ್ತಿವೆ.

ಈ ನಡುವೆ ಟ್ರಾಫಿಕ್‌ ಇಲಾಖೆಯ ಮಹಿಳಾ ಅಧಿಕಾರಿಯೊಬ್ಬರು ಲಂಚ ಪಡೆಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಅಗಿದ್ದು, ನೋ ಗೂಗಲ್‌ ಪೇ, ನೋ ಫೋನ್‌ ಪೇ, ಓನ್ಲೀ ಪಾಕೆಟ್‌ ಪೇ ಎಂಬ ಟ್ಯಾಗ್‌ ಲೈನ್‌ ಜೊತೆಗೆ ವೈರಲ್‌ ಆಗುತ್ತಿದೆ.

ವಿಡಿಯೋ ಎಲ್ಲಿಯದ್ದು ಎಂದು ಸ್ಪಷ್ಟವಾಗಿ ತಿಳಿದಿಲ್ಲ. ಆದರೆ, ವಿಡಿಯೋದಲ್ಲಿ ಸ್ಕೂಟಿಯ ಮೇಲೆ ಮಹಿಳೆಯೊಬ್ಬರು ಕುಳಿತಿದ್ದು, ಆಕೆಯ ಜೊತಗೆ ಬಂದ ಮತ್ತೊಬ್ಬ ಯುವತಿ ಮಹಿಳಾ ಟ್ರಾಫಿಕ್‌ ಆಧಿಕಾರಿಯ ಜೇಬಿಗೆ ದುಡ್ಡು ಹಾಕಿ ಹೋಗಿರುವ ದೃಶ್ಯಗಳು ಸೆರೆಯಾಗಿವೆ.

https://twitter.com/mat_jane_de_yar/status/1339741529200443392?s=20

​ ಇದೀಗ ಈ ವಿಡಿಯೋ  ಟ್ವಿಟರ್​, ವಾಟ್ಸಾಪ್​ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಇದು ಫೋನ್​ ಪೇಯೂ ಅಲ್ಲ, ಗೂಗಲ್​ ಪೇಯೂ ಅಲ್ಲ. ಬದಲಾಗಿ ನೇರವಾಗಿ ಪಾಕೆಟ್​ ಪೇ ಎಂದು ವ್ಯಂಗ್ಯವಾಡಿದ್ದಾರೆ.


ಇದನ್ನೂ ಓದಿ: ಸಿಎಂ ಪುತ್ರ ವಿಜಯೇ೦ದ್ರ ಹಣ ಸುಲಿಗೆ ಪ್ರಕರಣ; ನ್ಯಾಯಾಲಯಕ್ಕೆ ಸುಳ್ಳು ಹೇಳಿದ ಇನ್ಸ್‌ಪೆಕ್ಟರ್‌ ವಿರುದ್ಧ ಕ್ರಮ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights