ಬಾಸ್‌ನಂತೆ ರಾಂಪ್‌ ವಾಕ್ ಮಾಡಿದ ಪುಟ್ಟುಡುಗಿ : ಪುಟ್ಟಮ್ಮನ ಗಾಂಭೀರ್ಯತೆಗೆ ನೆಟ್ಟಿಗರು ಫುಲ್ ಖುಷ್!

ಸಾಮಾಜಿಕ ಜಾತಲಾಣಗಳಲ್ಲಿ ಸಾಕಷ್ಟು ವಿಡಿಯೋಗಳು ಹರಿದಾಡುತ್ತಲೇ ಇರುತ್ತವೆ. ಅದ್ರಲ್ಲಿ ಚಿಕ್ಕ ಮಕ್ಕಳ ದೊಡ್ಡ ಸಾಹಸದ ದೃಶ್ಯಗಳು ಬಹುಬೇಗನೆ ನೆಟ್ಟಿಗರ ಗಮನ ಸೆಳೆಯುತ್ತವೆ. ಇಂಥಹದ್ದೇ ಪುಟ್ಟ ಹುಡುಗಿ ರಾಂಪ್‌ ವಾಕ್ ಮಾಡುವ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ಕಣ್ಮನ ಸೆಳೆದಿದೆ.

ಈ ಪುಟ್ಟ ಬಾಲಕಿಯ ಹೆಸರು ಅಬ್ರಿಯಾನಾ. ನೋಡಲು ಗೊಂಬೆಯಂತೆ ಕಾಣುವ ಈ ಪುಟ್ಟಮ್ಮ ಬಾಸ್‌ನಂತೆ ಗಾಂಭೀರ್ಯತೆ ಹೆಜ್ಜೆ ಇಡುತ್ತಾ ರಾಂಪ್‌ ವಾಕ್ ಮಾಡುತ್ತಾಳೆ. ಅವಳ ನಡುಗೆಗೆ ತಕ್ಕಂತೆ ಹಿಂಬದಿಯಲ್ಲಿ ಮ್ಯೂಸಿಕ್ ಕೂಡ ಪ್ಲೇ ಮಾಡಲಾಗಿದೆ. ತಾನು ಹಾಕಿದ ಫ್ರಾಕ್ ಅನ್ನು ಹಾರಿಸುತ್ತಾ ಅತ್ತಿತ್ತ ಜನರ ಕಡೆ ನೋಡುವ ಈಕೆಗೆ ಕೇವಲ 5 ವರ್ಷ.

ಬಾಸ್‌ನಂತೆ ಸೊಂಟದ ಮೇಲೆ ಕೈ ಇಟ್ಟುಕೊಂಡು ವೇದಿಕೆ ಮೇಲೆ ಬರುತ್ತಾ ಅಬ್ರಿಯಾನಾ ನೋಡುಗರ ಗಮನ ಸೆಳೆದಿದ್ದಾಳೆ. ಆತ್ಮವಿಶ್ವಾಸದಿಂದ ರಾಂಪ್‌ ವಾಕ್ ಮಾಡಿದ ಅಬ್ರಿಯಾನಾ ವೀಡಿಯೋ ಟಿಕ್‌ಟಾಕ್‌ನಲ್ಲಿ 18 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.

ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೀಕ್ಷಿಸಿದ ಕೆಲವರು ಈಕೆಯನ್ನು ದೇವತೆಗೆ ಹೋಲಿಸಿದ್ದಾರೆ. ಇನ್ನು ಕೆಲವರು ಅವಳು ವಿಶ್ವದ (2021) ಪರಿಪೂರ್ಣ ಪುಟ್ಟ ಮಗು ಎಂದು ಹೊಗಳಿ ಕೊಂಡಾಡಿದ್ದಾರೆ. “ನಾನು ನೋಡಿದ ಸುಂದರ ವೀಡಿಯೊಗಳಲ್ಲಿ ಒಂದು (sic)” ಎಂದು ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ.

ಈ ಪುಟ್ಟ ಹುಡುಗಿಯ ವೀಡಿಯೊವನ್ನು ನೀವು ಒಂದು ಬಾರಿ ನೋಡಿಬಿಡಿ..

https://www.instagram.com/kristenweaverstudio/?utm_source=ig_embed&ig_rid=6b33d54e-f9fa-4c05-816b-3cef47fd0236

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights