ಆರ್ಯನ್ ಖಾನ್ ಡ್ರಗ್ಸ್ ಪಾರ್ಟಿಗೂ ಬೆಂಗಳೂರಿಗೂ ನಂಟು : ಇಬ್ಬರ ವಿಚಾರಣೆ..!

ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಬಳಿಕ ಶುರುವಾದ ಮಾದಕ ಲೋಕದ ಭೇಟೆ ಇಂದಿಗೂ ನಿಂತಿಲ್ಲ. ಪ್ರಸಿದ್ಧ ನಟ-ನಟಿಯರು ಹಾಗೂ ಅವರ ಮಕ್ಕಳು ಇದರ ಹಿಂದೆ ಇರುವುದು ಬಯಲಾಗುತ್ತಲೇ ಇದೆ. ಸದ್ಯ ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಜಾಲದಲ್ಲಿ ಸಿಕ್ಕಿಬಿದ್ದಿದ್ದಾನೆ.

ಈ ಆರ್ಯನ್ ಖಾನ್ ಡ್ರಗ್ಸ್ ಪಾರ್ಟಿಗೂ ಬೆಂಗಳೂರಿಗೂ ನಂಟಿದೆ ಎನ್ನಲಾಗುತ್ತಿದೆ. ಈ ಕೇಸ್ ಗೆ ಸಂಬಂಧಿಸಿದಂತೆ ಬೆಂಗಳೂರಿನ ಇಬ್ಬರು ಡಿಜೆಗಳನ್ನು ಮುಂಬೈ ಎನ್ ಸಿಬಿ ತಂಡ ವಿಚಾರಣೆ ನಡೆಸಿದೆ.

ಇವರು ಸಾಮಾಜಿಕ ಜಾಲತಾಣದಲ್ಲಿ ಪಾರ್ಟಿಗೆ ಬರುವಂತೆ ಆಹ್ವಾನ ಕೊಟ್ಟಿದ್ದರು.’ಅರಬ್ಬಿ ಸಮುದ್ರದ ಮೇಲೆ ದ್ವರ್ಗವೇ ನಿರ್ಮಾಣವಾಗುತ್ತಿದೆ. ನೀವೂ ಬನ್ನಿ, ನಾನೂ ಹೋಗುತ್ತಿದ್ದೇನೆ’ ಎಂದು ಪೋಸ್ಟ್ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಎನ್ ಸಿಬಿ ಗ್ರಿಲ್ ನಡೆಸಿದೆ.

ಆರ್ಯನ್ ಖಾನ್ ವಾಟ್ಸ್ ಆಪ್ ಚಾಟ್ ನಿಂದ ಡ್ರಗ್ಸ್ ಗೆ ಸಂಬಂಧಿಸಿದಂತೆ ಆಘಾತಕಾರಿ ಹಾಗೂ ದೋಷಾರೋಪಣೆ ಮಾಡಬಹುದಾದ ಅಂಶಗಳು ಬಹಿರಂಗಗೊಂಡಿದೆ ಎಂದು ಎನ್ ಸಿಬಿ ಕೋರ್ಟ್ ಗೆ ತಿಳಿಸಿದೆ.

ಅ.7 (ಗುರುವಾರದವರೆಗೂ) ಎನ್ ಸಿಬಿ ಆರ್ಯನ್ ಖಾನ್ ಹಾಗೂ ಇತರ 8 ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಕೋರ್ಟ್ ನಲ್ಲಿ ಆತನ ವಾಟ್ಸ್ ಆಪ್ ಚಾಟ್ ಗಳ ಮಾಹಿತಿಯನ್ನು ತನಿಖಾ ಸಂಸ್ಥೆ ಬಹಿರಂಗಗೊಳಿಸಿದೆ.

ಪೇಮೆಂಟ್ ಮೋಡ್ ಹಾಗೂ ಡ್ರಗ್ಸ್ ಖರೀದಿಗಾಗಿ ಕೋಡ್ ವರ್ಡ್ ಗಳನ್ನು ಬಳಕೆ ಮಾಡಿರುವುದು ವಾಟ್ಸ್ ಆಪ್ ಚಾಟ್ ನಿಂದ ಬಯಲಾಗಿದೆ ಎಂದು ಎನ್ ಸಿಬಿ ಕೋರ್ಟ್ ಗೆ ಮಾಹಿತಿ ನೀಡಿದೆ. ಆದರೆ ಆರ್ಯನ್ ಖಾನ್ ಪರ ವಕೀಲರು ತಮ್ಮ ಕಕ್ಷಿದಾರರಿಂದ ಯಾವುದೇ ಡ್ರಗ್ಸ್ ನ್ನೂ ವಶಕ್ಕೆ ಪಡೆಯಲಾಗಿಲ್ಲ ಎಂದು ವಾದ ಮಂಡಿಸಿದರು. ವಾದ ಆಲಿಸಿದ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಆರ್ ಎಂ ನೆರ್ಲಿಕರ್ ಆರ್ಯನ್ ಖಾನ್ ಕಸ್ಟಡಿಯನ್ನು ಅ.7 ವರೆಗೂ ವಿಸ್ತರಣೆ ಮಾಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.