35 ದಿನಗಳಲ್ಲಿ 44 ಹೊಸ ವಿಮಾನಗಳು: ಮಧ್ಯಪ್ರದೇಶಕ್ಕೆ ಜ್ಯೋತಿರಾದಿತ್ಯ ಸಿಂಧಿಯಾ ಉಡುಗೊರೆ

ಮಧ್ಯಪ್ರದೇಶದಿಂದ ಕಳೆದ 35 ದಿನಗಳಲ್ಲಿ 44 ಹೊಸ ವಿಮಾನಗಳನ್ನು ಆರಂಭಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಬುಧವಾರ ಹೇಳಿದ್ದಾರೆ.

“ಇಂದು ವಿಮಾನಗಳು ಮಧ್ಯಪ್ರದೇಶದ ಜಬಲ್ಪುರದಿಂದ ಮುಂಬೈ, ಪುಣೆ, ಸೂರತ್, ಹೈದರಾಬಾದ್ ಮತ್ತು ಕೋಲ್ಕತ್ತಾಗೆ ಹೊರಡುತ್ತಿವೆ. ಆಗಸ್ಟ್ 20 ರಿಂದ ಜಬಲ್ಪುರದಿಂದ ದೆಹಲಿ ಮತ್ತು ಇಂದೋರ್‌ಗೆ ವಿಮಾನಗಳು ಆರಂಭವಾಗಲಿವೆ” ಎಂದು ಅವರು ಹೇಳಿರುವುದಾಗಿ ಸುದ್ದಿ ಸಂಸ್ಥೆ ANI ವರದಿ ಮಾಡಿದೆ.

ಕಾಂಗ್ರೆಸ್‌ನಲ್ಲಿ 19 ವರ್ಷಗಳ ರಾಜಕೀಯದಲ್ಲಿದ್ದ ಸಿಂಧಿಯಾ ಕಳೆದ ವರ್ಷ ಮಾರ್ಚ್‌ನಲ್ಲಿ ಬಿಜೆಪಿ ಸೇರಿದ್ದರು. ಅವರನ್ನು ರಾಜ್ಯಸಭಾ ಸದಸ್ಯರಾಗಿ ಆಯ್ಕೆ ಮಾಡಲಾಗಿದ್ದು, ಕಳೆದ ತಿಂಗಳು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಂತ್ರಿ ಮಂಡಲದಲ್ಲಿ ನಾಗರಿಕ ವಿಮಾನಯಾನ ಖಾತೆಯನ್ನು ನೀಡಲಾಗಿದೆ.

ಇಂಧೋರ್‌ನಲ್ಲಿ ಮಾತನಾಡಿದ ಸಿಂಧಿಯಾ, “ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ನಾನು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ, ನಾನು ಜನರ ಸೇವೆ ಮಾಡಲು ಸಧಾ ಸಿದ್ಧನಿದ್ದೇನೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಜನರ ಹೃದಯದಲ್ಲಿ ಬದುಕಬೇಕು; ಪೋಸ್ಟರ್‌ಗಳಲ್ಲಿ ಅಲ್ಲ: ಹಿರಿಯ ಬಿಜೆಪಿ ನಾಯಕಿ ವಸುಂಧರಾ ರಾಜೇ

2009 ಮತ್ತು 2012ರ ನಡುವೆ ಯುಪಿಎ- II ಸರ್ಕಾರದಲ್ಲಿ ಸಿಂಧಿಯಾ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾಗಿ ಖಾತೆ ನಿರ್ವಹಿಸಿದ್ದರು. 2012 ಮತ್ತು 2014ರ ನಡುವೆ ಅವರು ವಿದ್ಯುತ್ ಸಚಿವಾಲಯದ ಉಸ್ತುವಾರಿ ವಹಿಸಿದ್ದರು.

2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ನಂತರ ಪ್ರತಿರೋಧ ವ್ಯಕ್ತಪಡಿಸಿದ್ದ ಸಿಂಧ್ಯಾ, ಮಾರ್ಚ್ 2020 ರಲ್ಲಿ ತಮ್ಮ 22 ಬೆಂಬಲಿಗರೊಂದಿಗೆ ಬಿಜೆಪಿ ಸೇರಿದರು. ಮಧ್ಯಪ್ರದೇಶದಲ್ಲಿ ಅಸ್ಥಿತ್ವದಲ್ಲಿದ್ದ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್‌ ಸರ್ಕಾರವನ್ನು ಉರುಳಿಸಿದರು.

ನಂತರ ಅವರಿಗೆ ರಾಜ್ಯಸಭಾ ಸ್ಥಾನವನ್ನು ಬಿಜೆಪಿ ನೀಡಿತು.

ಇದನ್ನೂ ಓದಿ: ಸಿಂಧಿಯಾ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಆಗಬಹುದಿತ್ತು; BJP ಸೇರಿ ಲಾಸ್ಟ್‌ಬೆಂಚ್‌ನಲ್ಲಿ ಕುಳಿತಿದ್ದಾರೆ: ರಾಹುಲ್‌ಗಾಂಧಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights