ಜಗತ್ತಿಗೆ ನೀಲಿ ಆಕಾಶ ತೋರಿಸಲು ವಿದ್ಯುತ್ ಕೊರತೆ ನಾಟಕವಾಡಿತಾ ಚೀನಾ ಸರ್ಕಾರ..?

ಚೀನಾ ಜಗತ್ತಿನ ಅತ್ಯಂತ ದೊಡ್ಡ ಉತ್ಪಾದನಾ ಕೇಂದ್ರ. ಜಗತ್ತಿಗೆ ಉತ್ಪನ್ನಗಳನ್ನು ರಫ್ತು ಮಾಡುವ ದೊಡ್ಡ ದೇಶ. ಆದರೀಗ ಚೀನಾದ ಅರ್ಧ ಭಾಗದಲ್ಲಿ ಕತ್ತಲು ಆವರಿಸಿದೆ. ವಿದ್ಯುತ್ ಅನ್ನೋದು ಚೀನಿಯರ ಪಾಲಿಗೆ ಗಗನ ಕುಸುಮವಾಗಿದೆ.

ಹೌದು… ಚೀನಾದ ಮನೆಗಳಲ್ಲಿ ಬೆಳಕಿಲ್ಲ. ಕರೆಂಟ್ ಸಂಪೂರ್ಣವಾಗಿ ಬಂದ್ ಆಗಿದೆ. ಹೆದ್ದಾರಿಯಲ್ಲಿ ಕಗ್ಗತ್ತಲು ಆವರಿಸಿದೆ. ವಿದ್ಯುತ್ ಇಲ್ಲದೇ ಚೀನಾದ ಸ್ಥಿತಿ ಅದೋಗತಿಗೆ ಬಂದು ತಲುಪಿದೆ. ಬೆಳಕಿಗಾಗಿ ಮೇಣದ ಬತ್ತಿಯನ್ನು ಅವಲಂಬಿಸಬೇಕಾದ ಸ್ಥಿತಿಗೆ ಚೀನ ಬಂದು ತಲುಪಿದೆ. ಹಲವಾರು ನಗರದಲ್ಲಿ ಹೆದ್ದಾರಿಗಳಲ್ಲಿ ಕರೆಂಟೇ ಇಲ್ಲದಂತಾಗಿದೆ. ಮನೆಗಳ ಪರಸ್ಥಿತಿ ಒಂದು ಕಡೆಯಾದರೆ ವಿದ್ಯುತ್ ಇಲ್ಲದೇ ಫ್ಯಕ್ಟರಿಗಳು ಬಂದ್ ಆಗುತ್ತಿವೆ.

ಚೀನಾದಲ್ಲಿ ವಿದ್ಯುತ್ ಕೊರತೆ :-

ಚೀನಾದ ಪ್ರಮುಖ ನಗರಗಳಲ್ಲಿ ಶೇ.44 ರಷ್ಟು ತೀವ್ರ ವಿದ್ಯುತ್ ಕೊರತೆ ಉಂಟಾಗಿದೆ. ಅದ್ರಲ್ಲೂ ಚೀನಾದ ಪ್ರಮುಖ ಉತ್ಪಾದನಾ ಕೇಂದ್ರಗಳಾದ ಗುವಾಂಗ್ಡಾಂಗ್ , ಜೆ ಜಿಯಾಂಗ್ ಪ್ರದೇಶಗಳಲ್ಲಿ ವಿದ್ಯುತ್ ಕೊರತೆ ತೀವ್ರವಾಗಿ ಕಾಡುತ್ತಿವೆ. ಹೀಗಾಗಿ 160 ಉತ್ಪಾದನಾ ಘಟಕಗಳು ಬಂದ್ ಆಗಿವೆ. ಇದರಿಂದ ಬೊಂಬೆಗಳಿಂದ ಕಾರುಗಳ ತನಕ ಉತ್ಪಾದನಾ ಕಂಪನಿಗಳು ಬಾಗಿಲು ಮುಚ್ಚಿವೆ. ಹೀಗಾಗಿ ಉತ್ಪನ್ನಗಳ ಬೆಲೆ ಏರಿಕೆಯಾಘುವ ಸಾಧ್ಯತೆ ಹೆಚ್ಚಾಗಿದ್ದು ಜೊತೆಗೆ ಬೇರೆ ಬೇರೆ ದೇಶಗಳಿಗೆ ರಫ್ತಾಗುವ ವಸ್ತುಗಳ ಬೆಲೆ ಏರಿಕೆಯಾಗುವ ಆತಂಕ ಹೆಚ್ಚಾಗಿದೆ. ಇನ್ನೂ ಚಿನಾದಲ್ಲಿ ಐ ಫೋನ್ ಬಿಡಭಾಗಗಳನ್ನು ತಯಾರಿಸುವ ಕಂಪನಿಗಳಿಗೂ ವಿದ್ಯುತ್ ಕಡಿತ ಹಾಗೂ ಬೆಲೆ ಏರಿಕೆಯ ಆತಂಕ ಶುರುವಾಗಿದೆ. ಅಷ್ಟಕ್ಕೂ ಚೀನದಲ್ಲಿ ವಿದ್ಯುತ್ ಬಂದ್ ಆಗಿದ್ದು ಯಾಕೆ..? ಹೆದ್ದಾರಿ, ಮನೆ, ಕಂಪನಿಗಳು ಕತ್ತಲಲ್ಲಿ ಮುಳುಗಿದ್ದು ಯಾಕೆ?

ಚೀನಾದಲ್ಲಿ ವಿದ್ಯುತ್ ವ್ಯತ್ಯಯ ಯಾಕೆ..?

ಚೀನಾದಲ್ಲಿ ಕತ್ತಲು ಆವರಿಸಲು ಬಹುಮುಖ್ಯವಾಗಿ ಎರಡು ಕಾರಣಗಳಿವೆ. ಮೊದಲನೆಯದಾಗಿ ಚೀನಾ ಸರ್ಕಾರ ಚೀನಾದಲ್ಲಿ ವಿದ್ಯುತ್ ಪೂರೈಕೆಯನ್ನು ಮಿತಿಗೊಳಿಸಿದೆ. ಇದಕ್ಕೆ ಮುಖ್ಯ ಕಾರಣ ಕಲ್ಲಿದ್ದಲು ಕೊರತೆ. ಹೌದು.. ಕಲ್ಲಿದ್ದಲು ಕೊರತೆಯಿಂದ ಕೆಂಪು ರಾಷ್ಟ್ರಕ್ಕೆ ವಿದ್ಯುತ್ ಕಂಠಕ ಎದುರಾಗಿದೆ. ಶೇ.60 ರಷ್ಟು ವಿದ್ಯುತ್ ಕೊರತೆ ಉಂಟಾಗಿದೆ. ಆಸ್ಟ್ರೇಲಿಯಾದಿಂದ ರಫ್ತಾಗುತ್ತಿದ್ದ ಕಲ್ಲಿದ್ದಲು ರಫ್ತಾಗದೇ ಇರುವುದೇ ಇದಕ್ಕೆ ಕಾರಣ.

ಆಸ್ಟ್ರೇಲಿಯಾ ಹಾಗೂ ಚೀನಾ ನಡುವಿನ ವ್ಯಾಪಾರ ಸಂಬಂಧ ಹಳಸಿ ಹೋಗಿದೆ. ಹೀಗಾಗಿ ಆಸ್ಟ್ರೇಲಿಯಾದಿಂದ ರಫ್ತು ಮಾಡುತ್ತಿದ್ದ ಕಲ್ಲಿದ್ದಲು ಕೂಡ ಚೀನಾಗೆ ಸಿಗುತ್ತಿಲ್ಲ. ಹೀಗಾಗಿ ಕಲ್ಲಿದ್ದಲ ಕೊರತೆ ಉಂಟಾಗಿ ವಿದ್ಯುತ್ ಸಮಸ್ಯೆ ಎದುರಾಗಿದೆ ಎನ್ನಲಾಗುತ್ತಿದೆ.

ಇಷ್ಟುದಿನ ಕೊರೊನಾ ಲಾಕ್ ಡೌನ್ ನಿಂದ ವ್ಯಾಪರ ವಹಿವಾಟು ಚೀನಾದಲ್ಲಿ ಕುಸಿದಿತ್ತು. ಆದರೀಗ ಮತ್ತೆ ಚಿಗುರೊಡೆಯತೊಡಗಿದೆ. ಚೀನಾದ ವಸ್ತುಗಳಿಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಉತ್ಪಾದನಾ ಕಂಪನಿಗಳು ಚುರುಕಾಗಿ ಕೆಲಸ ಆರಂಭಗೊಳ್ಳುತ್ತಿವೆ. ಹೀಗೆ ಉತ್ಪಾದನೆ ಹೆಚ್ಚಾದ್ದರಿಂದ ವಿದ್ಯುತ್ ಕೂಡ ಅಗತ್ಯಕ್ಕಿಂತ ಹೆಚ್ಚಾಗಿ ಪೂರೈಕೆಯಾಗಬೇಕು. ಆದರೆ ಕಲ್ಲಿದ್ದಲು ಕೊರತೆಯಿಂದಾಗಿ ವಿದ್ಯುತ್ ವ್ಯತ್ಯಯವಾಗಿದೆ. ಹೀಗಾಗಿ ಚೀನಾ ಸರ್ಕಾರ ಕಡಿಮೆ ವಿದ್ಯುತ್ ಬಳಸಿ ಎಂದು ತಾಕೀತು ಮಾಡುತ್ತಿದೆ.

ಆಸ್ಟ್ರೇಲಿಯಾ ಜೊತೆ ಕಿರಿಕ್

ಚೀನಾದಲ್ಲಿ ಜಗತ್ತಿಗೆ ನೀಲಿ ಆಕಾಶ ತೋರಿಸುವ ಪ್ಲ್ಯಾನ್-

ಚೀನಾದಲ್ಲಿ ವಿದ್ಯುತ್ ಕಡಿತವಾಗಲು ಚೀನಾ ಅಧ್ಯಕ್ಷ ಶಿ ಜಿನ್ ಪಿಂಗ್ ಅವರು ಎನ್ನಲಾಗುತ್ತಿದೆ. ಚೀನಾ ಅಧ್ಯಕ್ಷ ಶಿ ಜಿನ್ ಪಿಂಗ್ ಚೀನಾದಲ್ಲಿ ನೀಲಿ ಆಕಾಶವನ್ನು ಕಾಣಲು ಪ್ಲ್ಯಾನ್ ಮಾಡಿದ್ದಾರೆ.

ಚೀನಾ ಎಂದರೆ ಮಾಲಿನ್ಯ, ಮಾಲಿನ್ಯ ಅಂದ್ರೆ ಚೀನಾ ಎಂದು ಜಗತ್ತು ಜರಿಯುತ್ತಿತ್ತು. ಕೈಗಾರಿಕೆಗಳಿಂದಾಗಿ ಚೀನಾದ ವಾತಾವರಣ ಸಂಪೂರ್ಣವಾಗಿ ಕಲುಷಿತವಾಗಿತ್ತು. ಹೀಗಾಗಿ ಚೀನಾದಲ್ಲಿ ಜಗತ್ತಿಗೆ ನೀಲಿ ಆಕಾಶ ತೋರಿಸಲು ಶಿ ಜಿನ್ ಪಿಂಗ್ ಪ್ಲ್ಯಾನ್ ಮಾಡಿದ್ದಾರೆನ್ನಲಾಗುತ್ತಿದೆ. ಇದರಿಂದ ವಾತಾವರಣಕ್ಕೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಜನರಿಗೆ ನೈಸರ್ಗಿಕ ಅನಿಲ ಬಳಸಿ ಎಸಿ ಮಿತಗೊಳಿಸಲು ಆದೇಶಲಾಗಿದೆ. ಹೀಗಾಗಿ ಜಗತ್ತಿಗೆ ನೀಲಿ ಆಕಾಶ ತೋರಿಸಲು ವಿದ್ಯುತ್ ಕೊರತೆ ನಾಟಕವಾಡಿತಾ ಚೀನಾ ಸರ್ಕಾರ ಎನ್ನುವ ಅನುಮಾನ ಮೂಡಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights