ಫ್ಯಾಕ್ಟ್‌ಚೆಕ್ : ಸೂಟ್‌ಕೇಸ್‌ನಲ್ಲಿ ಪತ್ತೆಯಾಯ್ತು ಹಿಂದೂ ಯುವತಿಯ ಮೃತದೇಹ! ಕೊಂದದ್ದು ಯಾರು ಗೊತ್ತೆ?

25 ವರ್ಷದ ಹಿಂದೂ ಯುವತಿಯೊಬ್ಬಳ ಮೃತದೇಹವೊಂದು ಸೂಟ್‌ಕೇಸ್‌ನಲ್ಲಿ ಪತ್ತೆಯಾಗಿದೆ. ಎಡಗೈಯಲ್ಲಿ ‘ಓಂ’ ಮತ್ತು ‘ತ್ರಿಶೂಲ’ದ ಹಿಂದೂ ಧಾರ್ಮಿಕ ಚಿಹ್ನೆಗಳ ಟ್ಯಾಟೋವನ್ನು ಹೊಂದಿರುವ  ಫೋಟೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ, ಇದು ಸಮುದ್ರ ತೀರದಲ್ಲಿ ಸೂಟ್‌ಕೇಸ್‌ನಲ್ಲಿ ಪತ್ತೆಯಾದ ಶಿರಚ್ಛೇದ ಮಾಡಿದ ಹಿಂದೂ ಯುವತಿಯ ಮೃತದೇಹ.

“ಹಿಂದೂಗಳ ವಿರುದ್ಧದ ಯುದ್ಧ” ಎಂಬ ಶೀರ್ಷಿಕೆಯೊಂದಿಗೆ, “ಎಲ್ಲರೂ ನಮ್ಮ ಹೆಣ್ಣುಮಕ್ಕಳು ಮತ್ತು ಸಹೋದರಿಯರನ್ನು ಕೊಲ್ಲುತ್ತಿದ್ದಾರೆ” ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಈ ಕೃತ್ಯವನ್ನು ಮುಸ್ಲಿಮರು ಮಾಡಿದ್ದಾರೆ ಎಂದು ಆಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಕೋಲ್ಕತ್ತಾದ ಇಸ್ಕಾನ್ ಸಂಸ್ಥೆಯ ಉಪಾಧ್ಯಕ್ಷ ರಾಧರಮನ್ ದಾಸ್ ಯುವತಿಯ ಮೃತದೇಹದ ವೈರಲ್ ಚಿತ್ರವನ್ನು ಹಂಚಿಕೊಂಡಿದ್ದು, ಹಿಂದೂ ಮಹಿಳೆಯರನ್ನು ಮುಸ್ಲಿಮರು ಕೊಲ್ಲುತ್ತಾರೆ ಎಂಬ ಸಂದರ್ಭದೊಂದಿಗೆ ಈ ಚಿತ್ರದೊಂದಿಗೆ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ.  ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು, ಸಂಬಂಧಿತ ಕೀವರ್ಡ್‌ಗಳೊಂದಿಗೆ ಸರ್ಚ್ ಮಾಡಿದಾಗ, 3 ಜೂನ್ 2023 ರಂದು ಲೇಖನದೊಂದಿಗೆ ವೈರಲ್ ಚಿತ್ರ ಕಂಡುಬಂದಿದೆ. 2 ಜೂನ್ 2023 ರಂದು ಮುಂಬೈನ ಭಯಂದರ್‌ನ ಉತ್ತಾನ್ ಬೀಚ್‌ನಲ್ಲಿ ಸೂಟ್‌ಕೇಸ್‌ನಲ್ಲಿ ಶಿರಚ್ಛೇದ ಮಾಡಲಾದ ಯುವತಿಯ ದೇಹ ಪತ್ತೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮತ್ತಷ್ಟು ಮಾಹಿತಿಗಾಗಿ ಟ್ವಿಟರ್‌ಗಳನ್ನು ಪರಿಶೀಲಿಸಿದಾಗ, ಜೂನ್ 2, 2023 ರಂದು ಘಟನೆಯ ಬಗ್ಗೆ ANI ಟ್ವೀಟ್ ವರದಿ ಮಾಡುತ್ತಿರುವುದು ಕಂಡುಬಂದಿದೆ. ಟ್ವೀಟ್ ಆರಂಭದಲ್ಲಿ ಕೊಲೆಯ ಬಗ್ಗೆ ವರದಿ ಮಾಡಿದೆ ಮತ್ತು ಮೃತ ಮಹಿಳೆಯನ್ನು ಅಂಜಲಿ ಮಿಂಟು ಸಿಂಗ್ ಎಂದು ಗುರುತಿಸಲಾಗಿದೆ ಎಂದು ಥ್ರೆಡ್ ಮಾಡಿದ ಟ್ವೀಟ್‌ನಲ್ಲಿ ನವೀಕರಿಸಲಾಗಿದೆ. ಆಕೆಯ ಪತಿ ಆಕೆಯ ನಡತೆಯನ್ನು ಅನುಮಾನಿಸಿದ್ದಾನೆ. ನಂತರ ಆಕೆಯನ್ನು ಹತ್ಯೆ ಮಾಡಲು ತನ್ನ ಸೋದರ ಮಾವನ ಸಹಾಯ ಪಡೆದು ಅಂಜಲಿ ಮಿಂಟು ಸಿಂಗ್ ನನ್ನು ಇಬ್ಬರು ಕೊಲೆ ಮಾಡಿದ್ದಾರೆ ಎಂದು ಉತ್ತಾನ್ ಪೊಲೀಸರು ತಿಳಿಸಿದ್ದಾರೆ.

ಮಹಿಳೆಯ ದೇಹವನ್ನು ಎರಡು ಭಾಗಗಳಾಗಿ ಕತ್ತರಿಸಲಾಗಿದ್ದು, ಒಂದು ಸೂಟ್‌ಕೇಸ್‌ನಲ್ಲಿ ಇಟ್ಟು ಎಸೆದಿದ್ದಾರೆ ಎಂದು ಆಜ್ ತಕ್ ವರದಿ ಮಾಡಿದೆ. ಆಕೆಯ ಕೈ ಮೇಲಿದ್ದ ಟ್ಯಾಟೂ ಸಹಾಯದಿಂದ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ಆರೋಪಿಗಳ (ಇಬ್ಬರೂ ಸಹೋದರರ) ಸಿಸಿಟಿವಿ ದೃಶ್ಯಾವಳಿಗಳು ಹೊರಬಂದಿವೆ ಎಂದು ಲೇಖನದಲ್ಲಿ ಉಲ್ಲೇಖಿಸಲಾಗಿದೆ, ಅದರಲ್ಲಿ ಅವರು ಮೃತ ದೇಹವನ್ನು ಗೋಣಿಚೀಲದಲ್ಲಿ ತುಂಬಿದ ನಂತರ ಕೋಣೆಯಿಂದ ಹೊರತೆಗೆಯುತ್ತಿರುವುದನ್ನು ಕಾಣಬಹುದು. ತುಂಡರಿಸಿದ ತಲೆಯ ಪತ್ತೆಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ‘ಓಂ’ ಮತ್ತು ‘ತ್ರಿಶೂಲ’ದ ಹಿಂದೂ ಧಾರ್ಮಿಕ ಚಿಹ್ನೆಗಳ ಟ್ಯಾಟೋವನ್ನು ಹಾಕಿಸಿಕೊಂಡಿರುವ ಕೈಯಿಯ ವೈರಲ್ ಚಿತ್ರವು ಹಿಂದೂ ಮಹಿಳೆಯೊಬ್ಬಳಾಗಿದ್ದು, ಆಕೆಯ ಹಿಂದೂ ಪತಿ ಮತ್ತು ಸೋದರ ಮಾವನಿಂದ ಹತ್ಯೆಯಾಗಿದೆ ಎಂದು ಸ್ಪಷ್ಟವಾಗಿದೆ. ಆಕೆಯನ್ನು ಶಿರಚ್ಛೇದ ಮಾಡಿ ನಂತರ ದೇಹವನ್ನು ಸೂಟ್‌ಕೇಸ್‌ನಲ್ಲಿ ಇಟ್ಟು ಸಮುದ್ರಕ್ಕೆ ಎಸೆಯಲಾಗಿದೆ ಎಂದು ಪೊಲೀಸ್ ತನಿಖೆಯಿಂದ ಸ್ಪಷ್ಟವಾಗಿದೆ. ಆದರೆ ಈ ಘಟನೆನ್ನು ಕೆಲವರು ಲವ್ ಜಿಹಾದ್ ಎಂದು ಹಿಂದೂ ಮತ್ತು ಮುಸ್ಲಿಂ ಎಂಬ ಕೋಮು ಬಣ್ಣವನ್ನು ನೀಡಿ ತಪ್ಪಾಗಿ ಹಂಚಿಕೊಂಡಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ : ಯೂಟರ್ನ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : ಹಿಂದೂ ಗೆಳತಿಯನ್ನು ಬರ್ಬರವಾಗಿ ಥಳಿಸುತ್ತಿರುವ ಯುವಕ ಮುಸ್ಲಿಮನಲ್ಲ! ಮತ್ತ್ಯಾರು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights