FACT CHECK | BJP ಆಡಳಿತದಲ್ಲಿ ಗುಂಡಿ ಬಿದ್ದಿದ್ದ ರಸ್ತೆಗಳನ್ನು ಕಾಂಗ್ರೆಸ್‌ ಅವಧಿಯದ್ದು ಎಂದು ಸುಳ್ಳು ಪೋಸ್ಟ್‌ ಹಂಚಿಕೊಂಡ ಅಸ್ಸಾಂ ಮುಖ್ಯಮಂತ್ರಿ

BJP ಅಭಿವೃದ್ದಿಗಳನ್ನುಹೈಲೆಟ್‌ ಮಾಡುವಾಗ ಸಾಮಾಜಿಕ ಮಾಧ್ಯಮಗಳಲ್ಲಿ ಬರುವ ಹಲವು ವಿಡಿಯೋಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಸಾವಿರಾರು ಕಿಲೋ ಮೀಟರ್ ರಸ್ತೆಗಳನ್ನು ಮೋದಿ ಸರ್ಕಾರ 10ವರ್ಷಗಳಲ್ಲಿ ಅಭಿವೃದ್ದಿ ಪಡಿಸಿದೆ ಎಂದು ಹೇಳುವ ವಿಡಿಯೋಗಳೇ ಸಾಕಷ್ಟು ಸಿಗುತ್ತವೆ. ಆದರೆ ಅವುಗಳಲ್ಲಿ ಬಹುಪಾಲು ರಸ್ತೆಗಳಲ್ಲಿ ಟೋಲ್ ಸಂಗ್ರಹ ಮಾಡುತ್ತಾ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿರುವುದರ ಬಗ್ಗೆ ಹೆಚ್ಚಿನ ಸಮಯ ತೋರಿಸುವುದೇ ಇಲ್ಲ. ಇರಲಿ ಕಳೆದ 10 ವರ್ಷಗಳಲ್ಲಿ ರಸ್ತೆ ಅಭಿವೃದ್ದಿ ಆಗಿದೆ ಎಂದೇ ಭಾವಿಸೋಣ. ಆದರೆ ಅಸ್ಸಾಂ ಮುಖ್ಯಮಂತ್ರಿ ಹಂಚಿಕೊಂಡಿರುವ ವಿಡಿಯೋ ಒಮ್ಮೆ ನೋಡಿ.

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಮೋದಿ ಸರ್ಕಾರ ಬರುವ ಮೊದಲು ಮತ್ತು ನಂತರದ ನಡುವಿನ ವ್ಯತ್ಯಾಸ ಇದು ಎಂಬ ಸಾಲುಗಳೊಂದಿಗೆ ಅಸ್ಸಾಂ ರಸ್ತೆಗಳು ಆಗ ಮತ್ತು ಈಗ ಎಂಬ ಹೋಲಿಕೆಯೊಂದಿಗೆ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಮೋದಿ ಅಧಿಕಾರಕ್ಕೆ ಬರುವ ಮೊದಲು ಗುಂಡಿಗಳಿಂದ ಹಾಳಾದ ರಸ್ತಗಳಿದ್ದವು ಎಂದು ವಿಡಿಯೋದ್ಲಿ ತೋರಿಸಲಾಗಿದೆ.

ಅಂದರೆ ಕಾಂಗ್ರೆಸ್‌ ಸರ್ಕಾರ ಇದ್ದ ಸಂದರ್ಭದಲ್ಲಿ ರಸ್ತೆಯ ಪರಿಸ್ಥಿತಿ ಶೋಚನೀಯವಗಿತ್ತು, ಮೋದಿ 2014ರಲ್ಲಿ ಅಧಿಕಾರಕ್ಕೆ ಬಂದ ನಂತರ  ರಸ್ತೆ ಅಭಿವೃದ್ದಿಯಾಗಿದೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದೆರ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿರುವ ಮೋದಿ ಸರ್ಕಾರದ ಸಾಧನೆಯ ವಿಡಿಯೋವನ್ನು ಪರಿಶೀಲಿಸಿರುವ ಆಲ್ಟ್‌ ನ್ಯೂಸ್ ಫ್ಯಾಕ್ಟ್‌ಚೆಕ್ ತಂಡ ವಿಡಿಯೋದಲ್ಲಿ ರಸ್ತೆಗಳು ಹಾಳಾಗಿರುವ ದೃಶ್ಯಗಳು ಕೂಡ BJP ಅಧಿಕಾರದಲ್ಲಿದ್ದ ಸಂದರ್ಭದ್ದು ಎಂದು ಕಂಡುಹಿಡಿದಿದೆ.

ವಿಡಿಯೋದಲ್ಲಿರುವ ಹಾಳಾಗಿರುವ ರಸ್ತೆಯನ್ನು ಪ್ರದರ್ಶಿಸಲು ಕಾರು, ಬೈಕ್ ಮತ್ತಿತರ ವಾಹನಗಳು ಗುಂಡಿಇಂದ ಕೂಡಿದ ರಸ್ತೆಗಳಲ್ಲಿ ಸಂಚರಿಸುತ್ತಿರುವುದನ್ನು ಕಾಣಬಹುದು. ವಾಹನಗಳ ರಿಜಿಸ್ಟರ್ ಸಂಖ್ಯೆಗಳನ್ನು ಪರಿಶೀಲಿಸಲಾಗಿದೆ. ಅದರಲ್ಲಿ ಕಾರಿನ AS01DT6808 ನೊಂದಣಿ ಸಂಖ್ಯೆಯನ್ನು ಆಲ್ಟ್‌ನ್ಯೂಸ್ ಫ್ಯಾಕ್ಟ್‌ಚೆಕ್ ತಂಡ  CarInfo ವೆಬ್‌ಸೈಟ್‌ನಲ್ಲಿ ಹಾಕಿ ಪರಿಶೀಲಿಸಿದಾಗ ಅದರ ನೋಂದಣಿ ದಿನಾಂಕ 2 ಆಗಸ್ಟ್ 2018 ಎಂದು ಕಂಡುಬಂದಿದೆ.

ಅಸ್ಸಾಂನಲ್ಲಿ 24 ಮೇ 2016 ರಿಂದ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿದೆ. 26 ಮೇ 2014 ರಿಂದ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವಿದೆ ಮತ್ತು ನರೇಂದ್ರ ಮೋದಿ ಪ್ರಧಾನಿಯಾಗಿದ್ದಾರೆ.ಹಾಳಾದ ರಸ್ತೆಯಲ್ಲಿ ಸಂಚರಿಸುತ್ತಿರುವ ವಾಹನ ನೋಂದಣಿ ಆದಿರುವುದು  2 ಆಗಸ್ಟ್ 2018ರಲ್ಲಿ ಅಸ್ಸಾಂನಲ್ಲಿ ಇದ್ದದ್ದು ಬಿಜೆಪಿ ಸರ್ಕಾರ ಬೇರೆ ಸರ್ಕಾರವಲ್ಲ.

ಹಿಮಂತ ಬಿಸ್ವಾ ಶರ್ಮಾ ಅವರು ಪೋಸ್ಟ್ ಮಾಡಿದ ವೀಡಿಯೊವನ್ನು ಫ್ಲಿಪ್ ಮಾಡುವ ಮೂಲಕ ಎಡಿಟ್ ಮಾಡಲಾಗಿದೆ, ಆದ್ದರಿಂದ ಕೆಳಗಿನ ಸ್ಕ್ರೀನ್‌ಶಾಟ್‌ನಲ್ಲಿ ಕಾರಿನ ನೋಂದಣಿ ಸಂಖ್ಯೆ ಸರಿಯಾಗಿ ಗೋಚರಿಸುವಂತೆ ಹಿಂತಿರುಗಿಸಲಾಗಿದೆ. 

ಪಲ್ಸರ್ 200NS ಟೈಮ್‌ಲೈನ್‌ನಲ್ಲಿ ಸುಮಾರು ಐದನೇ-ಸೆಕೆಂಡ್ ಮಾರ್ಕ್‌ನ ನಂತರ ಕಾಣಿಸಿಕೊಳ್ಳುತ್ತದೆ. ಈ ಬೈಕ್ ಅನ್ನು 2017 ರಲ್ಲಿ ಮಾತ್ರ ಪರಿಚಯಿಸಲಾಗಿದೆ ಎಂಬುದು ಕುತೂಹಲಕಾರಿಯಾಗಿದೆ. ಅದು ಅಸ್ಸಾಂ ಅನ್ನು ಬಿಜೆಪಿ ಆಳ್ವಿಕೆ ನಡೆಸಿದ ಸಮಯವನ್ನು ಸೂಚಿಸುತ್ತದೆ.

 

ವೈರಲ್ ವಿಡಿಯೋದಲ್ಲಿ ಕಂಡುಬರುವ ವಾಹನಗಳ ನೊಂದಣಿ ಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡು ಅದರ ನೊಂದಣಿ ದಿನಾಂಕಗಳನ್ನು ಪರಿಶೀಲಿಸಿದಾಗ ಎಲ್ಲಾ ವಾಹನಗಳ ನೊಂದಣೆ ಆಗಿರುವ ಸಮಯದಲ್ಲಿ ಅಸ್ಸಾಂ ಮತ್ತು ಕೇಂದ್ರದಲ್ಲಿ BJP ಅಧಿಕಾರದಲಿದೇ ವಿನಃ ಕಾಂಗ್ರೆಸ್‌ ಅಲ್ಲಎಂದು ಯೂಟರ್ನ್ ಕಂಡುಹಿಡಿದಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಬಿಜೆಪಿ ಮತ್ತು ಮೋದಿ ಸರ್ಕಾರದ ಸಾಧನೆಯನ್ನು ಪ್ರದರ್ಶಿಸಲು ಹೋಗಿ ತನ್ನದೇ ಪಕ್ಷದ (BJP) ಆಡಳಿತಾವಧಿಯಲ್ಲಿ ಗುಂಡಿಗಳಿಂದ ಕೂಡಿದ್ದ ಹಾಳಾದ ರಸ್ತೆಯ ವಿಡಿಯೋವನ್ನು ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಎಂದು ಬಿಂಬಿಸಲು ಹೋಗಿ ತಮ್ಮ ಮಾನವನ್ನು ತಾವೇ ಹರಾಜು ಹಾಕಿಕೊಂಡಿದ್ದಾರೆ. ಆ ಮೂಲಕ ಒಂದು ಸಂವಿಧಾನಿಕ ಹುದ್ದೆಯಲ್ಲಿ ಕೂತು ಸುಳ್ಳು ಹೇಳಿದ್ದಾರೆ. ಅದನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಮೋದಿಯನ್ನು ಸೋಲಿಸಲು ಲಕ್ಷಾಂತರ ಮುಸ್ಲಿಮರು ದುಬೈನಿಂದ ಬಂದದ್ದು ನಿಜವೇ ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights