FACT CHECK | ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಪ್ರಿಯಾಂಕಾ ಗಾಂಧಿ ಅಕ್ರಮವಾಗಿ ಮನೆ ಖರೀದಿಸಿದ್ದಾರೆಯೇ?

2024ರ ಲೋಕಸಭಾ ಚುನಾವಣ ಭಾಷಣದಲ್ಲಿ ಮಾತನಾಡುವಾಗ ರಾಹುಲ್ ಗಾಂಧಿ ಸಂಪತ್ತಿನ ಸಮಾನ ಹಂಚಿಕೆ (ಸಂಪತ್ತನ್ನು ಪುನರ್ ವಿತರಣೆ’ ಮಾಡುವುದಾಗಿ) ಕುರಿತು ಸಮೀಕ್ಷೆ ಮಾಡುವ ಬಗ್ಗೆ ಹೇಳಿದ್ದರು.  ಅದನ್ನು ಕೆಲವರು ಪ್ರಣಾಳಿಕೆಯಲ್ಲಿ ಕಾಂಗ್ರೆಸ್‌ ಘೋಷಿಸಿದೆ ಎಂದು ಭಾವಿಸಿ, ಅದರ ಬಗ್ಗೆ ವ್ಯಂಗ್ಯ ಮಾಡುತ್ತ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಅಂತಹದ್ದೇ ಪೋಸ್ಟ್‌ವೊಂದು ಸೋಶಿಯಲ್ ಮೀಡಿಯಾದಲ್ಲಿ ಪ್ರಸಾರವಾಗುತ್ತಿದೆ.

“ಶಿಮ್ಲಾದ ಈ ಬೃಹತ್ ಬಂಗಲೆ ಪ್ರಿಯಾಂಕಾ ಗಾಂಧಿ ಅವರಿಗೆ ಸೇರಿದ್ದು. ಈ ಕಣಿವೆಯಲ್ಲಿ ಯಾವುದೇ ಹೊರಗಿನವರಿಗೆ ಮನೆ ನಿರ್ಮಿಸಲು ಅವಕಾಶವಿಲ್ಲವಾದರೂ, ರಾಜಮನೆತನದ ನಿಯಮಗಳು ಯಾವಾಗಲೂ ವಿಭಿನ್ನವಾಗಿವೆ. ಹೇಗಾದರೂ, ಕಾಂಗ್ರೆಸ್ ಸಂಪತ್ತಿನ ಮರು ಹಂಚಿಕೆ ಯೋಜನೆಯನ್ನು ಜಾರಿಗೆ ತರುತ್ತೇವೆ ಎಂದು ಹೇಳಿದ್ದಾರೆ. ನನಗೆ ಈ ಬಂಗಲೆ ಬೇಕು, ಪ್ರಿಯಾಂಕಾ ಗಾಂಧಿ ತಪ್ಪು ತಿಳಿಯುವುದಿಲ್ಲ ಎಂದುಕೊಳ್ಳುತ್ತೇನೆ” ಎಂದು ಪ್ರತಿಪಾದಿಸಿ ಬಲಪಂಥೀಯ ಪ್ರತಿಪಾದಕ ಮಿ. ಸಿನ್ಹ ಎಂಬುವವರು ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಹಾಗಿದ್ದರೆ ಪ್ರಿಯಾಂಕಾ ಗಾಂಧಿ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ನಿರ್ಮಾಣ ಮಾಡಿರುವ ಬಂಗಲೆ ಅಕ್ರಮವಾಗಿ ನಿರ್ಮಿಸಿರುವುದೇ? ಸರ್ಕಾರಿ ದಾಖಲೆಗಳು ಏನು ಹೇಳುತ್ತವೆ ಎಂದು ಪರಿಶೀಳಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ದಾರಿ ತಪ್ಪಿಸುವಂತಿದೆ ಎಂದು ನ್ಯೂಸ್‌ ಚೆಕ್ಕರ್ ಫ್ಯಾಕ್ಟ್‌ಚೆಕ್ ತಂಡ ವರದಿ ಮಾಡಿದೆ.

ಹಿಮಾಚಲ ಪ್ರದೇಶದಲ್ಲಿರುವ ಪ್ರಿಯಾಂಕಾ ಗಾಂಧಿಯವರ ಮನೆ ವಿವಾದದ ವಿಷಯವಾಗುತ್ತಿರುವುದು ಇದೇ ಮೊದಲೇನಲ್ಲ.  ಈ ಮೊದಲು ಮಾಧ್ಯಮಗಳು ಮತ್ತು ಸಾರ್ವಜನಿಕರ ಗಮನವನ್ನು ಸೆಳೆದಿದೆ. ಸಾಮಾಜಿಕ ಮಾಧ್ಯಮಗಳಲ್ಲೂ ಇದರ ಬಗ್ಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಕಾನೂನಿನ ಪ್ರಕಾರ, ಹಿಮಾಚಲ ಪ್ರದೇಶದಲ್ಲಿ ಯಾವುದೇ ಹೊರಗಿನವರು ಅಥವಾ ಕೃಷಿಕರಲ್ಲದವರು ಭೂಮಿಯನ್ನು ಖರೀದಿಸುವಂತಿಲ್ಲ.

ಹಿಮಾಚಲ ಪ್ರದೇಶ ಬಹಳ ಚಿಕ್ಕ ರಾಜ್ಯವಾಗಿದೆ. ಶಿಮ್ಲಾದಲ್ಲಿರುವ ರಾಷ್ಟ್ರಪತಿ ಭವನಕ್ಕೆ ಸೇರಿದ ಜಮೀನಿನ ವಲಯದಲ್ಲಿ 2007 ಮತ್ತು 2012 ರಲ್ಲಿ ನಿಯಮ ಮೀರಿ ಭೂಮಿ ಖರೀದಿಸಿದ್ದು, ಇದಕ್ಕೆ ಅಂದಿನ ಕಾಂಗ್ರೆಸ್ ಸರ್ಕಾರ ಕಾನೂನನ್ನು ಸಡಿಲಗೊಳಿಸಿ, ಪ್ರಿಯಾಂಕಾ ಗಾಂಧಿ ಅವರಿಗೆ ಭೂಮಿ ಕೊಳ್ಳಲು ಅವಕಾಶ ನೀಡಿದೆ. ಈ ಅವಕಾಶವನ್ನು ಪ್ರಿಯಾಂಕಾ ಗಾಂಧಿ ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಕುರಿತಂತೆ ಮಾಹಿತಿ ನೀಡುವಂತೆ ಆರ್ ಟಿಐ ಮೂಲಕ ಅರ್ಜಿ ಸಲ್ಲಿಸಿದ್ದರೂ ಅಧಿಕಾರಿಗಳೂ ಮಾಹಿತಿ ನೀಡಲು ನಿರಾಕರಿಸಿದ್ದರು ಎಂಬ ಆರೋಪಗಳು ಕೇಳಿಬಂದಿತ್ತು.

ಆದರೂ, 2007 ರ ಟ್ರಿಬ್ಯೂನ್ ಇಂಡಿಯಾ ಲೇಖನದ ಪ್ರಕಾರ, ಪ್ರಿಯಾಂಕಾ ಗಾಂಧಿ “ಔಪಚಾರಿಕವಾಗಿ ನಾಲ್ಕು ಬಿಘಾಗಳು ಮತ್ತು ಐದು ಬಿಸ್ವಾಸ್ ಭೂಮಿಯನ್ನು ಪಟ್ಟಣದ ಹೊರವಲಯದಲ್ಲಿರುವ ಚರಾಬ್ರದಲ್ಲಿ 46.79 ಲಕ್ಷ ರೂಪಾಯಿ ಪಾವತಿಸಿ ಅವರ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದಾರೆ.

ಭೂಮಿ ಮತ್ತು ಮನೆಯ ಸಿಂಧುತ್ವಕ್ಕೆ ಸಂಬಂಧಿಸಿದಂತೆ, ಹಿಮಾಚಲ ಪ್ರದೇಶ ಟೆನೆನ್ಸಿ ಮತ್ತು ಲ್ಯಾಂಡ್ ರಿಫಾರ್ಮ್ಸ್ ಆಕ್ಟ್, 1972 ರ ಸೆಕ್ಷನ್ 118 ಹಿಮಾಚಲ ಪ್ರದೇಶದ ಹೊರಗಿನ ಜನರು ಮನೆ ನಿರ್ಮಿಸಲು ರಾಜ್ಯದಲ್ಲಿ ಭೂಮಿಯನ್ನು ಖರೀದಿಸಲು ಅವಕಾಶ ಕಲ್ಪಿಸುತ್ತದೆ. ಪ್ರಿಯಾಂಕಾ ಗಾಂಧಿಯವರ ಪ್ರಕರಣದಲ್ಲಿ, ಅಂದಿನ ಸರ್ಕಾರವು ಈ ಕಾನೂನಿನ ಅಡಿಯಲ್ಲಿ ಭೂಮಿಯನ್ನು ಮಾರಾಟ ಮಾಡಿತು.

ಹಿಮಾಚಲ ಪ್ರದೇಶ (HP) ಟೆನೆನ್ಸಿ ಮತ್ತು ಲ್ಯಾಂಡ್ ರಿಫಾರ್ಮ್ಸ್ ಆಕ್ಟ್, 1972 ರ ಅಡಿಯಲ್ಲಿ, ಸರ್ಕಾರವು ಭೂಮಿಯನ್ನು ಮಾರಾಟ ಮಾಡುವ ಮೊದಲು ಅನುಸರಿಸಬೇಕಾದ ನಿಬಂಧನೆಗಳು ಮತ್ತು ಈ ನಿಬಂಧನೆಗಳಿಗೆ ಕೆಲವು ವಿನಾಯಿತಿಗಳಿವೆ. ಕಾಯ್ದೆಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಇಲ್ಲಿ ಓದಬಹುದು .

2013 ರಲ್ಲಿ ದಿ ಹಿಂದೂ ವರದಿ ಮಾಡಿದಂತೆ , “ಈ ಅವಧಿಯಲ್ಲಿ ಭೂಮಿಯನ್ನು ಖರೀದಿಸಲು ಅನುಮತಿ ಪಡೆದ 881 ಘಟಕಗಳಲ್ಲಿ 52 ಶೈಕ್ಷಣಿಕ ಸಂಘಗಳು ಮತ್ತು ಮೂರು ಖಾಸಗಿ ವಿಶ್ವವಿದ್ಯಾಲಯಗಳಿವೆ. HP ಲ್ಯಾಂಡ್ ಟೆನೆನ್ಸಿ ಮತ್ತು ರಿಫಾರ್ಮ್ಸ್ ಆಕ್ಟ್ 1972 ರ ಸೆಕ್ಷನ್ 118 ರ ಅಡಿಯಲ್ಲಿ ಅನುಮತಿಗಳನ್ನು ಪಡೆದವರಲ್ಲಿ ಹಲವಾರು ಜಲವಿದ್ಯುತ್ ಕಂಪನಿಗಳು, ಕಾರ್ಪೊರೇಟ್ ಮನೆಗಳು, ಕೈಗಾರಿಕಾ ಘಟಕಗಳು ಮತ್ತು ಧಾರ್ಮಿಕ ಸಂಸ್ಥೆಗಳು ಸಹ ಸೇರಿವೆ ಎಂದು ಅಂದಿನ ಕಂದಾಯ ಸಚಿವ ಕೌಲ್ ಸಿಂಗ್ ಠಾಕೂರ್ ಪ್ರಶ್ನೋತ್ತರ ಅವಧಿಯಲ್ಲಿ ಹೇಳಿದರು. ಎಂದು ಹಿಂದೂ ಪತ್ರಿಕೆಯಲ್ಲಿ ವರದಿಯಾಗಿದೆ.

ಪ್ರಿಯಾಂಕಾ ಗಾಂಧಿ ಮತ್ತು ಸುಪ್ರೀಂ ಕೋರ್ಟ್ ವಕೀಲ ಪ್ರಶಾಂತ್ ಭೂಷಣ್ ಸೇರಿದಂತೆ “881 ವೈಯಕ್ತಿಕ ಫಲಾನುಭವಿಗಳು, ಕಂಪನಿಗಳು, ಸೊಸೈಟಿಗಳು ಮತ್ತು ಟ್ರಸ್ಟ್‌ಗಳು ಹಿಮಾಚಲ ಪ್ರದೇಶದಲ್ಲಿ ಭೂಮಿ ಖರೀದಿಸಲು ಕಳೆದ ಮೂರು ವರ್ಷಗಳಲ್ಲಿ ಅನುಮತಿ ನೀಡಿವೆ” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಬಿಜೆಪಿಯ ಪ್ರೇಮ್ ಕುಮಾರ್ ಧುಮಾಲ್ ನೇತೃತ್ವದ ಸರ್ಕಾರವು 2010-2012 ರ ನಡುವೆ ರಾಜ್ಯದಲ್ಲಿ ಭೂಮಿ ಖರೀದಿಸಲು ಹೇಗೆ ಅನುಮತಿ ನೀಡಿದೆ ಎಂಬುದನ್ನು 2013 ರ ಇಂಡಿಯನ್ ಎಕ್ಸ್‌ಪ್ರೆಸ್ ಲೇಖನ ವಿವರಿಸುತ್ತದೆ. ಇವರಲ್ಲಿ ಹೆಚ್ಚಿನವರು ಹೊರಗಿನವರು ಮತ್ತು ಕೃಷಿಕರಲ್ಲದ ಹಿಮಾಚಲ ಪ್ರದೇಶದವರು.

ಹಿಮಾಚಲ ಪ್ರದೇಶದ ಶಿಮ್ಲಾದಿಂದ ಸುಮಾರು 13 ಕಿ.ಮೀ ದೂರದಲ್ಲಿರುವ ಛರಾಬ್ರಾದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಗಾಂಧಿ ಅವರ ಭೂ ವ್ಯವಹಾರಗಳ ವಿವರಗಳನ್ನು ಪಡೆಯಲು ನೋಯ್ಡಾ ಮೂಲದ ಆರ್‌ಟಿಐ ಕಾರ್ಯಕರ್ತನೊಬ್ಬ ಸುಮಾರು ಮೂರು ವರ್ಷಗಳ ಕಾಲ ನಡೆಸಿದ ಹೋರಾಟವು ಆಶ್ಚರ್ಯಕರ ನಡೆಯಲ್ಲಿ ಇದ್ದಕ್ಕಿದ್ದಂತೆ ಕೊನೆಗೊಂಡಿತು. ಮಾಹಿತಿ ಹಂಚಿಕೆಯನ್ನು ಇಲ್ಲಿಯವರೆಗೆ ತೀವ್ರವಾಗಿ ವಿರೋಧಿಸುತ್ತಿದ್ದ ಶಿಮ್ಲಾದ ಡೆಪ್ಯುಟಿ ಕಮಿಷನರ್, ಒಪ್ಪಂದದ ಎಲ್ಲಾ ಪ್ರಮುಖ ವಿವರಗಳನ್ನು ಬಹಿರಂಗಪಡಿಸಿದರು.

ಕಾರ್ಯಕರ್ತನ ಪ್ರಕಾರ, ದೇವ್ ಆಶಿಶ್ ಭಟ್ಟಾಚಾರ್ಯ, ಡೆಪ್ಯುಟಿ ಕಮಿಷನರ್, ರೋಹನ್ ಚಂದ್ ಠಾಕೂರ್ ಅವರು ಗಾಂಧಿಯವರ ಭೂ ವ್ಯವಹಾರಗಳ ಬಗ್ಗೆ ಎಲ್ಲಾ ವಿವರಗಳನ್ನು ಬಹಿರಂಗಪಡಿಸಿದ್ದಾರೆ ಎಂದು ಕೇಂದ್ರ ತನಿಖಾ ದಳ, ಶಿಮ್ಲಾ ಶಾಖೆಯ ಮುಖ್ಯಸ್ಥರಿಗೆ ಕಳುಹಿಸಿದ್ದಾರೆ. ಎಂದು ವೈರ್ ವರದಿ ಮಾಡಿದೆ.

” ದಿ ವೈರ್ ಲೇಖನದಲ್ಲಿ ಭಟ್ಟಾಚಾರ್ಯ ಅವರು ಭೂ ವ್ಯವಹಾರದಲ್ಲಿ ಶಂಕಿತ ದೋಷಗಳನ್ನು ವಿವರಿಸಿದ್ದಾರೆ. ಲೇಖನವು ಶಿಮ್ಲಾದ ಡಿಜಿ ಅವರ ಆರ್‌ಟಿಐಗೆ ಪ್ರತಿಕ್ರಿಯೆಯನ್ನು ಸಹ ಒಳಗೊಂಡಿದೆ.

ದಿ ವೈರ್‌ನ ಲೇಖನದ ಪ್ರಕಾರ, ಭಟ್ಟಾಚಾರ್ಯರು ಭೂ ವ್ಯವಹಾರದಲ್ಲಿ ನಾಲ್ಕು ಪ್ರಮುಖ ದೋಷಗಳನ್ನು ಕಂಡುಕೊಂಡಿದ್ದಾರೆ:

  • 1. ರಾಜ್ಯದಲ್ಲಿ ಒಬ್ಬರ ಹೆಸರಿನಲ್ಲಿ ಮೂರು ಕಡೆ ಭೂ ಖರೀದಿಗೆ ಅನುಮತಿ ನೀಡುವುದಿಲ್ಲ, ಹಾಗಾದರೆ ಪ್ರಿಯಾಂಕ ಗಾಂಧಿ ಅದನ್ನು ಹೇಗೆ ಖರೀದಿಸಿದರು?
  • 2. ಮಂಡಳಿಯ ಅನುಮತಿಯೊಂದಿಗೆ ಮಾತ್ರ ಭೂಮಿಯನ್ನು ಖರೀದಿಸಲು ಅನುಮತಿಸಲಾಗಿದೆ. ಆದರೆ ಈ ಖರೀದಿಯಲ್ಲಿ ಯಾವುದೇ ಮಂಡಳಿ ರಚನೆಯಾಗಿಲ್ಲ.
  • 3. ಎರಡು ವರ್ಷಗಳಲ್ಲಿ ನಿರ್ಮಾಣ ಪೂರ್ಣಗೊಂಡಿಲ್ಲ
  • 4. ಮೇಲಿನ ಅಂಶದ ಹೊರತಾಗಿಯೂ ಪ್ರಿಯಾಂಕಾ ಗಾಂಧಿಗೆ ಯಾವುದೇ ನೋಟೀಸ್ ನೀಡಿಲ್ಲ.

ಮೇಲಿನ ಪ್ರಶ್ನೆಗಳಿಗೆ ಸಂಬಂಧಿಸಿದ ಕಾನೂನನ್ನು ಅರ್ಥಮಾಡಿಕೊಳ್ಳಲು ನ್ಯೂಸ್‌ ಚೆಕರ್ ಹಿಮಾಚಲ ಪ್ರದೇಶದ ಹೈಕೋರ್ಟ್‌ನ ಹಿರಿಯ ವಕೀಲ ವಿಶ್ವ ಮೋಹನ್ ಶರ್ಮಾ ಅವರೊಂದಿಗೆ ಮಾತನಾಡಿದ್ದು, ಅದಕ್ಕೆ ಶರ್ಮಾ ಪ್ರತಿಕ್ರಿಯಿಸಿದ್ದಾರೆ.

ಮೊದಲ ಎರಡು ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಈ ಕಾನೂನಿನಲ್ಲಿ ಅಂತಹ ಅವಕಾಶವಿಲ್ಲ. ನಿರ್ಮಾಣಕ್ಕೆ ಸಂಬಂಧಿಸಿದಂತೆ, ಶರ್ಮಾ ಅವರು ಕಾನೂನಿನ ಪ್ರಕಾರ, ಖರೀದಿಸಿದ ಭೂಮಿಯನ್ನು ಖರೀದಿಸಿದ ಎರಡು ವರ್ಷಗಳಲ್ಲಿ “ಬಳಕೆಗೆ” ಬಳಸಬೇಕಾಗುತ್ತದೆ. ಆದರೆ ಎರಡು ವರ್ಷಗಳಲ್ಲಿ ನಿರ್ಮಾಣವನ್ನು ಪೂರ್ಣಗೊಳಿಸಬೇಕು ಎಂದು ಕಾನೂನಿನಲ್ಲಿ ಹೇಳಲಾಗಿಲ್ಲ.

ಆದರೂ, ಹಿಮಾಚಲದಲ್ಲಿ ಪ್ರಿಯಾಂಕಾ ಗಾಂಧಿಯವರ ಭೂಮಿ ಖರೀದಿಗೆ ಸಂಬಂಧಿಸಿದಂತೆ ಕೆಲವು ಅನುಮಾನಾಸ್ಪದ ಅಂಶಗಳಿವೆ ಎಂದು ಶರ್ಮಾ ವಿವರಿಸಿದರು. ಅಂತಹ ಒಂದು ಅಂಶವೆಂದರೆ ಹಿಮಾಚಲದಲ್ಲಿ ಹೊರಗಿನವರಾದ ಪ್ರಿಯಾಂಕಾ ಗಾಂಧಿಗೆ ಅಲ್ಪಾವಧಿಯಲ್ಲಿ ಭೂಮಿಯನ್ನು ಖರೀದಿಸಲು ಅವಕಾಶ ಮಾಡಿಕೊಟ್ಟಿದ್ದು ಹೇಗೆ ?  ಯಾವುದೇ ನಿಯಮಗಳಿಲ್ಲದಿರುವುದರಿಂದ ಈ ಪ್ರಶ್ನೆಗಳನ್ನು ನೈತಿಕ ನೆಲೆಯಿಂದ ಮಾತ್ರ ಕೇಳಬಹುದು ಎನ್ನುತ್ತಾರೆ ಹಿಮಾಚಲ ಪ್ರದೇಶದ ಹೈಕೋರ್ಟ್‌ನ ಹಿರಿಯ ವಕೀಲ ವಿಶ್ವ ಮೋಹನ್ ಶರ್ಮಾ.

ಒಟ್ಟಾರೆಯಾಗಿ ಹೇಳುವುದಾದರೆ, ಪ್ರಿಯಾಂಕಾ ಅವರ ಬಂಗಲೆಯು ಕಾನೂನುಬಾಹಿರವಾಗಿದೆ ಎಂಬ ಹೇಳಿಕೆಗಳು ಕಾಂಗ್ರೆಸ್‌ ಪ್ರಣಾಳಿಕೆಯನ್ನು ಅಪಹಾಸ್ಯ ಮಾಡುವ ಉದ್ದೇಶವನ್ನು ಹೊಂದಿವೆ. ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ‘ಸಂಪತ್ತನ್ನು ಪುನರ್ ವಿತರಣೆ’ ಮಾಡುವುದಾಗಿ ಕಾಂಗ್ರೆಸ್‌ ಭರವಸೆ ನೀಡಿದೆ ಎಂದು ಭಾವಿಸಿ, ಕೆಲವರು ಇಂತಹ ಹೇಳಿಕೆಗಳನ್ನು ಪೋಸ್ಟ್‌ ಮಾಡುತ್ತಿದ್ದಾರೆ. ಆದರೆ, ವಾಸ್ತವ ಏನೆಂದರೆ, ಕಾಂಗ್ರೆಸ್‌ ‘ಸಂಪತ್ತು ಪುನರ್‌ ವಿತರಣೆ’ಯ ಬಗ್ಗೆ ಯಾವುದೇ ಭರವಸೆಯನ್ನೂ ತನ್ನ ಪ್ರಣಾಳಿಕೆಯಲ್ಲಿ ನೀಡಿಲ್ಲ.

ಹಿಮಾಚಲದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಖರೀದಿಸಿದ ಭೂಮಿ ಕಾನೂನುಬಾಹಿರವಲ್ಲ. ಈ ಬಗ್ಗೆ ನ್ಯೂಸ್‌ಚೆಕರ್ 2020ರ ಸೆಪ್ಟೆಂಬರ್ 14ರಲ್ಲಿಯೇ ಫ್ಯಾಕ್ಟ್‌ಚೆಕ್ ಮಾಡಿದೆ. ಹಿಮಾಚಲ ಪ್ರದೇಶದಲ್ಲಿ ಭೂಮಿ ಖರೀದಿಯ ಕೆಲವು ನಿಮಯಗಳನ್ನು ಸಡಿಲಿಸಲಾಗಿದೆ. ಹೀಗಾಗಿ, ಕಾನೂನಾತ್ಮಕವಾಗಿಯೇ ಅಲ್ಲಿ ಪ್ರಿಯಾಂಕಾ ಬಂಗಲೆಯನ್ನು ಖರೀದಿಸಿದ್ದಾರೆ.

ಪ್ರತಿಪಾದನೆ: ಹಿಮಾಚಲ ಪ್ರದೇಶದ ಛರಾಬ್ರಾದಲ್ಲಿ ಅಕ್ರಮವಾಗಿ ಪ್ರಿಯಾಂಕಾ ಗಾಂಧಿ ಬಂಗಲೆ ಖರೀದಿಸಿದ್ದಾರೆ.

ಸತ್ಯಾಂಶ: ಮನೆಯು ಅಕ್ರವಾಗಿದೆ ಎಂಬ ಆರೋಪ ಸುಳ್ಳು. ಅಲ್ಲಿ ಪ್ರಿಯಾಂಕಾ ಖರೀದಿಸಿದ ಭೂಮಿ ಕಾನೂನುಬಾಹಿರವಲ್ಲ…!

 

 


ಇದನ್ನು ಓದಿರಿ : FACT CHECK | ಮೋದಿಯನ್ನು ಸೋಲಿಸಲು ಲಕ್ಷಾಂತರ ಮುಸ್ಲಿಮರು ದುಬೈನಿಂದ ಬಂದದ್ದು ನಿಜವೇ ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights