ಆಸ್ಪತ್ರೆಯಲ್ಲಿ ಸಾಯುತ್ತಿರುವ ತಾಯಿಗೆ ಮಗನ ನೋವಿನ ವಿದಾಯ…!

ಆಸ್ಪತ್ರೆಯಲ್ಲಿ ಸಾಯುತ್ತಿರುವ ತಾಯಿಗೆ ವಿಡಿಯೋ ಕರೆಯಲ್ಲಿ ಮಗ ನೋವಿನ ವಿದಾಯ ಹೇಳಿದ ಮನಕರಗುವ ಸಂದರ್ಭವನ್ನು ವೈದ್ಯರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ದೇಶ ವಿನಾಶಕಾರಿ ಕೋವಿಡ್ ವಿರುದ್ಧ ಹೋರಾಡುತ್ತಿದ್ದಂತೆ, ಅನೇಕ ಆರೋಗ್ಯ ಕಾರ್ಯಕರ್ತರು ತಮ್ಮ ಅಗ್ನಿಪರೀಕ್ಷೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗೊಂದು ಹೃದಯ ವಿದ್ರಾವಕ ಟ್ವಿಟ್ಟರ್ ಪೋಸ್ಟ್ನಲ್ಲಿ ವೈದ್ಯರು ಸಾಯುತ್ತಿರುವ ರೋಗಿಯ ಮಗನ ಕಥೆಯನ್ನು ಹಂಚಿಕೊಂಡಿದ್ದಾರೆ.

“ನಾವು ಸಾಮಾನ್ಯವಾಗಿ ನಮ್ಮ ಆಸ್ಪತ್ರೆಯಲ್ಲಿ ರೋಗಿಯ ಸಂಬಂಧಿಕರು ಬಯಸಿದನ್ನು ಮಾಡುತ್ತೇವೆ. ರೋಗಿಯೊಬ್ಬರ ಮಗ ತಾಯಿಯೊಂದಿಗೆ ಕೊನೆ ಬಾರಿಗೆ ಮಾತನಾಡಿಸಬೇಕು ಎಂದು ಆಸೆ ಪಟ್ಟಿದ್ದರು. ಮಾತನಾಡಲು ಕೆಲವು ನಿಮಿಷಗಳನ್ನು ಕೇಳಿದರು. ವೈದ್ಯರು ಮಗನ ಆಸೆಯಂತೆ ವೀಡಿಯೋ ಕರೆ ಮೂಲಕ ಆತನ ತಾಯಿಯನ್ನು ಮಾತನಾಡಿಸಿದಾಗ ಮಗ ತಾಯಿಗಾಗಿ ಒಂದು ಹಾಡನ್ನು ಹಾಡಿದ್ದಾರೆ “ಎಂದು ಡಾ.ದಿಪ್ಶಿಖಾ ಘೋಷ್ ಟ್ವೀಟ್ ಮಾಡಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ, “ಅವರು ‘ತೇರಾ ಮುಜ್ಸೆ ಹೈ ಪೆಹ್ಲೆ ಕಾ ನತಾ ಕೊಯಿ’ ಹಾಡನ್ನು ಹಾಡಿದರು. ನಾನು ಫೋನ್ ಹಿಡಿದು ಅಲ್ಲಿಯೇ ನಿಂತು, ಅವನ ತಾಯಿಯನ್ನು ನೋಡುತ್ತಿದ್ದೆ. ನನ್ನ ಸುತ್ತಲು ದಾದಿಯರು ಬಂದು ಮೌನವಾಗಿ ನಿಂತರು. ಮಗ ಹಾಡನ್ನು ಮಧ್ಯದಲ್ಲಿ ಮುಗಿಸಿದರು. ನಂತರ ಅವರು ತಾಯಿ ಆರೋಗ್ಯದ ಬಗ್ಗೆ ಕೇಳಿದರು. ನನಗೆ ಧನ್ಯವಾದ ಹೇಳಿದರು. ”

ಘೋಷ್ ಅವರು ಮುಂದುವರೆದು, “ನಾನು ಮತ್ತು ದಾದಿಯರು ಅಲ್ಲಿಯೇ ನಿಂತಿದ್ದೇವು. ನಾವು ನಮ್ಮ ತಲೆಗಳನ್ನು ಅಲ್ಲಾಡಿಸುತ್ತಿದ್ದೆವು. ನಮ್ಮ ಕಣ್ಣುಗಳು ತೇವವಾದವು. ದಾದಿಯರು ತಮ್ಮ ನಿಯೋಜಿತ ರೋಗಿಗಳತ್ತ ಹೋಗಿ ಕೆಲಸಕ್ಕೆ ಹಾಜರಾದರು ” ಎಂದು ಬರೆದಿದ್ದಾರೆ.

ಈ ಭಾವನಾತ್ಮಕ ಸಂದರ್ಭವನ್ನು ವೈದ್ಯರು ತಮ್ಮ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. ಕೊರೊನಾ ಅಟ್ಟಹಾಸದಲ್ಲಿ ಅದೆಷ್ಟೋ ಜನ ಎಲ್ಲಾ ಇದ್ದು ಅನಾಥರಾಗಿ ಹೋಗಿದ್ದಾರೆ.  ಅದಕ್ಕೆ ಈ ಟ್ವೀಟ್ ಸಾಕ್ಷಿಯಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights