ಲಾಕ್‍ಡೌನ್ ನಡುವೆಯೂ ಅದ್ದೂರಿ ಹುಟ್ಟುಹಬ್ಬ ಆಚರಿಸಿಕೊಂಡ ಬಿಜೆಪಿ ಶಾಸಕ!

ಕೊರೊನಾ ಸೋಂಕು ದಿನದಿಂದ ದಿನಕ್ಕೆ ಮನುಷ್ಯನ ದೇಹ ಸೇರುವ ಮೂಲಕ ತನ್ನ ಅಸ್ಥತ್ವವನ್ನು ಪ್ರದರ್ಶಿಸುತ್ತಲೇ ಇದೆ. ವೇಗವಾಗಿ ಹರಡುತ್ತಿರುವ ಸೋಂಕಿಗೆ ಬಲಿಯಾಗದಿರಲು ರಾಜ್ಯದಲ್ಲಿ ಲಾಕ್ ಡೌನ್ ಜಾರಿ ಮಾಡಲಾಗಿದೆ. ಜನ ಸೇರದಂತೆ ಮಾಲ್, ಮಸೀದ್, ದೇವಸ್ಥಾನ, ಥಿಯೇಟರ್, ಹಬ್ಬಗಳು, ಆಚರಣೆಗಳು, ಮದುವೆ ನಡೆಸದಂತೆ ಸರ್ಕಾರ ಸೂಚಿಸಿದೆ. ಮಾಸ್ಕ್, ಹ್ಯಾಂಡ್ ಗ್ಲೌಸ್, ಸ್ಯಾನಿಟೈಸರ್ ಹಾಗೂ ಪ್ರಮುಖವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಲಲು ಸೂಚಿಸಲಾಗುತ್ತಿದೆ. ಹೀಗಿದ್ದರೂ ಬಿಜೆಪಿ ಶಾಸಕರೊಬ್ಬರು ಜನರನ್ನು ಒಂದೆಡೆ ಸೇರಿಸಿ, ಬಿರಿಯಾನಿ ಊಟ ಹಾಕಿಸಿ ಅದ್ದೂರಿಯಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ಹೌದು.. ತುಮಕೂರು ಜಿಲ್ಲೆಯ ತುರುವೇಕೆರೆ ಕ್ಷೇತ್ರದ ಬಿಜೆಪಿ ಶಾಕರ ಮಸಾಲೆ ಜಯರಾಂ ಅದ್ದೂರಿ ಹುಟ್ಟುಹಬ್ಬವನ್ನು ಆಚರಿಸಿಕೊಂಡವರು. ಗುಬ್ಬಿ ತಾಲ್ಲೂಕಿನ ಇಡಗೂರು ಗ್ರಾಮದಲ್ಲಿ ಹುಟ್ಟುಹಬ್ಬಕ್ಕೆಂದು ಬಂದ ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ, ಮಾಸ್ಕ್ ಧರಿಸದೇ ಬಿರಿಯಾನಿ ತಿಂದು ಹೋಗಿದ್ದಾರೆ. ಇನ್ನೂ ಶಾಸಕರು ಕೂಡ ಜನರೊಟ್ಟಿಗೆ ಬೆರೆತು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಹೀಗೆ ಹೇಳುವುದು ಶಾಸ್ತ್ರ ತಿನ್ನುವುದು ಬದನೇಕಾಯಿ. ಬಿಜೆಪಿ ಶಾಸಕರೇ ಲಾಖ್ ಡೌನ್ ನನ್ನು ಗಂಭೀರವಾಗಿ ಪರಿಗಣನೆಗೆ ತೆಗೆದುಕೊಳ್ಳದೇ ಹೋದರೆ ಇನ್ನು ಜನರ  ಗತಿ ಏನು..? ಜನರಲ್ಲಿ ಜಾಗೃತಿ ಮೂಡಿಸಬೇಕಾದವರೇ ಜನರನ್ನು ಗುಂಪು ಸೇರುವಂತೆ ಮಾಡುವುದು ಎಷ್ಟು ಸರಿ ಎಂದು ನೆಟ್ಟಿಗರು ಪ್ರಶ್ನಿಸಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಾಗೂ ಫೋಟೋಗಳನ್ನು ಶೇರ್ ಮಾಡಿದ್ದಾರೆ.

ಜನರಿಗೆ ಮಾದರಿಯಾಗಬೇಕಾದ ಸಂದರ್ಭದಲ್ಲಿ ಜನರನ್ನು ಹಾದಿ ತಪ್ಪಿಸುವಂತಹ ಕೆಲಸ ಮಾಡುತ್ತಿರುವ ಇಂಥವರಿದಲೇ ಕೊರೊನಾ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು. ಇಂಥವರ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೋಳ್ಳಬೇಕಾಗಿದೆ. ಅಂದಾಹ ಮಾತ್ರ ಜನರು ನಿಯಮಗಳನ್ನು ಗಂಭೀರವಾಗಿ ಪರಿಗಣಿಸಲು ಸಾಧ್ಯವಾಗುತ್ತದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights