ನಟಿ ಸಂಜನಾ ಆಯೋಜಿಸುತ್ತಿದ್ದ ಲಿಮಿಟೆಡ್ ಆ್ಯಂಡ್ ಹೈಎಂಡ್ ಪಾರ್ಟಿ : ಏನಿದು ಡಿಡಿಎಸ್ ಪಾರ್ಟಿ?
ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾದಲ್ಲಿ ಜೈಲುವಾಸ ಅನುಭವಿಸುತ್ತಿದ್ದ ನಶೆ ರಾಣಿಯರ ಆದಾಯದ ಮೂಲದ ಹಿಂದೆ ಬಿದ್ದ ಸಿಸಿಬಿ ಆಶ್ಚರ್ಯಗೊಂಡಿದೆ. ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗರ್ಲಾನಿ ಆದಾಯದ ಮೂಲದ ಬಗ್ಗೆ ಸಿಸಿಬಿ ತನಿಖೆ ನಡೆಸತ್ತಿದ್ದು ಪ್ರಕರಣ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ನಟಿ ಸಂಜನಾ ಕಳೆದ 2 ವರ್ಷದಿಂದ 14 ಕೋಟಿ ಆದಾಯ ಹೊಂದಿದ್ದಾಳೆ. ಈ ಆದಾಯದ ಮೂಲ ಹುಡುಕುತ್ತಿರುವ ಸಿಸಿಬಿ ಬೆಚ್ಚಿಬಿದ್ದಿದೆ. ಯಾಕಂದ್ರೆ ನಶೆ ರಾಣಿ ಸಂಜನಾ ಆದಾಯದ ಮೂಲ ಕೇವಲ ಸಿನಿಮಾ ಮಾತ್ರ ಆಗಿರಲಿಲ್ಲ. ಬದಲಿಗೆ ದೊಡ್ಡ ದೊಡ್ಡ ಪಾರ್ಟಿಗಳನ್ನು ಆಯೋಜಿಸುವುದಾಗಿದೆ.
ನಟಿ ಸಂಜನಾ ಲಿಮಿಡೆಡ್ ಆಂಡ್ ಹೈಎಂಡ್ ಪಾರ್ಟಿಗಳನ್ನ ಆಯೋಜಿಸ್ತಾಯಿದ್ಲು. ಹಾಗಾದ್ರೆ ಏನಿದು ಲಿಮಿಡೆಡ್ ಆಂಡ್ ಹೈಎಂಡ್ ಪಾರ್ಟಿ? ಸಣ್ಣ ಪುಟ್ಟ ಮಂದಿಗೆ ಈ ಪಾರ್ಟಿ ಗೊತ್ತಿರಲು ಸಾಧ್ಯವೇ ಇಲ್ಲ ಬಿಡಿ. ಯಾಕಂದ್ರೆ ಇಲ್ಲಿ ಲಕ್ಷಂತಾರ ಹಣ ವೈಹಿವಾಟು ಆಗ್ತಾಯಿತ್ತು. ದುಡ್ಡಿದ್ದವರಿಗೆ ಮಾತ್ರ ಈ ಪಾರ್ಟಿಯಲ್ಲಿ ಎಂಟ್ರಿ.
ಈ ಪಾರ್ಟಿ ಮಂಗಳವಾರ ಮತ್ತು ಶನಿವಾರ ಮಾತ್ರ ನಡೆಯುತ್ತಿತ್ತು. ಈ ಪಾರ್ಟಿಯಲ್ಲಿ ಒಂದು ಬಾಟಲಿಗೆ 3500 ಒಬ್ಬರಿಗೆ ದಂಪತಿಗಳಿಗೆ 5000 ರೂ. ಸಮಯ ಕಳೆದರೆ ಹೆಚ್ಚು ಕುಡಿದರೆ ಹಣ ಏರ್ತಾಯಿತ್ತು. 10 ಗ್ರಾ. ಗಾಂಜಾಕ್ಕೆ 10,000 ನಿಗಧಿಯಾಗಿರುತ್ತೆ. ಮಾತ್ರವಲ್ಲದೇ ಈ ಪಾರ್ಟಿ ಹಾಲ್ ನಲ್ಲಿ ಮೊಬೈಲ್ ಬಳಕೆ ನಿಷೇಧ ಮಾಡಲಾಗಿರುತ್ತದೆ. ಕೌಂಟರ್ ನಲ್ಲಿ ಮಾತ್ರ ಗಾಂಜಾ ಸೇರಿದಂತೆ ಬೇರೆ ಬೇರೆ ಡ್ರಗ್ಸ್ ಹಣಕ್ಕೆ ನೀಡಲಾಗುತ್ತಿತ್ತು. ದೊಡ್ಡ ರಾಜಕಾರಣಿಗಳ ಮಕ್ಕಳು, ಬಿಸಿನೆಸ್ ಮ್ಯಾನ್ ಗಳು 30 ವರ್ಷದ ಯುವಕ ಯುವತಿಯರು, ಮಾಡೆಲ್ಸ್ ಗಳು ಇಲ್ಲಿ ಸೇರಿರುತ್ತಿದ್ರು. ಮಾತ್ರವಲ್ಲದೇ ಕೆಲವರನ್ನು ಮಾತ್ರ ಇಲ್ಲಿ ಇನ್ವೈಟ್ ಮಾಡಲಾಗುತ್ತಿತ್ತು.
ಅಷ್ಟಕ್ಕೂ ಈ ಲಿಮಿಡೆಡ್ ಆಂಡ್ ಹೈಎಂಡ್ ಪಾರ್ಟಿ ಮೂರು ಹಂತದಲ್ಲಿ ನಡೆಸಲಾಗುತ್ತೆ. 1ನೇ ಹಂತದಲ್ಲಿ ಕುಡಿತಕ್ಕೆ ಅವಕಾಶ, 2ನೇ ಹಂತದಲ್ಲಿ ಡ್ರಗ್ಸ್ , 3ನೇ ಹಂತದಲ್ಲಿ ಸೆಕ್ಸ್ ಗೆ ಅವಕಾಶವಿರುತ್ತದೆ. ಡಿಡಿಎಸ್ ಅಂದರೆ ಎಣ್ಣೆ, ಡ್ರಗ್ಸ್, ಸೆಕ್ಸ್ ಪಾರ್ಟಿ ಎನ್ನಲಾಗುತ್ತದೆ. ಹೀಗಾಗಿ ಇದನ್ನು ಲಿಮಿಡೆಡ್ ಆಂಡ್ ಹೈಎಂಡ್ ಪಾರ್ಟಿ ಅಂತ ಕರೆಲಾಗುತ್ತದೆ.
ಬಹುತೇಕ ಈ ಪಾರ್ಟಿಗಳನ್ನು ಹೊರಹೊಲಯದ ಐಷಾರಾಮಿ ಹೋಟೆಲ್ ಗಳು, ಪಬ್, ಬಾರ್ ಗಳಲ್ಲಿ ನಡೆಸಲಾಗುತ್ತಿತ್ತು. ಲಾಸ್ ನಲ್ಲಿರುವ ಪಬ್, ಬಾರ್ ಗಳೇ ಇವರ ಟಾರ್ಗೇಟ್ ಆಗಿರ್ತಾಯಿದ್ವು ಎನ್ನಲಾಗುತ್ತಿದೆ. ಬಂಧಿತ ಸಂಜನಾ ಗೆಳೆಯ ವಿರೇನ್ ಖನ್ನಾ ಪಾರ್ಟಿ ಆಯೋಜಕನಾಗಿರುತ್ತಿದ್ದ. ಇವನಿಗೆ ಒಂದು ಪಾರ್ಟಿಗೆ ಕೋಟಿ ಕೋಟಿ ಹಣ ಕೈ ಸೇರ್ತಾಯಿತ್ತು. ಒಂದು ಪಾರ್ಟಿಗೆ 20% ಹಣ ಖನ್ನಾ ಪಡೆಯುತ್ತಿದ್ದ. ಇದೇ ಹಣದಲ್ಲಿ ಸಂಜನಾ ಸೇರಿದಂತೆ ಹಲವರಿಗೆ ಹಣ ಕೊಡ್ತಾಯಿದ್ದನು.
ವಿರೇನ್ ಖನ್ನಾ ದೊಡ್ಡ ಮಟ್ಟದ ಗ್ರೂಪ್ ಹೊಂದಿದ್ದಾನೆ. ಪಾರ್ಟಿ ವೇಳೆ ವಾಟ್ಸಪ್ ಗ್ರೂಪ್ ನಲ್ಲಿ ಮೆಸೆಜ್ ಮಾಡ್ತಾಯಿದ್ದ. ಲಾಸ್ ಅಲ್ಲಿರೋ ಪಬ್ ಬಾರ್ ಗಳೇ ಈತನ ಟಾರ್ಗೇಟ್ ಆಗ್ತಾಯಿದ್ರು. ಪಬ್ ಬಾರ್ ಮಾಲೀಕರೊಂದಿಗೆ ಮಾತನಾಡಿ ಪರ್ಸೆಂಟ್ ಲೆಕ್ಕ ಮಾತುಕತೆ ಆಡ್ತಾಯಿದ್ದ ಖನ್ನಾ. ಪಾರ್ಟಿಗಳಲ್ಲಿ ಮಾಡೆಲ್ಸ್ ಗಳನ್ನು ಕರೆಸಿಕೊಳ್ತಾಯಿದ್ದ. ಖನ್ನಾ ಜೊತೆಗೆ ಮತ್ತೊಬ್ಬ ಪ್ರಮೂಖ ವ್ಯಕ್ತಿ ಕೈವಾಡವಿದೆ. ಆತ ಮಾಸ್ಟರ್ ಮೈಂಡ್ ಮನ್ಸೂರ್ ಮಿಸ್ಸಿ.
ಖನ್ನಾಗೆ ಏನ್ ಬೇಕು ಅದನ್ನೆಲ್ಲಾ ಪೂರೈಕೆ ಮಾಡ್ತಾಯಿದ್ದ ಮನ್ಸೂರ್ ಮಿಸ್ಸಿ. ಈತ ಇಡೀ ಪ್ರಕರಣದ ರೂವಾರಿಯಾಗಿದ್ದಾನೆ. ಸದ್ಯ ಈತ ತಲೆಮರಿಸಿಕೊಂಡಿದ್ದು ಸಿಸಿಬಿ ಈತನ ಪತ್ತೆಗೆ ಬಲೆ ಬೀಸಿದೆ.

