ನಶೆ ರಾಣಿಯರ ಆದಾಯ ರಹಸ್ಯ! ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾಗೆ ಟ್ವಿಸ್ಟ್!

ಡ್ರಗ್ಸ್ ಮಾಫಿಯಾ ಸಂಬಂಧಿಸಿದಂತೆ ಜೈಲುವಾಸ ಅನುಭವಿಸುತ್ತಿರುವ ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗರ್ಲಾನಿ ಆದಾಯದ ಮೂಲದ ಬಗ್ಗೆ ಸಿಸಿಬಿ ತನಿಖೆ ನಡೆಸತ್ತಿದ್ದು ಪ್ರಕರಣ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಇಬ್ಬರು ನಟಿಯರು ಕಳೆದ 2 ವರ್ಷದಿಂದ ಗಳಿಸಿದ ಆದಾಯ ಕಂಡು ಸಿಸಿಬಿ ಬೆಚ್ಚಿಬಿದ್ದಿದೆ.

ಹೌದು.. ಒಂದು ಸಿನಿಮಾ ಮಾಡಿದರೆ 20 ರಿಂದ 30 ಲಕ್ಷ ಬರೋದು ಕಷ್ಟ ಇದೆ. ಅದ್ರಲ್ಲೂ ಸಂಜನಾ ಹಾಗೂ ರಾಗಿಣಿ ಹೇಳಿಕೊಳ್ಳುವಂತಹ ನಟಿಯರಲ್ಲ. ಆದರೂ ನಟಿ ಸಂಜನಾ 2 ವರ್ಷದಲ್ಲಿ ಗಳಿಸಿದ ಹಣವೆಷ್ಟು ಗೊತ್ತಾ…? ಒಂದಲ್ಲಾ ಎರಡಲ್ಲ ಬರೊಬ್ಬರಿ 14 ಕೋಟಿ. ಮಾತ್ರವಲ್ಲದೇ 2 ವರ್ಷದಲ್ಲಿ ಕೋಟಿಗಟ್ಟಲೆ ಸಂಪಾದನೆ ಮಾಡಿ ಹೂಡಿಕೆ ಮಾಡಿದ್ದಾರೆ. ಸಾಲದ ರೂಪದಲ್ಲಿ ಹಣ ಕೊಟ್ಟಿದ್ದಾರೆ. ಪ್ರಾಪರ್ಟಿಗಳಲ್ಲಿ ಆಸ್ತಿ ಪಾಸ್ತಿಗಳಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಸೀಕ್ರೇಟ್ ಪಾರ್ಟಿಗಳನ್ನು ಮಾಡ್ತಾಯಿದ್ರು.

ಅಧಿಕ ಮೊತ್ತದ ಗಿಫ್ಟ್ ರೂಪದಲ್ಲಿ ಪಡೆಯುವುದು ಮಾತ್ರವಲ್ಲದೇ ನೀಡ್ತಾಯಿದ್ರು. ಮಾಡೆಲ್ ಗಳನ್ನು ಕಳುಹಿಸಿ ಕೊಡ್ತಾಯಿದ್ರು ಸಂಜನಾ. ಆದಾಯದ ಮೂಲ ಕೆದಕುವ ಮೂಲ ಕೆದಕುವ ವೇಳೆ ಕೆಲ ಕಾಸಗಿ ವೀಡಿಯೋ ಗಳು ಲಭ್ಯವಾಗಿವೆ. ಸಂಜನಾ ಖಾಸಗಿ ವೀಡಿಯೋಗಳನ್ನು ಸಂಜನಾ ಮಾಡ್ತಾಯಿದ್ರು ಅನ್ನೋ ಅನುಮಾನ ಶುರುವಾಗಿದೆ. ದೊಡ್ಡ ಉದ್ಯಮಿಗಳು, ಎಸ್ಟೇಟರ್ಸ್ ಗಳಿಂದ ಸಂಜನಾ ಹಣ ಪಡೆದಿದ್ದರು ಎನ್ನುವುದು ತನಿಖೆ ವೇಳೆ ಬಯಲಾಗಿದೆ.

ನಿನ್ನೆ ನಟಿ ಸಂಜನಾ ಹಾಗೂ ರಾಗಿಣಿ ಸಲ್ಲಿಸಿದ ಜಾಮೀನು ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ. ಸುಮಾರು ಎರಡು ತಿಂಗಳಿನಿಂದ ಜೈಲುವಾಸ ಅನುಭವಿಸುತ್ತಿರುವ ನಟಿಯರಿಗೆ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಈ ವೇಳೆ ತನಿಖೆ ಇನ್ನಷ್ಟು ಚುರುಕುಗೊಂಡಿದ್ದು ನಟಿಯರ ನಶೆ ಇಳಿಸುತ್ತಿದೆ ಸಿಸಿಬಿ.

ಸದ್ಯ ನಶೆ ರಾಣಿಯರ ಆದಾಯದ ಮೂಲದ ಹಿಂದೆ ಬಿದ್ದ ಸಿಸಿಬಿ ತನಿಖೆ ನಡೆಸುತ್ತಿದೆ. ಬಂಧನ ದಿನದಿಂದಲೂ ಜಾಮೀನಿಗಾಗಿ ಹೋರಾಟ ನಡೆಸುತ್ತಿರುವ ನಟಿಯರು ಸಾಕಷ್ಟು ಸುದ್ದಿಯಲ್ಲಿದ್ದಾರೆ. ಸಂಜನಾ ಹಾಗೂ ರಾಗಿಣಿ ಬಂಧನ ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾದ ಮಾಸ್ಟರ್ ಗಳ ನಿದ್ದೆಗೆಡಿಸಿತ್ತು. ಮಾಫಿಯಾದಲ್ಲಿ ಭಾಗಿಯಾಗಿರುವವರಿಗೆ ಸಂಕಷ್ಟ ಶುರುವಾಗಿದೆ. ಇದರ ಬೆನ್ನಲ್ಲೆ ಇಬ್ಬರು ನಟಿಯರಿಗೆ ಜೈಲುವಾಸ ನಶೆಯನ್ನು ಇಳಿಸಿತ್ತು.

ಜಾಮೀನು ಅರ್ಜಿಗಳನ್ನು ಹೈಕೋರ್ಟ್ ತೀರ್ಪು ಕಾಯ್ದಿರಿಸಿತ್ತು. ಜೊತೆಗೆ ಸಿಸಿಬಿ ನಟಿಯರಿಗೆ ಜಾಮೀನು ನೀಡದಂತೆ ಮನವಿ ಮಾಡಿತ್ತು. ಹೀಗಾಗಿ ನಟಿಮಣಿಯರಿಗೆ ಜಾಮೀನು ದೊರೆತಿರಲಿಲ್ಲ. ಆದರೆ ಪರಪ್ಪನ ಅಗ್ರಹಾರದಲ್ಲಿ ದಿನಕಳೆಯುತ್ತಿರುವ ನಟಿಯರು ಸಲ್ಲಿಸಿದ ಜಾಮೀನು ಅರ್ಜಿಯನ್ನು ನ್ಯಾ. ಶ್ರೀನಿವಾಸ್ ಹರೀಶ್ ಕುಮಾರ್ ಅವರನ್ನೊಳಗೊಂಡ ಏಕಸದಸ್ಯ ಪೀಠ ತಿರಸ್ಕರಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights