Fact check: ಭಾರಿ ಜನಸ್ತೋಮ ಎಂದು ಎಡಿಟ್ ಮಾಡಿದ ಫೋಟೋ ಹಂಚಿಕೊಂಡ ಯೋಗಿ ಆದಿತ್ಯನಾಥ್!

ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣಾ ಕಾವು ಜೋರಾಗಿದೆ. ಬಿಜೆಪಿ, ಎಸ್‌ಪಿ, ಬಿಎಸ್‌ಪಿ ಮತ್ತು ಕಾಂಗ್ರೆಸ್ ಪಕ್ಷಗಳ ಚುನಾವಣಾ ಜಿದ್ದಾಜಿದ್ದಿಗೆ ಸದ್ಯ ಉತ್ತರಪ್ರದೇಶ ಸಾಕ್ಷಿಯಾಗಿದೆ. ಈ ನಡುವೆ ಡಿಜಿಟಲ್ ವೇದಿಕೆಗಳಲ್ಲಿಯೂ ಪ್ರಚಾರ ಜೋರಾಗಿದೆ. ಅದರೊಟ್ಟಿಗೆ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಫೆಬ್ರವರಿ 15, 2022 ರಂದು ಇಟಾವಾದಲ್ಲಿ ನಡೆದ ಬಿಜೆಪಿ ಚುನಾವಣಾ ರ್ಯಾಲಿಯಲ್ಲಿ  ಯೋಗಿ ಆದಿತ್ಯನಾಥ್  ಭಾರಿ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದರು ಎಂಬ ಫೋಟೊವನ್ನು ಸ್ವತಃ ಯೋಗಿ ಆದಿತ್ಯನಾಥ್ ಹಂಚಿಕೊಂಡಿದ್ದಾರೆ.

ಅದನ್ನು ಫೇಸ್ ಬುಕ್ ಅಲ್ಲದೆ ಟ್ವಿಟರ್ ನಲ್ಲಿಯೂ ಸಹ ಹಂಚಿಕೊಂಡಿದ್ದಾರೆ.

ವೈರಲ್ ಆಗುತ್ತಿರುವ ಯೋಗಿ ಆದಿತ್ಯನಾಥ್ ಫೋಟೋ ಬಗ್ಗೆ ಅನುಮಾನಗೊಂಡಿರುವ ಕೆಲವರು Ensuddi.com ನೊಂದಿಗೆ ಮಾತನಾಡಿ ಇಟಾವಾದ ರ್ಯಾಲಿ ಮತ್ತು ಅಲ್ಲಿ ಸೇರಿರುವ ಜನಸ್ತೋಮದ ವೈರಲ್ ಫೋಟೋ ಬಗ್ಗೆ ಅನುಮಾನ ವ್ಯಕ್ತಪಡಿಸಿ ಇದನ್ನು ಫ್ಯಾಕ್ಟ್‌ಚೆಕ್ ಮಾಡುವಂತೆ ಮನವಿ ಮಾಡಿದ್ದಾರೆ. ಹಾಗಾಗಿ ಆ ಪೋಸ್ಟ್‌ನ ಸತ್ಯಾಸತ್ಯತೆಗಳ ಕುರಿತು ಪರಿಶೀಲಿಸೋಣ.

ಫ್ಯಾಕ್ಟ್ ಚೆಕ್

ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಫೋಟೋದ ನೈಜತೆ ಬಗ್ಗೆ ಸಂದೇಹಗಳು ಮೂಡುವಂತಿವೆ . ಯೋಗಿ ಆದಿತ್ಯನಾಥ್ ಒಂದು ಕಡೆಗೆ ಕೈಬೀಸುತ್ತಿದ್ದರೆ ಅವರ ಬೆಂಬಲಿಗರು ಬೇರೆ ಕಡೆಗೆ ತಿರುಗಿರುವುದನ್ನು ಫೋಟೋದಲ್ಲಿ ಗಮನಿಸಬಹುದು.

ಯೋಗಿ ಆದಿತ್ಯನಾಥ್ ಅವರ ಫೋಟೋವನ್ನು ಮಾರ್ಕ್ ಮಾಡಿಕೊಂಡು ಗೂಗಲ್‌ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಅದು ಡಿಸೆಂಬರ್ 20, 2021 ರಂದು ಪ್ರಕಟವಾದ ಇಂಡಿಯಾ ಟುಡೇ ದಲ್ಲಿ ಪ್ರಕಟವಾದ ಲೇಖನವೊಂದರಲ್ಲಿ  ಯೋಗಿ ಆದಿತ್ಯನಾಥ್ ಅವರು ರ್ಯಾಲಿಯಲ್ಲಿ ಕೈಬೀಸುತ್ತಿರುವ ಅದೇ  ಹೋಲಿಕೆ ಇರುವ ಫೋಟೋ ಲಭ್ಯವಾಗಿದೆ.

ಸುದ್ದಿ ಸಂಸ್ಥೆ ಫೋಟೋ ಕೃಪೆಯನ್ನು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (ಪಿಟಿಐ) ಗೆ ನೀಡಿದೆ. 2022 ರ ಯುಪಿ ಚುನಾವಣೆಗೆ ಮುನ್ನ ಭಾನುವಾರ ಬಿಜೆಪಿಯ ‘ಜನ್ ವಿಶ್ವಾಸ ಯಾತ್ರೆ’ ಉದ್ಘಾಟನೆಯ ಸಂದರ್ಭದಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಬೆಂಬಲಿಗರ ಕಡೆಗೆ ಕೈ ಬೀಸಿದರು” ಎಂದು ಫೋಟೋದೊಂದಿಗೆ ಶೀರ್ಷಿಕೆ ಬರೆಯಲಾಗಿದೆ. ಯೋಗಿ ಆದಿತ್ಯನಾಥ್ ಅವರು ಡಿಸೆಂಬರ್ 19, 2021 ರಂದು ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಅದೇ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ನಂತರ ನಾವು ವೈರಲ್ ಫೋಟೋವನ್ನು ಪಿಟಿಐ ಚಿತ್ರದೊಂದಿಗೆ ಹೋಲಿಸಿದ್ದೇವೆ ಮತ್ತು ಅವುಗಳ ನಡುವೆ ಗಮನಾರ್ಹ ಹೋಲಿಕೆಗಳನ್ನು ಇರುವುದನ್ನು ಗಮನಿಸಬಹುದು.

ಅಲ್ಲದೆ ಯೋಗಿ ಆದಿತ್ಯನಾಥ್ ಅವರ ಇತ್ತೀಚಿನ ಇಟಾವಾ ರ್ಯಾಲಿಯಲ್ಲಿ ಜನಸಂದಣಿಯತ್ತ ಕೈ ಬೀಸುತ್ತಿರುವ ಫೋಟೋ ಎಂದು ಅತ್ಯಾಧುನಿಕ ಡಿಜಿಟಲ್  ಕೌಶಲ್ಯವನ್ನು ಬಳಸಿ  ಎಡಿಟ್ ಮಾಡಿ, ಅವರು ಜನರತ್ತ ಕೈಬೀಸುತ್ತಿರುವಂತೆ ಜೋಡಿಸಲಾಗಿದೆ ಎಂಬುದನ್ನು ಫೊರೆನ್ಸಿಕ್ಸ್ ಮೂಲಕ ಕಂಡುಕೊಂಡಿದ್ದೇವೆ. ಫ್ಯೂಷನ್ ಪ್ಯಾರಾಮೀಟರ್ ಮೂಲಕ ಫೋಟೋ ಎಡಿಟ್ ಮಾಡಿದ್ದಾರೆ ಎಂಬುದು ನಿಚ್ಚಳವಾಗಿದೆ.

ಬಾರಿ ಜನಸ್ತೋಮ ಇರುವ ಫೋಟೋ ಇಟಾವಾದಲ್ಲಿ ನಡೆದೆ ರ್ಯಾಲಿಯಿಂದ ತೆಗೆದಿರುವ ಪೋಟೋ ಅಲ್ಲ. ಅದು 2021 ಫೆಬ್ರವರಿ 15ರಲ್ಲಿ ನಡೆದ ಕಾರ್ಯಕ್ರಮದ್ದು ಆದರೆ ಇದನ್ನು 2022 ಎಂದು ತಪ್ಪಾಗಿ ಹೇಳಲಾಗುತ್ತಿದೆ. ಆದಿತ್ಯನಾಥ್ ಅವರ ಫೋಟೋವನ್ನು ಅಲ್ಲಿಗೆ ಸೇರಿಸಿ ಎಡಿಟ್ ಮಾಡಲಾಗಿದೆ. ಆದರೆ ಯಾವ ಉದ್ದೇಶಕ್ಕಾಗಿ ಇದನ್ನು ಎಡಿಟ್ ಮಾಡಿ ಫೋಟೋವನ್ನು ಸೇರಿಸಿದ್ದಾರೆ ಎಂದು ಗೊತ್ತಾಗಿಲ್ಲ”.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಫೋಟೋ 2021ರಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ಯೋಗಿ ಕಾರ್ಯಕ್ರಮದ್ದೆ ಆಗಿದ್ದರೂ ಸಹ ಅದನ್ನು 2022 ಫೆಬ್ರವರಿ 15 ರಂದು ನಡೆದ ರ್ಯಾಲಿ ಎಡಿಟ್ ಮಾಡಿ ತಪ್ಪಾಗಿ ವೈರಲ್ ಮಾಡಲಾಗುತ್ತಿದೆ. ಚುನಾವಣೆಗೆ ಮುನ್ನ ಜನ ಸೇರಿದ್ದಾರೆ ಎಂದು ಬಿಂಬಿಸುವುದಕ್ಕಾಗಿ ಎಡಿಟ್ ಮಾಡಿರಬಹುದು ಎಂದು ಹಲವರು ಆರೋಪಿಸಿದ್ದಾರೆ. ಒಟ್ಟಿನಲ್ಲಿ ಯೋಗಿ ಆದಿತ್ಯನಾಥ್‌ರವರ ಇಟವಾ ರ್ಯಾಲಿ ಎಂದು ಹಂಚಿಕೆಯಾಗುತ್ತಿರುವ ಫೋಟೊ ಎಡಿಟೆಡ್ ಆಗಿದೆ.


ಇದನ್ನು ಓದಿರಿ: Fact check: ಫೆಬ್ರವರಿ 14 “ಪ್ರೇಮಿಗಳ ದಿನ” ಆಕಾಶಕಾಯದಲ್ಲಿ ಕಂಡ ವಿಚಿತ್ರ ದೃಶ್ಯಾವಳಿಗಳ ಹಿಂದಿನ ರಹಸ್ಯವೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights