Fact check: ಪಂಜಾಬ್‌ನಲ್ಲಿ ‘ರಾಹುಲ್ ಗಾಂಧಿ’ ಮಾಡಿದ ಭಾಷಣವನ್ನು ಟ್ರೋಲ್ ಮಾಡಿದ ಬಲಪಂಥಿಯರು

ಆಲೂಗಡ್ಡೆ ಮತ್ತು ಟೊಮ್ಯಾಟೊ ಬದಲಿಗೆ ಚಿಪ್ಸ್ ಮತ್ತು ಕೆಚಪ್ ಬೆಳೆಯಲು ರಾಹುಲ್ ಗಾಂಧಿ ರೈತರಿಗೆ ಕೇಳಿಕೊಂಡಿದ್ದಾರೆ ಎಂಬ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ರಾಜೀವ್ ಗಾಂಧಿ ಮೆಣಸಿನಕಾಯಿಯ ಬಗ್ಗೆ ಇದೇ ರೀತಿಯ ಹೇಳಿಕೆ ನೀಡಿದ್ದರು ಎಂದು ಪೋಸ್ಟ್‌ಕಾರ್ಡ್ ಕನ್ನಡ  ಮಾಡಿರುವ  ಪೋಸ್ಟ್ ನಲ್ಲಿ ಹೇಳಲಾಗಿದೆ. ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ವಾಸ್ತವವಾಗಿ ಪರಿಶೀಲಿಸೋಣ.

 

ಫ್ಯಾಕ್ಟ್‌ಚೆಕ್:

ರಾಹುಲ್ ಗಾಂಧಿ ಅಂತಹ ಯಾವುದೇ ಹೇಳಿಕೆ ಕೊಟ್ಟಿದ್ದಾರಾ? ಎಂದು ಪರಿಶೀಲಿಸಲು ಸಾಮಾಜಿಕ ಜಾಲತಾಣಗಳಲ್ಲಿ ಹುಡುಕಿದಾಗ, ಪಂಜಾಬ್ ಹೋಶಿಯಾರ್‌ಪುರ  ನಲ್ಲಿ ಇತ್ತೀಚೆಗೆ ನಡೆದ ರ್ಯಾಲಿಯಲ್ಲಿ ರಾಹುಲ್ ಗಾಂಧಿಯವರ ಹೇಳಿಕೆಗಳಿಗೆ  ಸಂಬಂಧಿಸಿದಂತೆ ಅನೇಕ ಸುದ್ದಿ ಲೇಖನಗಳು ಲಭ್ಯವಾಗಿವೆ.

ರ್ಯಾಲಿಯಲ್ಲಿ ರಾಹುಲ್ ಗಾಂಧಿಯವರ ಭಾಷಣದ ಕ್ಲಿಪ್ ಅನ್ನು ‘ANI’ ಟ್ವೀಟ್ ಮಾಡಿದೆ.  “ನೀವು ಫುಡ್ ಪಾರ್ಕ್‌ನಲ್ಲಿ ಏನೇ ಬೆಳೆದರೂ ಅದು ಆಲೂಗಡ್ಡೆ ಚಿಪ್ಸ್ ಅಥವಾ ಟೊಮೆಟೊ ಕೆಚಪ್ ಆಗಿರಲಿ, ನಿಮ್ಮ ಉತ್ಪನ್ನಗಳನ್ನು ನೇರವಾಗಿ ನಿಮ್ಮ  ಹೊಲಗಳಿಂದ ರವಾನಿಸುವ ಮೂಲಕ ಎಲ್ಲವನ್ನೂ ತಯಾರಿಸಬಹುದು” ಎಂದಿದ್ದರು.

ರಾಹುಲ್ ಗಾಂಧಿ ತಮ್ಮ ಭಾಷಣದ ವೇಳೆ ತಡವರಿಸಿದಂತೆ ಕಂಡುಬಂದಿದ್ದು, ಸ್ವಲ್ಪ ವಿರಾಮ ತೆಗೆದುಕೊಂಡು ಮಾತು ಮುಂದುವರೆಸಿದ್ದಾರೆ. “ನೀವು ನಿಮ್ಮ ಭೂಮಿಯಲ್ಲಿ ಬೆಳೆಯನ್ನು ಉತ್ಪಾದಿಸುತ್ತೀರಿ – ನೀವು ಅದನ್ನು ನೇರವಾಗಿ ಆಹಾರ ಸಂಸ್ಕರಣಾ ಘಟಕಕ್ಕೆ ಕೊಂಡೊಯ್ಯುತ್ತೀರಿ . ಅದು ಆಲೂಗಡ್ಡೆ, ಟೊಮೆಟೊ, ಮೆಣಸಿನಕಾಯಿ ಯಾವುದೇ ಆಗಿರಲಿ, ನೀವು ಉತ್ಪಾದಿಸುವ ಯಾವುದನ್ನಾದರೂ ಕೊಟ್ಟು ನೀವು ಹಣ ಪಡೆಯಬಹುದು. ಎಂದು ಹೇಳಿದ್ದಾರೆ.

ಪೋಸ್ಟ್‌ನಲ್ಲಿ ಉಲ್ಲೇಖಿಸಿರುವ ರಾಜೀವ್ ಗಾಂಧಿಯವರ ಹೇಳಿಕೆ  ಕುರಿತಂತೆ ಗೂಗಲ್ ಸರ್ಚ್ ಮಾಡಿದಾಗ  ಯಾವುದೇ ಅಧಿಕೃತ ಹಳೆಯ ಪುರಾವೆಗಳು ಸಿಗದಿದ್ದರೂ, ಇತ್ತೀಚಿನ ಅನೇಕ ಸುದ್ದಿ ಲೇಖನಗಳು ಮೆಣಸಿನಕಾಯಿಯ ಬಗ್ಗೆ ಅವರ ಕುರಿತು ಉಲ್ಲೇಖಿಸಿವೆ.

“ಪ್ರಧಾನಿ ಮೋದಿ ಕೂಡ ತಮ್ಮ ಭಾಷಣವೊಂದರಲ್ಲಿ ಪರೋಕ್ಷವಾಗಿ ಪ್ರಸ್ತಾಪಿಸಿದ್ದಾರೆ. ‘ANI‘ ಪ್ರಕಾರ, ಹಸಿರು ಮೆಣಸಿನಕಾಯಿಗಿಂತ ಕೆಂಪು ಮೆಣಸಿನಕಾಯಿ ದುಬಾರಿಯಾಗಿದೆ ಎಂದು ರಾಜೀವ್ ಗಾಂಧಿಗೆ ಒಮ್ಮೆ ಹೇಳಲಾಯಿತು, ಆದ್ದರಿಂದ ಅವರು ರೈತರನ್ನು ಕೇಳಿದರು – “ಕೆಂಪು ಮೆಣಸಿನಕಾಯಿಯು ನಿಮಗೆ ಹೆಚ್ಚಿನ ವೆಚ್ಚ ಆಗುವುದರಿಂದ ನೀವು ಕೆಂಪು ಮೆಣಸಿನಕಾಯಿಯನ್ನು ಯಾಕೆ ಬೆಳೆಯುತ್ತಿರಿ ಎಂದು ರೈತರನ್ನು ಪ್ರಶ್ನಿಸಿದ್ದರು ಎಂದು ವ್ಯಂಗ್ಯವಾಗಿ ಹೇಳಿದ್ದರು ಎಂದು ANI ವರದಿ ಮಾಡಿದ್ದಾರೆ. ”

ಒಟ್ಟಾರೆಯಾಗಿ ಹೇಳುವುದಾದರೆ, ಆಹಾರ ಸಂಸ್ಕರಣಾ ಘಟಕಗಳ ಸಂದರ್ಭದಲ್ಲಿ ಆಲೂಗೆಡ್ಡೆ ಚಿಪ್ಸ್ ಮತ್ತು ಟೊಮೆಟೊ ಕೆಚಪ್ ಬಗ್ಗೆ ರಾಹುಲ್ ಗಾಂಧಿ ಮಾಡಿದ ಭಾಷಣದ ವೇಳೆ  ಅವರು ತಡವರಿಸಿದರು ಮತ್ತು ಸ್ವಲ್ಪ ವಿರಾಮ ತೆಗೆದುಕೊಂಡು ತಮ್ಮ ಭಾ‍ಷಣ ಮುಂದುವರೆಸಿದರು. ಆದರೆ ಇದನ್ನು ಬಲಪಂಥಿಯ ಪ್ರತಿಪಾದಕರು ರಾಹುಲ್ ಗಾಂಧಿಯನ್ನು ಟ್ರೋಲ್ ಮಾಡುವ ಮೂಲಕ ತಪ್ಪು ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.


ಇದನ್ನು ಓದಿರಿ: Fact check: ಎಚ್ಚರ: ಖಾತೆಯೇ ಇಲ್ಲದ “ಮುಸ್ಕಾನ್ ಖಾನ್” ಹೆಸರಿನಲ್ಲಿ ಸೃಷ್ಟಿಯಾಗಿವೆ ಹಲವು ನಕಲಿ ಟ್ವಿಟರ್ ಖಾತೆಗಳು!


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights