fact check: ಚೈನಾ ಗಡಿಯಲ್ಲಿ ಭಾರತೀಯ ಸೇನೆಯು ಸಿಖ್ ಧ್ವಜ ಹಾರಿಸಿದ್ದು ನಿಜವೇ?

ಹಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಭಾರತೀಯ ಸೇನೆಯು ಸಿಖ್ ಧ್ವಜವನ್ನು ಹಾರಿಸುತ್ತಿರುವ ಮತ್ತು ‘ಬೋಲೆ ಸೋ ನಿಹಾಲ್ ಸತ್ ಶ್ರೀ ಅಕಾಲ್’ ಎಂದು ಜಪಿಸುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಭಾರತ-ಚೀನಾ ಗಡಿಯಲ್ಲಿ ಭಾರತೀಯ ಸೇನೆಯ ಸಿಖ್ ರೆಜಿಮೆಂಟ್ ಗುರುದ್ವಾರವನ್ನು ನಿರ್ಮಿಸಿದೆ ಮತ್ತು ಸಿಖ್ ಧ್ವಜವನ್ನು ಹಾರಿಸಿದೆ ಎಂದು ಪೋಸ್ಟ್‌ನಲ್ಲಿ ಪ್ರತಿಪಾದಿಸಲಾಗಿದೆ.

ಟ್ವಿಟರ್ ಬಳಕೆದಾರರು @nandiniidnani69 ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ವೈರಲ್ ಪೋಸ್ಟ್ ಸುಮಾರು 4 ಸಾವಿರ ವೀವ್ಸ್ ಆಗಿದೆ. ಹಲವಾರು ಇತರ ಟ್ವಿಟರ್ ಬಳಕೆದಾರರು ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.

ಫೇಸ್‌ಬುಕ್ ನಲ್ಲು ಈ ಪೋಸ್ಟ್‌ ಸುಮಾರು 10 ಸಾವಿರಕ್ಕೂ ಹೆಚ್ಚು  ಅಧಿಕ ಬಾರಿ ಶೇರ್ ಆಗಿದ್ದು, ವ್ಯಾಪಕವಾಗಿ ವೈರಲ್ ಮಾಡೆಲಾಗಿದೆ.

ಇಂಡೋ- ಪಾಕ್, ಇಂಡೋ -ಚೈನಾದ ಭೂಭಾಗ ಅಥವಾ ಗಡಿ ಪ್ರದೇಶದ ವಿಷಯಗಳು ಎಂದಾಕ್ಷಣ ಭಾರತೀಯರು ಸದಾ ಭಾವನಾತ್ಮಕವಾಗಿ ಯೋಚಿಸುತ್ತಾರೆ. ಇಂತಹ ವಿಷಯಗಳು ಬಹುಬೇಗನೆ ಸುದ್ದಿಯಾಗುತ್ತವೆ ಈ ಕಾರಣಕ್ಕೆ  ವೀಡಿಯೋ ಕೂಡ ವೈರಲ್ ಆಗಿದ್ದು, ಇದರ ವಾಸ್ತವತೆಗಳ ಬಗ್ಗೆ ಜನರಿಗೆ ಸರಿಯಾದ ಮಾಹಿತಿಯನ್ನು ನೀಡುವ ಸಲುವಾಗಿ  ಫ್ಯಾಕ್ಟ್ ಚೆಕ್ ಮಾಡಲಾಗಿದೆ.

ಫ್ಯಾಕ್ಟ್ ಚೆಕ್:

ಭಾರತ ಚೀನಾ ಗಡಿ ಭಾಗದಲ್ಲಿ ಈ ಭಾರತೀಯ ಸೇನೆಯು ಸಿಖ್ ಧ್ವಜವನ್ನು ಹಾರಿಸಿದೆ ಎಂದು ವೈರಲ್ ಆಗಿರುವ ಸುದ್ದಿಯನ್ನು ಫ್ಯಾಕ್ಟ್ ಚೆಕ್ ಮಾಡಿದಾಗ ಅದು ನಡೆದಿರುವ ಸ್ಥಳ “ಲೇಹ್‌ನಲ್ಲಿರುವ ಗುರುದ್ವಾರ ಪಥರ್ ಸಾಹಿಬ್ ಆಗಿದ್ದು, ಇಂಡೋ ಚೈನಾ ಪಾಕ್ ಅಲ್ಲವೆಂದು ತಿಳಿದು ಬಂದಿದೆ. “ವೀಡಿಯೊದ ಸ್ಥಳವು ಭಾರತ-ಚೀನಾ ಗಡಿಯ ಸಮೀಪದಲ್ಲಿ ಎಲ್ಲಿಯೂ ಇಲ್ಲದ ಲೇಹ್‌ನಲ್ಲಿರುವ ಗುರುದ್ವಾರ ಪಥರ್ ಸಾಹಿಬ್ ಆಗಿದೆ”  ಎಂದು ಅಧಿಕಾರಿಯೊಬ್ಬರು ದೃಢಪಡಿಸಿದಾರೆ. ಗುರುದ್ವಾರದಿಂದ ಗಡಿ ಸಾಕಷ್ಟು ದೂರದಲ್ಲಿದ್ದು ಅದರ ನಕ್ಷೆಯನ್ನು ಕಾಣಬಹುದಾಗಿದೆ.

ಗೂಗಲ್‌ನಲ್ಲಿ ಕೀವರ್ಡ್ ಸರ್ಚ್ ನಡೆಸಿದಾಗ ಲಭ್ಯವಾದ ಮಾಹಿತಿ ಪ್ರಕಾರ – ‘ಗುರುದ್ವಾರ ಪಥರ್ ಸಾಹಿಬ್ ಆರ್ಮಿ ಇನ್‌ಸ್ಟಾಲ್ ಪೋಲ್’ – ಮತ್ತು ಶೇರ್ ಇ ಪಂಜಾಬ್ ರೇಡಿಯೋ ಎಂಬ ವೆಬ್‌ಸೈಟ್‌ನಿಂದ ವರದಿಯನ್ನು ಕಂಡುಕೊಂಡಿದ್ದೇವೆ. ಅಕ್ಟೋಬರ್ 25, 2021 ರಂದು ಪ್ರಕಟವಾದ ಅದರ ವರದಿಯು ಲೇಹ್‌ನಲ್ಲಿರುವ ಗುರುದ್ವಾರ ಪಥರ್ ಸಾಹಿಬ್‌ನಲ್ಲಿ 80 ಅಡಿ ನಿಶಾನ್ ಸಾಹಿಬ್ ಅನ್ನು ಇತ್ತೀಚೆಗೆ ಸ್ಥಾಪಿಸಲಾಗಿದೆ ಎಂದು ಹೇಳಿದೆ.

https://twitter.com/mssirsa/status/1452543428479238147?ref_src=twsrc%5Etfw%7Ctwcamp%5Etweetembed%7Ctwterm%5E1452543428479238147%7Ctwgr%5E%7Ctwcon%5Es1_&ref_url=https%3A%2F%2Fwww.altnews.in%2Fvideo-of-indian-army-men-installing-sikh-flag-is-from-leh-not-indo-china-border%2F

ಅದೇ ದಿನ ಬಿಜೆಪಿ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ ಅವರು ಟ್ವೀಟ್ ಮಾಡಿದ ವೀಡಿಯೊವನ್ನು ಶೇರ್ ಮಾಡಿದ್ದಾರೆ. 

ಹೀಗಾಗಿ, ಲೇಹ್‌ನ ಗುರುದ್ವಾರ ಪಥರ್ ಸಾಹಿಬ್‌ನಲ್ಲಿ ಭಾರತೀಯ ಸೇನೆಯು ಸಿಖ್ ಧ್ವಜವನ್ನು ಹಾರಿಸಿದೆ. ಈ ಸಂದರ್ಭದಲ್ಲಿ ಮಾಡಲಾದ ವೀಡಿಯೊವನ್ನು ಭಾರತ-ಚೀನಾ ಗಡಿಯಲ್ಲಿ ಧ್ವಜವನ್ನು ಹಾರಿಸಲಾಗಿದೆ ಎಂಬ ತಪ್ಪು ಹೇಳಿಕೆಯೊಂದಿಗೆ ವೀಡಿಯೋವನ್ನು ವೈರಲ್ ಮಾಡಲಾಗಿದೆ.


ಇದನ್ನು ಓದಿರಿ: Fact check: ಕಾಶ್ಮೀರದಲ್ಲಿ ರಾಷ್ಟ್ರಗೀತೆ ಹಾಡುವಂತೆ ಸೈನಿಕರು ಯುವಕರಿಗೆ ಹಲ್ಲೆ ಮಾಡಿದ್ದು ನಿಜವೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights