Fact check: ಕಾಶ್ಮೀರದಲ್ಲಿ ರಾಷ್ಟ್ರಗೀತೆ ಹಾಡುವಂತೆ ಸೈನಿಕರು ಯುವಕರಿಗೆ ಹಲ್ಲೆ ಮಾಡಿದ್ದು ನಿಜವೆ?

ಕಾಶ್ಮೀರದಲ್ಲಿ  ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗಿದ ಕೆಲವು ಯುವಕರನ್ನು ಭಾರತೀಯ ಸೇನೆಯ ಸೈನಿಕರು ರಾಷ್ಟ್ರಗೀತೆ ಹಾಡಲು ಒತ್ತಾಯಿಸಿದರು ಎಂಬ ಹೇಳಿಕೆಯೊಂದಿಗೆ ವೀಡಿಯೊವನ್ನು ವ್ಯಾಪಕವಾಗಿ ಪ್ರಸಾರ ಮಾಡಲಾಗುತ್ತಿದೆ. ಗಾಯಗಳೊಂದಿಗೆ ರಸ್ತೆಯ ಮೇಲೆ ಬಿದ್ದಿದ್ದ ಯುವಕರ ಗುಂಪನ್ನು ಪೊಲೀಸ್ ಸಿಬ್ಬಂದಿ  ಹಿಂಸಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಘಟನೆಯ ನೈಜತೆಯನ್ನು ತಿಳಿಯಲು ಫ್ಯಾಕ್ಟ್ ಚೆಕ್ ಮಾಡಲಾಗಿದೆ.

ಈ ಪೋಸ್ಟನ್ನು ಇಲ್ಲಿ ನೋಡಬಹುದು.

ಫ್ಯಾಕ್ಟ್‌ಚೆಕ್:

2020 ರ ಆರಂಭದಲ್ಲಿ ನಡೆದ ದೆಹಲಿ ಗಲಭೆಯ ಸಂದರ್ಭದಲ್ಲಿ ದೆಹಲಿ ಪೊಲೀಸರು ರಾಷ್ಟ್ರಗೀತೆಯನ್ನು ಹಾಡಲು ಯುವಕರ ಗುಂಪನ್ನು ಒತ್ತಾಯಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಸುದ್ದಿ ವರದಿಗಳ ಪ್ರಕಾರ, ವೀಡಿಯೊದಲ್ಲಿ ತೋರಿಸಲಾದ ವ್ಯಕ್ತಿಗಳಲ್ಲಿ ಒಬ್ಬರು ಗಾಯಗೊಂಡು ಸಾವನ್ನಪ್ಪಿದರು. ಈ ವಿಡಿಯೋಗೂ ಕಾಶ್ಮೀರಕ್ಕೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದಾನೆಯು ಸುಳ್ಳಾಗಿದೆ.

ವೀಡಿಯೊದ ಸ್ಕ್ರೀನ್‌ಶಾಟ್‌ಗಳನ್ನು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ 2020ರಲ್ಲಿ ಒಂದೇ ರೀತಿಯ ದೃಶ್ಯಗಳನ್ನು ವರದಿ ಮಾಡಿದ ಸುದ್ದಿಗಳು ಲಭ್ಯವಾಗಿವೆ. ಒಂದು ಸುದ್ದಿ ವರದಿಯ ಪ್ರಕಾರ, ಫೆಬ್ರವರಿ 2020 ರಲ್ಲಿ ದೆಹಲಿ ಗಲಭೆಯ ಸಂದರ್ಭದಲ್ಲಿ ದೆಹಲಿ ಪೊಲೀಸ್ ಸಿಬ್ಬಂದಿ ಯುವಕರ ಗುಂಪಿಗೆ ರಾಷ್ಟ್ರಗೀತೆ ಹಾಡಲು ಒತ್ತಾಯಿಸಿದ ಘಟನೆಯನ್ನು ವೀಡಿಯೊ ತೋರಿಸುತ್ತದೆ. ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲೂ ಕೂಡ ವೈರಲ್ ಆಗಿತ್ತು. ವರದಿಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಸುದ್ದಿ ವರದಿಯ ಪ್ರಕಾರ, ಗಾಯಗೊಂಡ ಐವರಲ್ಲಿ ಒಬ್ಬರು ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ. ಮತ್ತು ಮೃತನ ತಾಯಿ ‘ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ತನಿಖೆ ನಡೆಸುವಂತೆ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

2022 ರ ಜನವರಿ 12 ರಂದು ದೆಹಲಿ ಹೈಕೋರ್ಟ್ ‘ದೆಹಲಿ ಗಲಭೆಯ ಸಂದರ್ಭದಲ್ಲಿ 23 ವರ್ಷದ ಫೈಜಾನ್ ಎಂಬ ವ್ಯಕ್ತಿಯನ್ನು ರಾಷ್ಟ್ರಗೀತೆ ಹಾಡಲು ಒತ್ತಾಯಿಸಿದ ಘಟನೆಯ ತನಿಖೆ ವಿಳಂಬವನ್ನು ಪ್ರಶ್ನಿಸಿದ್ದರಿಂದ ಈ ಘಟನೆ ಮತ್ತೊಮ್ಮೆ ಸುದ್ದಿಯಾಗಿ ವೈರಲ್ ಆಗಿದೆ.

ಪ್ರಕರಣದ ಇತ್ತೀಚಿನ ಬೆಳವಣಿಗೆಯನ್ನು ಸುದ್ದಿ ಮಾಡಿದ ವರದಿಯನ್ನು ಇಲ್ಲಿ ಓದಬಹುದು. 2022 ರ ಜನವರಿ 11 ರಂದು ದೆಹಲಿ ಹೈಕೋರ್ಟ್‌ನಲ್ಲಿ ನಡೆದ ಈ ಪ್ರಕರಣದ ಇತ್ತೀಚಿನ ವಿಚಾರಣೆಯಲ್ಲಿ, ಎಫ್‌ಐಆರ್ ಸಂಖ್ಯೆ 75/ ರಲ್ಲಿ 23 ವರ್ಷದ ಫೈಜಾನ್ ಸಾವಿನ ಕುರಿತು ಇದುವರೆಗಿನ ತನಿಖೆಯ ವಿವರವಾದ ಸಮಗ್ರ ಸ್ಥಿತಿಯ ವರದಿಯನ್ನು ಸಲ್ಲಿಸಲು ಪೊಲೀಸರಿಗೆ ಸೂಚಿಸಲಾಗಿದೆ.

2020 ರಲ್ಲಿ ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದಾಗ, ಆಲ್ಟ್ ನ್ಯೂಸ್ ಸ್ವತಂತ್ರವಾಗಿ ವೀಡಿಯೊದ ಸ್ಥಳ ಮತ್ತು ಸಂದರ್ಭದ ಸತ್ಯಾಸತ್ಯತೆಯನ್ನು ಸಂತ್ರಸ್ತರೊಬ್ಬರೊಂದಿಗೆ ಮಾತನಾಡುವ ಮೂಲಕ ಪರಿಶೀಲಿಸಿದೆ, ಅವರು 2020 ರ ಆರಂಭದಲ್ಲಿ ದೆಹಲಿ ಗಲಭೆಯಲ್ಲಿ ಈ ಘಟನೆ ಸಂಭವಿಸಿದೆ ಎಂದು ದೃಢಪಡಿಸಿದ್ದಾರೆ. ಈ ವೀಡಿಯೊಗೂ ಕಾಶ್ಮೀರಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ದೆಹಲಿ ಗಲಭೆಯ ಸಂದರ್ಭದಲ್ಲಿ ರಾಷ್ಟ್ರಗೀತೆಯನ್ನು ಹಾಡಲು ಪೊಲೀಸರು  ಒತ್ತಾಯಿಸಿದ ಹಳೆಯ ವೀಡಿಯೊವನ್ನು ಕಾಶ್ಮೀರದಲ್ಲಿ ಭಾರತೀಯ ಸೇನೆಗೆ ತಪ್ಪಾಗಿ ಆರೋಪಿಸಲಾಗಿದೆ.

  ಕೃಪೆ: ಆಲ್ಟ್ ನ್ಯೂಸ್


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಸಂಸ್ಕೃತ ಭಾಷೆಯ ಆಧಾರದ ಮೇಲೆ ಸೂಪರ್ ಕಂಪ್ಯೂಟರ್ ರಚನೆ ಮಾಡುವ ಬಗ್ಗೆ NASA ವಿಜ್ಞಾನಿಗಳು ಹೇಳಿದ್ದಾರೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.