ಆಂದೋಲನ್‌ಜೀವಿ ಆಗಿದ್ದ ಮೋದಿ ಈಗ ಅಂಬಾನಿಜೀವಿ ಆಗಿದ್ದಾರೆ; ಅಂಬಾನಿಗಾಗಿ ಪೆಟ್ರೋಲ್ ಬೆಲೆ 100 ರೂ.ಗೆ ಏರಿಸಿದ್ದಾರೆ: ಕಾಂಗ್ರೆಸ್

ಕೊರೊನಾ ಸಂಕಷ್ಟದ ನಡುವೆಯೂ ಇಂಧನ ಬೆಲೆಯನ್ನು ಕೇಂದ್ರ ಸರ್ಕಾರ ಹೆಗ್ಗಿಲ್ಲದೇ ಹಚ್ಚಿಸುತ್ತಿದೆ. ಈ ತಿಂಗಳಿನಲ್ಲಿಯೇ ಸುಮಾರು 10 ಭಾರಿ ತೈಲ ಬೆಲೆ ಏರಿಕೆಯಾಗಿದೆ. ಹೀಗಾಗಿ ಕರ್ನಾಟಕ ಕಾಂಗ್ರೆಸ್ ಬೆಲೆ ಏರಿಕೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದು, ಬಿಜೆಪಿಗರ ಹಳೆಯ ಫೋಟೋಗಳನ್ನು ವೈರಲ್ ಮಾಡುತ್ತಿದೆ.

ಪೆಟ್ರೋಲ್, ಡೀಸೆಲ್ ಮತ್ತು ಎಲ್ಪಿಜಿ ಬೆಲೆ ಒಂದೇ ಸಮನೆ ಏರುತ್ತಿದೆ.ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಪೆಟ್ರೊಲ್ ಬೆಲೆ 97 ರೂ ಗಡಿ ದಾಟಿದ್ದು, ಬೆಂಗಳೂರಿನಲ್ಲಿ 93ರೂ ಮುಟ್ಟಿದೆ. ಇನ್ನೇನು ಪೆಟ್ರೋಲ್ ಬೆಲೆ ಶತಕ ಬಾರಿಸಲಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಇದೇ, ಯುಪಿಎ ಸರಕಾರದ ಅವಧಿಯಲ್ಲಿ, ತೈಲ ಬೆಲೆ ಏರಿಕೆಯ ವಿರುದ್ದ ಬಿಜೆಪಿ ಮುಖಂಡರು ಕಾಂಗ್ರೆಸ್ ವಿರುದ್ದ ತಿರುಗಿ ಬಿದ್ದಿದ್ದ ಫೋಟೋ, ವಿಡಿಯೋಗಳನ್ನು ಇದೀಗ ಕಾಂಗ್ರೆಸ್ ರೀ ಪೋಸ್ಟ್ ಮಾಡಿದ್ದು, ಬಿಜೆಪಿಗರನ್ನು ಲೇವಡಿ ಮಾಡುತ್ತಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಆತ್ಮೀಯ ಸ್ಮೃತಿ ಇರಾನಿಅವರೇ, ಮೋದಿ ಸರ್ಕಾರ ನಾಗರೀಕರನ್ನು ಲೂಟಿ ಮಾಡುತ್ತಿದೆ ಎಂದು ಅರ್ಥ ಮಾಡಿಕೊಳ್ಳಲು ಯಾರಿಗೂ ಯೇಲ್ ವಿಶ್ವವಿದ್ಯಾಲಯದ ಪದವಿ ಬೇಕಿಲ್ಲ. ಆಂದೋಲನ್ ಜೀವಿ ಆಗಿದ್ದ ನೀವು ಬೆಲೆ ಏರಿಕೆಯ ವಿರುದ್ದ ಪ್ರಧಾನಿ ರಾಜೀನಾಮೆಗೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ ಮಾಡಬೇಕಿತ್ತು ಎಂಬುದನ್ನು ನೆನಪಿಡಿ ಎಂದು ಟ್ವೇಟ್ ಮಾಡಿದೆ.

 

ಕರ್ನಾಟಕ ಬಿಜೆಪಿ ಪಕ್ಷದ ಆಂದೋಲನ್ ಜೀವಿಗಳು ಪೆಟ್ರೋಲ್ ಬೆಲೆ 70₹ ಇದ್ದಾಗ
🔸ಸೈಕಲ್ ಏರಿದ್ದರು
🔸ಭಾರತ್ ಬಂದ್ ಮಾಡಿದ್ದರು
🔸ರಸ್ತೆಯಲ್ಲಿ ಅಡುಗೆ ಮಾಡಿದ್ದರು
🔸ರಸ್ತೆ ತಡೆ ನಡೆಸಿದ್ದರು
🔸ಬೀದಿಯಲ್ಲಿ ಹೊರಳಾಡಿದ್ದರು
🔸ಮೈಗೆ ಪೆಟ್ರೋಲ್ ಸುರಿದುಕೊಂಡಿದ್ದರು.

ಆದರೆ, ಈಗ ಪೆಟ್ರೋಲ್ 100 ರೂ ಆಗಿದೆ, ಅವರು ಈಗೆಲ್ಲ ಹೋದರು? ಎಂದು ಬಿಜೆಪಿಗರ ಹಳೇ ಫೋಟೋಗಳನ್ನು ಟ್ವೀಟ್ ಮಾಡಿದೆ.

https://twitter.com/INCKarnataka/status/1362762831288889347?s=19

 

ಪ್ರಧಾನಿ ನರೇಂದ್ರ ಮೋದಿ ಅವರೇ, CM ಮೋದಿಯವರ ಪ್ರಶ್ನೆಗಳಿಗೆ ಉತ್ತರಿವಿದೆಯಾ? ಪಿಎಂ ಮೋದಿಯವರಿಗಿಂತ ಸಿಎಂ ಮೋದಿಯವರಿಗೆ ಬೆಲೆ ಏರಿಕೆಯ ಬಗ್ಗೆ ಕಾಳಜಿ ಇದ್ದಂಗಿದೆ, ಏಕೆಂದರೆ ಆಗ ಅವರೂ ಆಂದೋಲನ್‌ಜೀವಿ ಆಗಿದ್ದರು! ಈಗ ಅಂಬಾನಿಜೀವಿ ಆಗಿರುವ ಕಾರಣ ಪೆಟ್ರೋಲ್ l100 ತಲುಪಿಸಿದ್ದಾರೆ, ಜನರನ್ನ ಮರೆತಿದ್ದಾರೆ ಎಂದು ಟ್ವೀಟ್ ಮಾಡಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights