ಚೆಸ್ಕಾಂ ಲೈನ್ ಮೆನ್ ದರ್ಪಕ್ಕೆ ಫೌಲ್ಟ್ರಿ ಫಾರಂ ೨೫ ಕೋಳಿ ಬಲಿ…..
ಚೆಸ್ಕಾಂ ಲೈನ್ ಮೆನ್ ದರ್ಪಕ್ಕೆ ಫೌಲ್ಟ್ರಿ ಫಾರಂ ೨೫ ಕೋಳಿ ಬಲಿಯಾದ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಡಿಂಕಾ ಗ್ರಾಮದಲ್ಲಿ ನಡೆದಿದೆ.
ವಿದ್ಯುತ್ ಬಿಲ್ ಪಾವತಿಸಿಲ್ಲವೆಂದು ಉದ್ದೇಶಪೂರ್ವಕವಾಗಿ ಫೌಲ್ಟ್ರಿ ಫಾರಂ ವಿದ್ಯುತ್ ಕಡಿತಗೊಳಿಸಿ ದರ್ಪ ಮೆರೆದಿದ್ದಾರೆ. ಡಿಂಕಾ ಸತೀಶ್ ಎಂಬುವರಿಗೆ ಸೇರಿದ ಫೌಲ್ಟ್ರೀ ಫಾರಂ ನಲ್ಲಿ ವಿದ್ಯುತ್ ಕಡಿತ ಮಾಡಿದ ಪರಿಣಾಮ ಶಾಖ ಮತ್ತು ನೀರಿಲ್ಲದೆ ಕೋಳಿಗಳು ಸಾವಿಗೀಡಾಗುತ್ತಿವೆ.
ಇದುವರೆಗೂ ೨೫ ಕೋಳಿಗಳು ಸಾವಿಗೀಡಾಗಿದ್ದು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಫೌಲ್ಟ್ರೀ ಫಾರಂ ಮಾಲೀಕ ಕೋಳಿಗಳ ಸಾವಿನಿಂದ ಕಂಗಾಲಾಗಿದ್ದಾರೆ. ಒಂದು ತಿಂಗಳ ವಿದ್ಯುತ್ ಬಿಲ್ ಪಾವತಿಸದ ಕಾರಣಕ್ಕೆ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿದೆ.
ಕೊನೆಯ ದಿನವಾದ ಇಂದು3 ಸಾವಿರ ರೂ ವಿದ್ಯುತ್ ಬಿಲ್ ಪಾವತಿಸಬೇಕಿದ್ದ ಫೌಲ್ಟ್ರೀ ಪಾರಂ ಮಾಲೀಕನಿಂದ ಸಾವಿಗೀಡಾಗ್ತಿರೋ ಕೋಳಿಗಳ ಸಾವಿಗೆ ಲೈನ್ ಮೆನ್ ಕಾರಣನಾಗಿದ್ದು ಪರಿಹಾರಕ್ಕೆ ಒತ್ತಾಯ ಹೇರಿದ್ದಾರೆ.
ಲೈನ್ ಮೆನ್ ವಿರುದ್ದ ಪಾಂಡವಪುರ ಪೊಲೀಸ್ ಠಾಣೆಗೆ ಮಾಲೀಕನಿಂದ ದೂರು ದಾಖಲಾಗಿದೆ.

