ಕೋವಿಡ್ -19 ಆರೈಕೆ ಆಸ್ಪತ್ರೆಯಲ್ಲಿ ಬೆಂಕಿ : 76 ರೋಗಿಗಳ ಸ್ಥಳಾಂತರ! ಇಬ್ಬರು ಸಾವು?

ಕೋವಿಡ್ -19 ಆರೈಕೆ ಆಸ್ಪತ್ರೆಯಲ್ಲಿ ಬೆಂಕಿ ಅವಘಡದಿಂದಾಗಿ 76 ರೋಗಿಗಳನ್ನು ಸ್ಥಳಾಂತರಿಸಲಾಗಿದ ಘಟನೆ ಮುಂಬಯಿಯ ಭಂಡಪ್‌ನ ಮಾಲ್‌ನಲ್ಲಿ ನಡೆದಿದೆ.

ಕೋವಿಡ್ -19 ಆರೈಕೆ ಆಸ್ಪತ್ರೆಯಲ್ಲಿ ಶುಕ್ರವಾರ ಮುಂಜಾನೆ ಬೆಂಕಿ ಕಾಣಿಸಿಕೊಂಡಿದ್ದು 76 ರೋಗಿಗಳನ್ನು ಸ್ಥಳಾಂತರಿಸಲಾಗಿದೆ. ಈ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಆರಂಭದಲ್ಲಿ ವರದಿಯಾಗಿತ್ತು. ಆದರೆ ಬೆಂಕಿಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

‘ಲೆವೆಲ್ 4’ ಎಂದು ವರ್ಗೀಕರಿಸಲ್ಪಟ್ಟ ಬೆಂಕಿ ಮಧ್ಯರಾತ್ರಿಯ ಸ್ವಲ್ಪ ಸಮಯದ ನಂತರ ಮೂರು ಅಂತಸ್ತಿನ ಕಟ್ಟಡವಾದ ಡ್ರೀಮ್ಸ್ ಮಾಲ್‌ನ ಮೊದಲ ಮಹಡಿಯಲ್ಲಿ ಭುಗಿಲೆದ್ದಿತು. ನಂತರ ಸನ್‌ರೈಸ್ ಆಸ್ಪತ್ರೆ ಮೂರನೇ ಮಹಡಿಗೆ ಹಬ್ಬಿದೆ.

ಘಟನೆಯ ನಂತರ ಕೆಲವು ರೋಗಿಗಳು ಕಾಣೆಯಾಗಿದ್ದಾರೆ. ಅವರನ್ನು ಗುರುತಿಸಿ ಹುಡುಕುವ ಪ್ರಯತ್ನಗಳು ನಡೆಯುತ್ತಿವೆ ಎಂದು ಸನ್‌ರೈಸ್ ಆಸ್ಪತ್ರೆಯ ಸಿಇಒ ಡಾ.ಹಫೀಜ್ ರೆಹಮಾನ್ ಹೇಳಿದ್ದಾರೆ.

ಬೆಂಕಿಯ ನಂತರ, 30 ರೋಗಿಗಳನ್ನು ಕೋವಿಡ್ -19 ಚಿಕಿತ್ಸಾ ಕೇಂದ್ರವಾದ ಮುಲುಂಡ್ ಜಂಬೊ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಅಲ್ಲಿ ನಾಲ್ವರು ಗಂಭೀರ ಸ್ಥಿತಿಯಲ್ಲಿದ್ದಾರೆ – ಇಬ್ಬರು ರೋಗಿಗಳು ತೀವ್ರ ನಿಗಾ ಘಟಕದಲ್ಲಿದ್ದಾರೆ (ಐಸಿಯು), ಮತ್ತು ಇಬ್ಬರು ಆಮ್ಲಜನಕದ ಬೆಂಬಲದಲ್ಲಿದ್ದಾರೆ. ಇತರ ರೋಗಿಗಳನ್ನು ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದ್ದು, ಕೋವಿಡ್ ಅಲ್ಲದ ರೋಗಿಗಳನ್ನು ಫೋರ್ಟಿಸ್ ಆಸ್ಪತ್ರೆಗೆ ವರ್ಗಾಯಿಸಲಾಯಿತು.

ಬೆಂಕಿಗೆ ಕಾರಣವನ್ನು ಇನ್ನೂ ಕಂಡುಹಿಡಿಯಲಾಗಿಲ್ಲ. ತನಿಖೆ ಮಾಡಲಾಗುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights