ಕ್ಯಾನ್ಸರ್ ಚಿಕಿತ್ಸೆಗೆ ಒಳಗಾದ ರಾಖಿ ಸಾವಂತ್ ತಾಯಿಯಿಂದ ಸಲ್ಲುಬಾಯ್ಗೆ ಥ್ಯಾಂಕ್ಯೂ..!

ಕ್ಯಾನ್ಸರ್ ಚಿಕಿತ್ಸೆಯಲ್ಲಿರುವ ನಟಿ ರಾಖಿ ಸಾವಂತ್ ಅವರ ತಾಯಿ ಜಯ, ಸಲ್ಮಾನ್ ಖಾನ್ ಮತ್ತು ಅವರ ಸಹೋದರ ಸೊಹೈಲ್ ಖಾನ್ ಅವರಿಗೆ ಆರ್ಥಿಕ ನೆರವು ನೀಡಿದ್ದಕ್ಕಾಗಿ ಧನ್ಯವಾದ ಅರ್ಪಿಸಿದ್ದಾರೆ.

ರಾಖಿ ಸಾವಂತ್ ತನ್ನ ಇನ್ಸ್ಟಾಗ್ರಾಮ್ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಸಲ್ಮಾನ್ ಖಾನ್ ಥ್ಯಾಂಕ್ಯೂ ಹೇಳಿ ಬಿಗ್ ಬಾಸ್ 14 ಕಾರ್ಯಕ್ರಮವನ್ನು ಟ್ಯಾಗ್ ಮಾಡಿದ್ದಾರೆ.

ವೀಡಿಯೊದಲ್ಲಿ ಕೀಮೋಥೆರಪಿಗೆ ಒಳಗಾದ ರಾಖಿ ಸಾವಂತ್ ಅವರ ತಾಯಿ ಆಸ್ಪತ್ರೆಯಿಂದ ಸಲ್ಮಾನ್ ಖಾನ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. “ಸಲ್ಮಾನ್ ಜಿ, ಧನ್ಯವಾದಗಳು ಮಗ. ಸೊಹೈಲ್ ಜಿ, ಧನ್ಯವಾದಗಳು. ಕೀಮೋ ನಾಲ್ಕು ಆಗಿದೆ ಇನ್ನೂ ಎರಡು ಬಾಕಿ ಇದೆ. ಸಲ್ಮಾನ್ ಖಾನ್ ಅವರಿಗೆ ಆಶೀರ್ವಾದ ಮತ್ತು ಶುಭವಾಗಲಿ” ಎಂದು ಹಾರೈಸಿದ್ದಾರೆ. ಈ ವೇಳೆ ರಾಖಿ ಕೂಡ ಸಲ್ಲು ಬಾಯ್ ಗೆ ಕೃತಜ್ಞೆತೆಗಳನ್ನು ತಿಳಿಸಿದ್ದಾರೆ.

ರಾಖಿ ಸಾವಂತ್ ಗುರುವಾರ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು ಇಲ್ಲಿದೆ:

ಇತ್ತೀಚೆಗೆ ಟೈಮ್ಸ್ ಆಫ್ ಇಂಡಿಯಾಕ್ಕೆ ನೀಡಿದ ಸಂದರ್ಶನದಲ್ಲಿ, ರಾಖಿ ಸಾವಂತ್ ಅವರು ಸಲ್ಮಾನ್ ಮತ್ತು ಸೊಹೈಲ್ ಇಬ್ಬರೂ ಕುಟುಂಬಕ್ಕೆ ವೈದ್ಯಕೀಯ ವೆಚ್ಚವನ್ನು ಸಹಾಯ ಮಾಡುತ್ತಿದ್ದಾರೆ ಎಂದು ಬಹಿರಂಗಪಡಿಸಿದರು: “… ಚಿಕಿತ್ಸೆಯ ಬಹುಪಾಲು ಭಾಗವನ್ನು ಸಲ್ಮಾನ್ ಖಾನ್ ಸರ್ ನೋಡಿಕೊಂಡಿದ್ದಾರೆ. ಅವರು ನಿಜವಾಗಿಯೂ ದೇವರು ಮತ್ತು ಅವರ ಸಹೋದರ ಸೊಹೈಲ್ ಖಾನ್ ಕೂಡ. ಇಬ್ಬರೂ ವೈದ್ಯರೊಂದಿಗೆ ಸಂಪರ್ಕದಲ್ಲಿದ್ದಾರೆ. ಅವರ ಚಿಕಿತ್ಸೆಯ ಪ್ರತಿಕ್ರಿಯೆಯನ್ನು ತೆಗೆದುಕೊಳ್ಳುತ್ತಿದ್ದಾರೆ. ಸರ್ವಶಕ್ತರಿಂದ ನಾನು ಇನ್ನೇನು ಕೇಳಬಹುದು” ಎಂದು ಹೇಳಿದ್ದರು.

ರಾಖಿ ಸಾವಂತ್ ಇತ್ತೀಚೆಗೆ ಮುಕ್ತಾಯಗೊಂಡ ಬಿಗ್ ಬಾಸ್ 14 ರಲ್ಲಿ ಕಾಣಿಸಿಕೊಂಡಿದ್ದರು. ಈ ಸೀಸನ್ ನನ್ನು ಅವರು ಚಾಲೆಂಜರ್ ಆಗಿ ಮನೆಗೆ ಪ್ರವೇಶಿಸಿದರು. ಫೆಬ್ರವರಿ 21 ರಂದು ನಡೆದ ಅಂತಿಮ ಸಂಚಿಕೆಯಲ್ಲಿ, ಅವರು ಶೋನಲ್ಲಿ 14 ಲಕ್ಷ ಮೊತ್ತದೊಂದಿಗೆ ಪ್ರದರ್ಶನವನ್ನು ತೊರೆದರು. ಕಾರ್ಯಕ್ರಮದಿಂದ ನಿರ್ಗಮಿಸಿದ ನಂತರ, ರಾಖಿ ಸಾವಂತ್ ಅವರು ಹಣವನ್ನು ತಾಯಿಯ ಚಿಕಿತ್ಸೆಗಾಗಿ ಬಳಸುವುದಾಗಿ ಹೇಳಿದರು. ಆದರೂ ಹಣದ ಅಭಾವ ಆದ್ದರಿಂದ ಸಲ್ಲು ಬಾಯ್ ನೆರವಿಗೆ ನಿಂತಿದ್ದಾರೆ. ಈ ಹಿಂದೆ ರೆಮೋ ಅವರ ಚಿಕಿತ್ಸೆಗೂ ಸಲ್ಲು ಬಾಯ್ ಸಹಾಯ ಮಾಡಿದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights