ಕ್ರಿಕೆಟ್‌ ಲೋಕಕ್ಕೆ ಗುಡ್‌-ಬೈ ಹೇಳಿದ ಯೂಸುಫ್ ಪಠಾಣ್; ಎಲ್ಲಾ ರೀತಿಯ ಕ್ರಿಕೆಟ್‌ನಿಂದ ನಿವೃತ್ತಿ!

ಭಾರತ ಕ್ರಿಕೆಟ್‌ ತಂಡದ ಮಾಜಿ ಆಲ್‌ರೌಂಡರ್ ಯೂಸುಫ್ ಪಠಾಣ್ ಅವರು ಎಲ್ಲಾ ರೀತಿಯ ಕ್ರಿಕೆಟ್‌ ಆಟಗಳಿಂದ ನಿವೃತ್ತಿ ಘೋಷಿಸಿದ್ದಾರೆ.

“ನನ್ನ ಜೀವನದ ಈ ಇನ್ನಿಂಗ್ಸ್‌ಗೆ ಪೂರ್ಣ ವಿರಾಮ ನೀಡುವ ಸಮಯ ಇಂದು ಬಂದಿದೆ. ನಾನು ಎಲ್ಲಾ ರೀತಿಯ ಆಟಗಳಿಂದ ನಿವೃತ್ತಿ ಘೋಷಿಸುತ್ತೇನೆ” ಎಂದು ಯೂಸುಫ್ ಟ್ವೀಟ್‌ ಮಾಡಿದ್ದಾರೆ.

ಭಾರತದ ಮತ್ತೊಬ್ಬ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅವರ ಅಣ್ಣನಾಗಿರುವ ಯೂಸುಫ್ ಎರಡು ಬಾರಿ ವಿಶ್ವಕಪ್ ಗೆದ್ದಿದ್ದಾರೆ. ಅಲ್ಲದೆ, ಇಂಡಿಯನ್ ಪ್ರೀಮಿಯರ್ ಲೀಗ್ (IPL)ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲಿದ್ದು 2012 ಮತ್ತು 2014 ರಲ್ಲಿ ಎರಡು ಬಾರಿ ಗೆಲ್ಲಿಸಿದ್ದಾರೆ. ಮತ್ತು 2008 ರಲ್ಲಿ ಒಮ್ಮೆ ರಾಜಸ್ಥಾನ್ ರಾಯಲ್ಸ್ ಜೊತೆ ಗೆದ್ದಿದ್ದಾರೆ.

ಯೂಸುಫ್ 2007 ರಲ್ಲಿ ಅಂತರರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿದಾಗಿನಿಂದ ಭಾರತಕ್ಕಾಗಿ 57 ಏಕದಿನ ಮತ್ತು 22 T-20 ಪಂದ್ಯಗಳನ್ನು ಆಡಿದ್ದಾರೆ. ಐಸಿಸಿ ಟಿ 20 ವಿಶ್ವಕಪ್ 2007 ಮತ್ತು ಐಸಿಸಿ ಕ್ರಿಕೆಟ್ ವಿಶ್ವಕಪ್ 2011ರ ಕಪ್‌ ಗೆದ್ದ ಸಂದರ್ಭದಲ್ಲಿ ಭಾರತೀಯ ತಂಡದ ಭಾಗವಾಗಿದ್ದರು.

ಆಲ್‌ರೌಂಡರ್‌ ಆಗಿದ್ದ ಯೂಸುಫ್‌, ಬ್ಯಾಟಿಂಗ್‌ನಲ್ಲಿಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿದ್ದರು. ಅಲ್ಲದೆ, ಹ್ಯಾಂಡಿ ಆಫ್ ಸ್ಪಿನ್ನರ್ ಕೂಡ ಆಗಿದ್ದರು.

ಇಂದು (ಶುಕ್ರವಾರ) ಎಲ್ಲಾ ರೀತಿಯ ಕ್ರಿಕೆಟ್‌ ಆಟಗಳಿಂದ ನಿವೃತ್ತಿ ಪಡೆದಿರುವ ಯೂಸುಫ್‌, “ನನ್ನ ಕುಟುಂಬ, ಸ್ನೇಹಿತರು, ಅಭಿಮಾನಿಗಳು, ತಂಡಗಳು, ತರಬೇತುದಾರರು ಮತ್ತು ಇಡೀ ದೇಶಕ್ಕೆ ಪ್ರೀತಿ ಧನ್ಯವಾದಗಳು” ಎಂದು ಟ್ವೀಟ್‌ ಮಾಡಿದ್ದಾರೆ.

ಯೂಸುಫ್ ಅವರು 100 ಫರ್ಸ್‌ ಕ್ಲಾಸ್‌ ಪಂದ್ಯಗಳನ್ನು ಆಡಿದ್ದು, 4825 ರನ್ ಗಳಿಸಿ 201 ವಿಕೆಟ್ ಪಡೆದಿದ್ದರು. ಲಿಸ್ಟ್ ಎ ಕ್ರಿಕೆಟ್‌ನಲ್ಲಿ, 199 ಪಂದ್ಯಗಳಿಂದ 4797 ರನ್‌ಗಳು ಮತ್ತು 124 ವಿಕೆಟ್ ಪಡೆದಿದ್ದಾರೆ.

ಟಿ 20 ರಲ್ಲಿಯೇ ಯೂಸುಫ್ ಪರಿಣಾಮಕಾರಿ ಆಟಗಾರರಾಗಿದ್ದರು. 274 ಟಿ 20 ಗಳಲ್ಲಿ 139.34 ಸ್ಟ್ರೈಕ್ ದರದಲ್ಲಿ 4852 ರನ್ ಗಳಿಸಿದ್ದರು. ಅಲ್ಲದೆ, ಪ್ರತಿ ಓವರ್‌ಗೆ 7.63 ರನ್‌ಗಳ ದರದಲ್ಲಿ 99 ವಿಕೆಟ್ ಪಡೆದಿದ್ದಾರೆ.

ಇದನ್ನೂ ಓದಿ: ಭಾರತ V/S ಇಂಗ್ಲೆಂಡ್: ಅಭಿಮಾನಿಗಳನ್ನು ಗೊಂದಲಕ್ಕೀಡು ಮಾಡಿದ ಅಶ್ವಿನ್‌ ಟ್ವೀಟ್‌ಗಳು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights