ಭಾರತ V/S ಇಂಗ್ಲೆಂಡ್: ಅಭಿಮಾನಿಗಳನ್ನು ಗೊಂದಲಕ್ಕೀಡು ಮಾಡಿದ ಅಶ್ವಿನ್‌ ಟ್ವೀಟ್‌ಗಳು!

ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಶುಕ್ರವಾರ ನಿಗೂಢವಾದ ಸರಣಿ ಟ್ವೀಟ್‌ಗಳನ್ನು ಮಾಡಿದ್ದು, ಅವರ ಅಭಿಮಾನಿಗಳನ್ನು ಗೊಂದಲಕ್ಕೀಡು ಮಾಡಿದೆ.

ಇಂಗ್ಲೆಂಡ್‌ ವಿರುದ್ಧ ಅಹಮದಾಬಾದ್‌ನಲ್ಲಿ ನಡೆದ ಟೆಸ್ಟ್‌ನಲ್ಲಿ ಭಾರತ ತಂಡ ಬ್ರಿಟಿಷ್‌ ತಂಡವನ್ನು ಮಣಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಸಮೀಸಿದೆ. ಈ ಪಂದ್ಯ ನಡೆದು ಒಂದು ದಿನದ ನಂತರ ಅಶ್ವಿನ್‌ ಹಲವು ಟ್ವೀಟ್‌ಗಳನ್ನು ಮಾಡಿದ್ದು, ನಮಗೆ ಆಲೋಚನೆಗಳೂ ಮಾರಾಟವಾಗುತ್ತಿವೆ ಎಂದು ಹೇಳಿದ್ದಾರೆ. ಆದರೆ, ನಿಖರವಾಗಿ ಏನನ್ನೂ ಹೇಳಿಲ್ಲ. ಅವರು ಈ ಒಳಾರ್ಥದ ಟ್ವೀಟ್‌ಗಳು ಅಭಿಮಾನಿಗಳನ್ನು ಗೊಂದಲಕ್ಕೀಡು ಮಾಡಿದೆ. ಎರಡೇ ದಿನದಲ್ಲಿ ಹಗಲು-ರಾತ್ರಿ ಪಂದ್ಯವನ್ನು ಆಡಿ ಮುಗಿಸಲಾಗಿದ್ದು, ಇದೇ ಅವರ ಅಸಮಾಧಾನಕ್ಕೆ ಕಾರಣವಿರಬಹುದಾ ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿವೆ.

“ಉತ್ಪನ್ನಗಳನ್ನು ವಿವಿಧ ಮಾರ್ಕೆಟಿಂಗ್ ತಂತ್ರಗಳನ್ನು ಬಳಸಿ ಮಾರಾಟ ಮಾಡಲಾಗುತ್ತದೆ ಮತ್ತು ಅದು ಅಂಗೀಕೃತ ಅಭ್ಯಾಸವಾಗಿದೆ! ನಾವು ಈಗ ಯುಗದಲ್ಲಿ ವಾಸಿಸುತ್ತಿದ್ದೇವೆ. ಇಲ್ಲಿ ಆಲೋಚನೆಗಳು ಸಹ ನಮಗೆ ಮಾರಾಟವಾಗುತ್ತಿವೆ ಮತ್ತು ಇದು ‘ಓಟ್‌ಬಾಂಡಿಂಗ್‌ ಮಾರ್ಕೆಟಿಂಗ್’ಗೆ ಒಂದು ಅತ್ಯುತ್ತಮ ಉದಾಹರಣೆಯಾಗಿದೆ. ಆದರೆ ನಾನು ಒಂದು ವಿಚಾರ ಹೇಳಲು ಬಯಸುತ್ತೇವೆ, ಅದು ನಮಗೆ ತಿಳಿಸುವ ರೀತಿಯಲ್ಲಿ ಆಲೋಚನೆಗಳನ್ನು ನಮಗೆ ಮಾರಾಟ ಮಾಡಲಾಗುತ್ತಿದೆ. ಅದನ್ನು ನಾವು ಖರೀದಿಸುತ್ತಿದ್ದೆವೆ. ಇದು,’ನೀವು ನಿಮ್ಮ ಸ್ವಂತವಾಗಿ ಯೋಚಿಸಲು ಸಾಧ್ಯವಿಲ್ಲ’ ಎಂದು ನಮಗೆ ಹೇಳುವಂತಿದೆ ಎಂದು ಅಶ್ವಿನ್‌ ಟ್ವೀಟ್‌ ಮಾಡಿದ್ದಾರೆ.

ಒಂದು ದಶಕದಿಂದ ಆಟವನ್ನು ಆಡಿದ ನಂತರ, ‘ನಾವು ಅದನ್ನು ಖರೀದಿಸಲು ಹೋಗುವವರೆಗೂ ಅವರು ಅದನ್ನು ನಮ್ಮ ಗಂಟಲಿನಿಂದ ಕೆಳಕ್ಕೆ ನೂಕುತ್ತಾರೆ’ ಎಂದು ನಾನು ಸುರಕ್ಷಿತವಾಗಿ ಹೇಳಬಲ್ಲೆ” ಎಂದು ಅವರ ಟ್ವೀಟ್‌ಗಳಲ್ಲಿ ತಿಳಿಸಿದ್ದಾರೆ.

https://twitter.com/ashwinravi99/status/1365194205471993856?s=20

“ಅಂತಿಮವಾಗಿ, ನಮ್ಮ ಅಭಿಪ್ರಾಯಗಳು ಬಹುಮತದ ವಿರುದ್ಧವಾಗಿದ್ದರೂ ಸಹ ಅದು ಯಾವಾಗಲೂ ನಮ್ಮದಾಗಬಹುದು ಮತ್ತು ನಿಲ್ಲಬಹುದು. ಅದು ನಮ್ಮದೇ ಮತ್ತು ನಮಗೆ ಮಾರಾಟವಾದ್ದೇ! ‘ಆಯ್ಕೆ ಯಾವಾಗಲೂ ನಮ್ಮದು’ ಎಂದು ಅಶ್ವಿನ್‌ ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: ವಿಶ್ವದ ದೊಡ್ಡ ಕ್ರಿಕೆಟ್‌ ಮೈದಾನಕ್ಕೆ ನರೇಂದ್ರ ಮೋದಿ ಕ್ರೀಡಾಂಗಣ ಎಂದು ಮರುನಾಮಕರಣ!

ಅಶ್ವಿನ್‌ ಅವರ ಟ್ವೀಟ್‌ಗಳನ್ನು ಗಮನಿಸಿದ ಹಲವಾರು ಟ್ವಿಟರ್‌ ಬಳಕೆದಾರರು, ಅವರು ಏನು ಹೇಳಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಕೆಲವರು ತಮ್ಮ ಸಿದ್ಧಾಂತಗಳನ್ನು ಕಮೆಂಟ್‌ ಮಾಡಿದ್ದಾರೆ.

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಿಚ್ ಅನ್ನು ಟೀಕಿಸುವ ಯುವರಾಜ್ ಸಿಂಗ್ ಅವರ ಟ್ವೀಟ್‌ನ ಸ್ಕ್ರೀನ್‌ಶಾಟ್‌ ಜೊತೆಗೆ ಕಮೆಂಟ್‌ ಮಾಡಿರುವ ಒಬ್ಬರು “ಈ ಟ್ವೀಟ್ ಅನ್ನು ನಾನು ಇದರೊಂದಿಗೆ ಊಹಿಸುತ್ತೇನೆ” ಎಂದು ಬರೆದಿದ್ದಾರೆ.

https://twitter.com/Aashiik180/status/1365196934013620225?s=20

“ಇದು ಸ್ಟೇಡಿಯಂಗಳ ಎಲ್ಲಾ ಮಾತುಕತೆಯ ಬಗ್ಗೆ ಆಲೋಚನೆಯನ್ನು ಹುಟ್ಟುಹಾಕುತ್ತದೆ” ಎಂದು ಒಬ್ಬರು ಅಭಿಪ್ರಾಯ ಪಟ್ಟಿದ್ದಾರೆ.

ಈ ಪಂದ್ಯದಲ್ಲಿ ಅಶ್ವಿನ್ ಏಳು ವಿಕೆಟ್‌ಗಳನ್ನು ಉರುಳಿಸಿದ್ದು, ಟೆಸ್ಟ್ ಕ್ರಿಕೆಟ್‌ಗಳಲ್ಲಿ 400 ವಿಕೆಟ್ ಪಡೆದ ವೇಗದ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಶ್ವಿನ್ ಮತ್ತು ಆಕ್ಸಾರ್ ಪಟೇಲ್ ಅವರ ಬೌಲಿಂಗ್‌ ಪ್ರಾಬಲ್ಯದಿಂದ ಇಂಗ್ಲೆಂಡ್‌ ಅತ್ಯಂತ ಕಡಿಮೆ ರನ್‌ಗಳನ್ನು ನೀಡಿ, ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ 10 ವಿಕೆಟ್‌ಗಳ ಅಂತರದಲ್ಲಿ ಆರಾಮವಾಗಿ ಗೆಲುವು ಸಾಧಿಸಿತು.

ಇದನ್ನೂ ಓದಿ: ಕೃಷಿ ಕಾಯ್ದೆಗೆ ವಿರೋಧಿಸಿ BJP ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆದ ಹರಿಯಾಣ ಶಾಸಕರ ನಿವಾಸದ ಮೇಲೆ ಐಟಿ ದಾಳಿ!

Spread the love

Leave a Reply

Your email address will not be published. Required fields are marked *