ಮಂಗಳೂರು: ಶ್ರೀಲಂಕಾದ 38 ಜನರಿಗೆ ನ್ಯಾಯಾಂಗ ಬಂಧನ!

ಶ್ರೀಲಂಕಾದಿಂದ ಅಕ್ರಮವಾಗಿ ವಲಸೆ ಬಂದು ಮಂಗಳೂರಿನ ವಿವಿಧೆಡೆ ವಾಸವಾಗಿದ್ದ 38 ಜನರನ್ನು ಬಂಧಸಿಲಾಗಿದ್ದು, ಅವರೆಲ್ಲರಿಗೂ ಸ್ಥಳೀಯ ಕೋರ್ಟ್‌ ನ್ಯಾಯಾಂಗ ಬಂಧನ ವಿಧಿಸಿದೆ.

ಇವರೆಲ್ಲರೂ ತಮಿಳುನಾಡಿನ ಮೂಲಕ ಮಂಗಳೂರಿಗೆ ಬಂದಿರುವುದಾಗಿ ತಮಿಳುನಾಡು ಗುಪ್ತಚರ ಇಲಾಖೆ ನೀಡಿದೆ. ಮಾಹಿತಿ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು 38 ಜನರನ್ನು ಬಂಧಿಸಿದ್ದಾರೆ.

ತಮಿಳುನಾಡಿನ ಡಿಎಸ್ಪಿ ಹಾಗೂ ಇನ್‌ಸ್ಪೆಕ್ಟರ್‌ ನೇತೃತ್ವದ ತಂಡ ನಗರಕ್ಕೆ ಬಂದಿದ್ದು, ತನಿಖೆಗೆ ಅಗತ್ಯ ಸಹಕಾರ ನೀಡುತ್ತಿದೆ. ಪ್ರಕರಣದ ಕುರಿತು ವಿದೇಶಾಂಗ ಸಚಿವಾಲಯಕ್ಕೂ ಮಾಹಿತಿ ರವಾನಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್‌ ಎನ್‌. ಶಶಿಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ: ಭಾರತೀಯ ಸರ್ಕಾರದ ಕೆಲವು ಕ್ರಮಗಳು ಅದರ ಪ್ರಜಾಪ್ರಭುತ್ವ ಮೌಲ್ಯಗಳ ಬಗ್ಗೆ ಆತಂಕಗಳನ್ನು ಹುಟ್ಟು ಹಾಕಿದೆ: ಅಮೆರಿಕದ ಉನ್ನತ ಅಧಿಕಾರಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights