ರಶ್ಮಿಕಾ ಮಂದಣ್ಣ ನಿವಾಸಕ್ಕೆ ಐಟಿ ದಾಳಿ ಪ್ರಕರಣ : ಇಂದು ಕುಟುಂಬಸ್ಥರ ವಿಚಾರಣೆ
ಕೊಡಗು ಬೆಡಗಿ ರಶ್ಮಿಕಾ ಮಂದಣ್ಣ ನಿವಾಸಕ್ಕೆ ಐಟಿ ದಾಳಿ ಪ್ರಕರಣಕ್ಕೆ ಇಂದು ರಶ್ಮಿಕಾ ಮಂದಣ್ಣ ಕುಟುಂಬಸ್ಥರು ವಿಚಾರಣೆಗೆ ಹಾಜರಾಗಲಿದ್ದಾರೆ.
11:30 ಕ್ಕೆ ಐಟಿ ಅಧಿಕಾರಿಗಳಿಂದ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಹೀಗಾಗಿ ಮೈಸೂರಿಗೆ ರಶ್ಮಿಕಾ ತಂದೆ ಮಂದಣ್ಣ ಈಗಾಗಲೇ ತೆರಳಿದ್ದು, ನಟಿ ರಶ್ಮಿಕಾ ಹೈದ್ರಾಬಾದ್ ನಿಂದ ಮೈಸೂರಿಗೆ ಆಗಮಿಸಲಿದ್ದಾರೆಂದು ರಶ್ಮಿಕಾ ತಂದೆ ಮದನ್ ಮಂದಣ್ಣ ಮಾಹಿತಿ ನೀಡಿದ್ದಾರೆ.
ಇದೇ ತಿಂಗಳ 16ರಂದು 10 ಜನರ ಐಟಿ ಅಧಿಕಾರಿಗಳ ತಂಡ ಕೊಡಗಿನ ವಿರಾಜಪೇಟೆ ಸೇರಿ ಎರಡು ಕಡೆ ದಾಳಿ ನಡೆಸಿತ್ತು. ಸುಮಾರು ಎರಡು ದಿನಗಳ ರಶ್ಮಿಕಾ ನಿವಾಸದ ಮೇಲೆ ದಾಳಿ ನಡೆಸಿದ ತಂಡ ಕೆಲ ಮಹತ್ತರ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ರಶ್ಮಿಕಾ ಹಾಗೂ ಕುಟುಂಬದವರು ವಿಚಾರಣೆಗೆ ಹಾಜರಾಗಲಿದ್ದಾರೆ.
ಇಂದು ಬೆಳಗ್ಗೆ 11:30ಕ್ಕೆ ಮೈಸೂರಿನ ಐಟಿ ಕಚೇರಿಗೆ ಹಾಜರಾಗುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಹೀಗಾಗಿ ರಶ್ಮಿಕಾ ತಂದೆ ಮದನ್ ಮಂದಣ್ಣ ಹಾಗೂ ತಾಯಿ ಸುಮನ್ ಮಂದಣ್ಣ ಈಗಾಗಲೇ ಮೈಸೂರಿಗೆ ತೆರಳಿದ್ದು, ನಟಿ ರಶ್ಮಿಕಾ ಹೈದ್ರಾಬಾದ್ನಿಂದ ಬಂದು ವಿಚಾರಣಾ ಸಮಯಕ್ಕೆ ಹಾಜರಾಗಲಿದ್ದಾರೆ ಎಂದು ತಿಳಿದು ಬಂದಿದೆ.

