ದೇಶದಲ್ಲಿ ಮತ್ತೆ ಕೊರೊನಾ ಅಟ್ಟಹಾಸ : 35,871 ಹೊಸ ಕೇಸ್- 172 ಸಾವು!

ಭಾರತದಲ್ಲಿ ಕೊರೊನಾ 2ನೇ ಅಲೆ ಶುರುವಾಗಿದ್ದು ಜನರಲ್ಲಿ ದಿನಕಳೆದಂತೆ ಆತಂಕ ಹೆಚ್ಚಾಗುತ್ತಲೇ ಇದೆ. ಕಳೆದ ಒಂದು ವಾರದಿಂದ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು ಇಂದು 35,871ಕ್ಕೆ ತಲುಪಿದೆ.

ಹೌದು… ದೇಶದಲ್ಲಿ ಕೊರೊನಾ ಹೊಸ ಅಲೆ ಶುರುವಾಗಿದ್ದು ಕೆಲ ರಾಜ್ಯಗಳಲ್ಲಿ ಭಾರೀ ಆತಂಕ ಮನೆ ಮಾಡಿದೆ. ಹೀಗಾಗಿ ಪ್ರಧಾನಿ ಮೋದಿ ನಿನ್ನೆ ರಾಜ್ಯದ ಎಲ್ಲಾ ಸಿಎಂಗಳೊಂದಿಗೆ ನಿನ್ನೆ ಕಾನ್ಫರೆನ್ಸ್ ಮೀಟಿಂಗ್ ಮಾಡಿ ಕೊರೊನಾ ನಿಯಂತ್ರಣದ ಬಗ್ಗೆ ಎಚ್ಚರ ವಹಿಸುವಂತೆ ಸೂಚನೆ ನೀಡಿದ್ದರು.

ಆದರೆ ಕೊರೊನಾ ನಿಯಂತ್ರಣಕ್ಕೆ ಬರುವಂತೆ ಕಾಣಿಸುತ್ತಿಲ್ಲ. ಕಳೆದ 24 ಗಂಟೆಗಳಲ್ಲಿ 35,871 ಹೊಸ ಸೋಂಕುಗಳು ವರದಿಯಾಗಿವೆ. 172 ಹೊಸ ಸಾವುನೋವುಗಳೊಂದಿಗೆ ಸಾವಿನ ಸಂಖ್ಯೆ ಒಟ್ಟು 159,216 ಕ್ಕೆ ತಲುಪಿದೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 252,364ರಷ್ಟಿದೆ.

ದಿನೆ ದಿನೇ ಹೆಚ್ಚಾಗುತ್ತಿರುವ ಪ್ರಕರಣಗಳನ್ನು ನಿಯಂತ್ರಣಕ್ಕೆ ತರಲು ಮೋದಿ ಚಿಂತನೆ ನಡೆಸಿದ್ದು, ಮಾಸ್ಕ್, ಸಾಮಾಜಿಕ ಅತಂರ, ಸಾನಿಟೈಸರ್ ಇವುಗಳನ್ನು ಕಡ್ಡಾಯಗೊಳಿಸುವಂತೆ ಜಿಲ್ಲಾಡಳಿತಕ್ಕೆ ತಿಳಿಸಿದ್ದಾರೆ. ಜನ ಕೂಡ ಎಚ್ಚರಿಕೆಯಿಂದ ವಹಿಸಿಬೇಕು ಎಂದು ಮನವಿ ಮಾಡಿದ್ದಾರೆ.

ಕೆಲವು ರಾಜ್ಯಗಳಲ್ಲಿ ಲಸಿಕೆ ವ್ಯರ್ಥವಾಗುವ ಬಗ್ಗೆ ಪಿಎಂ ಮೋದಿ ಫ್ಲ್ಯಾಗ್ ಮಾಡಿದ್ದಾರೆ. ಸಾರ್ವಜನಿಕರು ಲಸಿಕೆ ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights