ನೋಡ ನೋಡುತ್ತಿದ್ದಂತೆ 35 ಕಿ.ಮೀ.‌ಗಳವರೆಗೆ ಹಿಮ್ಮುಖವಾಗಿ ಚಲಿಸಿದ ರೈಲು…!

ದೆಹಲಿಯಿಂದ ಉತ್ತರಾಖಂಡದ ತನಕ್ಪುರ ಜಿಲ್ಲೆಗೆ ಹೋಗುವಾಗ ರೈಲೊಂದು ತಾಂತ್ರಿಕ ಕಾರಣಗಳಿಂದ 35 ಕಿಲೋಮೀಟರ್ ವರೆಗೂ ಹಿಮ್ಮುಖವಾಗಿ ಚಲಿಸಿದೆ.

ವರದಿಗಳ ಪ್ರಕಾರ, ಪೂರ್ಣಗಿರಿ ಜನ್ಶತಾಬ್ಡಿ ಎಕ್ಸ್‌ಪ್ರೆಸ್‌ನ ಚಾಲಕನು ರೈಲು ಪ್ರಾಣಿಯೊಂದಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಬ್ರೇಕ್ ಹಾಕಬೇಕಾಗಿತ್ತು. ಈ ವೇಳೆ ಚಾಲಕ ಲೋಕೋಮೋಟಿವ್ ನಿಯಂತ್ರಣವನ್ನು ಕಳೆದುಕೊಂಡಿದ್ದಾನೆ. ಇದರಿಂದ ಇಡೀ ರೈಲು ಹಿಮ್ಮಖವಾಗಿ ಚಲಿಸಿದೆ. ಕೊನೆಗೆ ರಾಷ್ಟ್ರ ರಾಜಧಾನಿಯಿಂದ 330 ಕಿಲೋಮೀಟರ್ ದೂರದಲ್ಲಿರುವ ರಾಜ್ಯದ ಖತಿಮಾದಲ್ಲಿ ಇದನ್ನು ನಿಲ್ಲಿಸಲಾಯಿತು.

ರೈಲು ನಿಲ್ದಾಣದ ಮೂಲಕ ವೇಗವಾಗಿ ಹೋಗುವುದನ್ನು ದೃಶ್ಯಗಳು ವೈರಲ್ ಆಗಿವೆ.ಖತಿಮಾದಲ್ಲಿ ರೈಲು ನಿಲ್ಲಿಸಿದ ನಂತರ ಪ್ರಯಾಣಿಕರನ್ನು ಬಸ್ ಮೂಲಕ ತನಕ್ಪುರಕ್ಕೆ ಕಳುಹಿಸಲಾಯಿತು. ಘಟನೆಗೆ ಕಾರಣವೇನು ಎಂದು ತನಿಖೆ ನಡೆಸಲು ಉತ್ತರ ಪ್ರದೇಶದ ಪಿಲಿಭಿತ್‌ನ ತಾಂತ್ರಿಕ ತಂಡ ಖತಿಮಾ ತಲುಪಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights