ಕುಡುಕರಿಂದ ತಂಗಿಯನ್ನು ರಕ್ಷಿಸಲು ಪ್ರಾಣವನ್ನೇ ಪಣಕ್ಕಿಟ್ಟ ಯುವಕ; ಸಾವು
ಇಬ್ಬರು ಕುಡಿದ ಅಮಲಿನಲ್ಲಿದ್ದ ಕುಡುಕರಿಂದ ತನ್ನ ಸಹೋದರಿಯನ್ನು ರಕ್ಷಿಸಲು ತನ್ನ ಪ್ರಾಣವನ್ನ ಪಣಕ್ಕಿಟ್ಟ 22 ವರ್ಷದ ಯುವಕ ಸಾವನ್ನಪ್ಪಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ.
ರಾತ್ರಿ 8:40ರ ಸುಮಾರಿಗೆ, ಯುವಕ ಮತ್ತು ಆತನ ಸಹೋದರಿ ಕೆಲಸ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ಸಂದರ್ಭದಲ್ಲಿ ಅವರನ್ನು ತಡೆದ ಇಬ್ಬರು ಕುಡುಕರು ವಾಗ್ವಾದಕ್ಕಿಳಿದಿದ್ದಾರೆ.
ವಾದ ಮಾಡುವಾಗ ಯುವತಿಯು ಆರೋಪಿಗಳಿಗೆ ಕಪಾಳಮೋಕ್ಷ ಮಾಡಿದ್ದಾರೆ. ಇದರಿಂದ ಕೋಪಗೊಂಡ ಆರೋಪಿಗಳು ಆಕೆಗೆ ಇರಿಯಲು ಪ್ರಯತ್ನಿಸಿದ್ದಾರೆ. ಈ ವೇಳೆ, ಆಕೆಯನ ರಕ್ಷಣೆಗೆ ಮುಂದಾದ ಸಹೋದರ ಆಕೆಯನ್ನು ರಕ್ಷಿಸಿದ್ದಾನೆ. ನಂತರ, ಆರೋಪಿಗಳು ಯುವಕನಿಗೆ ಹಲವು ಬಾರಿ ಇರಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಸ್ಥಳಕ್ಕೆ ತಲುಪಿದರೂ ಆರೋಪಿ ಪರಾರಿಯಾಗಿದ್ದರು. ಆತ ಗಂಭೀರಸ್ಥಿತಿಯಲ್ಲಿದ್ದನು. ಆತನನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಾಯಿತು. ನಂತರ, ಅಲ್ಲಿಂದ ಸಫ್ದರ್‌ಜಂಗ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅದರೆ, ಆತ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಹೇಳಿದರು. ಯುವಕನ ಮುಖ್ಯ ಅಪಧಮನಿಯಲ್ಲಿ ಗಂಭೀರ ಗಾಯಗಳಾಗಿದ್ದು, ತೀವ್ರ ರಕ್ತಸ್ರಾವವಾಗಿದೆ. ಇದರಿಂದಾಗಿ ಆತ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿಗಾಗಿ ಶೋಧ ನಡೆಸಲಾಗುತ್ತಿದೆ. ಸೆಕ್ಟರ್ 20 ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ದ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: ಹೃದಯ ಕಲಕಿದ ಘಟನೆ: 3 ಮಕ್ಕಳನ್ನು ಕಳೆದುಕೊಂಡಿದ್ದ ದಂಪತಿಗಳ 4ನೇ ಮಗುವೂ ದುರಂತ ಸಾವು!