ಹೃದಯ ಕಲಕಿದ ಘಟನೆ: 3 ಮಕ್ಕಳನ್ನು ಕಳೆದುಕೊಂಡಿದ್ದ ದಂಪತಿಗಳ 4ನೇ ಮಗುವೂ ದುರಂತ ಸಾವು!

ಹುಟ್ಟಿದ ಕೆಲವೇ ದಿನಗಳಲ್ಲಿ ಸಾವನ್ನಪ್ಪುತ್ತಿದ್ದ ಮಕ್ಕಳಿಂದಾಗಿ ಮಕ್ಕಳಾದರೂ ಮಕ್ಕಳ ಲಾಲನೆಯ ಭಾಗ್ಯವನ್ನು ಕಳೆದುಕೊಂಡಿದ್ದ ಮಹಾರಾಷ್ಟ್ರದ ದಂಪತಿಗಳ ಸಂಸತ ಮತ್ತೊಮ್ಮೆ ಕಣ್ಣೀರಿನಲ್ಲಿ ಅಂತ್ಯವಾಗಿದೆ.

ಮೊನ್ನೆಯಷ್ಟೇ ಮಹಾರಾಷ್ಟ್ರದ ಭಂಧಾರ ಆಸ್ಪತ್ರೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಆ ದಂಪತಿಯ 4ನೇ ಮಗುವೂ ಸಾವನ್ನಪ್ಪಿದೆ.

14 ವರ್ಷಗಳ ಹಿಂದೆ ವಿವಾಹವಾಗಿದ್ದ ಭನರ್ಕರ್ ದಂಪತಿಗಳ 3 ಮಕ್ಕಳು ಹುಟ್ಟಿದ ಕೆಲವೇ ದಿನಗಳಲ್ಲಿ ಸಾವನ್ನಪ್ಪಿದ್ದವು. ಹೀಗಾಗಿ ನಾಲ್ಕನೇ ಮಗುವನ್ನಾದರೂ ಉಳಿಸಿಕೊಳ್ಳಬೇಕು ಎಂದು ಬಯಸಿದ್ದ ದಂಪತಿಗಳು ಮಗುವಿನ ಮೇಲಿನ ಆಸೆಯನ್ನೇ ಬಿಟ್ಟುಬಿಡುವಂತಹ ದುಃಖ ಎದುರಾಗಿದೆ.

ಹಿರ್ಕನ್ಯ ಭನಾರ್ಕರ್  ಅವರ ಪತಿ ಹೀರಾಲಾಲ್ ಭನಾರ್ಕರ್ ಈ ಅನಾಹುತದ ಬಗ್ಗೆ ಮಾತನಡಿದ್ದು, ಯಾರಿಗೂ ಇಂತಹ ದುಸ್ಥಿತಿ ಬರಬಾರದು, ಮಕ್ಕಳು ಜೀವಿಸಿ, ಆಟವಾಡಬೇಕು ಎಂದು ಹೇಳಿದ್ದಾರೆ.

ದಂಪತಿಗಳು ಕಾರ್ಮಿಕರಾಗಿದ್ದು, ಮಗುವಿನ ನಿರೀಕ್ಷೆಯಲ್ಲಿದ್ದ ದಂಪತಿಗೆ ಹಲವು ವರ್ಷಗಳ ನಂತರ ಜ.06 ರಂದು  ಹೆಣ್ಣು ಮಗು ಜನಿಸಿತ್ತು. ಆದರೆ ಅವಧಿಗೂ ಮುನ್ನವೇ ಜನಿಸಿದ ಮಗುವನ್ನು ನವಜಾತ ಶಿಶುಗಳ ವಿಶೇಷ ನಿಗಾ ಘಟಕ ( ಎಸ್ ಎನ್ ಸಿಯು) ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.  ಆದರೆ, ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಜೀವ ಕಳೆದುಕೊಂಡಿದೆ. ಈ ಮಗುವಿನ ಜೊತೆಗೆ 9 ಶಿಶುಗಳು ಅಗ್ನಿ ಅನಾಹುತದಲ್ಲಿ ಪ್ರಾಣಕಳೆದುಕೊಂಡಿವೆ.


ಇದನ್ನೂ ಓದಿ: ಮಹಾರಾಷ್ಟ್ರ ಆಸ್ಪತ್ರೆ ಅಗ್ನಿ ಅವಘಡ ಪ್ರಕರಣ : ತನಿಖೆಗೆ ಆದೇಶ – 5 ಲಕ್ಷ ಪರಿಹಾರ ಘೋಷಣೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights