ಮಹಾರಾಷ್ಟ್ರ ಆಸ್ಪತ್ರೆ ಅಗ್ನಿ ಅವಘಡ ಪ್ರಕರಣ : ತನಿಖೆಗೆ ಆದೇಶ – 5 ಲಕ್ಷ ಪರಿಹಾರ ಘೋಷಣೆ!

ಮಹಾರಾಷ್ಟ್ರದ ಭಂಡಾರ ಜಿಲ್ಲಾ ಆಸ್ಪತ್ರೆಯಲ್ಲಿ ಭಾರಿ ಅಗ್ನಿ ಅವಘಡದಲ್ಲಿ ಹತ್ತು ನವಜಾತ ಶಿಶುಗಳು ಸಾವನ್ನಪ್ಪಿವೆ. ಆಸ್ಪತ್ರೆಯ ಸಿಕ್ ನವಜಾತ ಆರೈಕೆ ಘಟಕದಲ್ಲಿ ಮುಂಜಾನೆ 2 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು ಘಟಕದಲ್ಲಿ ದಾಖಲಾದ 17 ಶಿಶುಗಳ ಪೈಕಿ ಏಳು ಶಿಶುಗಳನ್ನು ರಕ್ಷಿಸಲಾಗಿದೆ. ಸಿಎಂ ಉದ್ದವ್​ ಠಾಕ್ರೆ ಮೃತಪಟ್ಟ ನವಜಾತ ಶಿಶುಗಳ ಕುಟುಂಬಗಳಿಗೆ ತಲಾ 5 ಲಕ್ಷ ರೂ.ಪರಿಹಾರವನ್ನು ಘೋಷಿಸಿದ್ದಾರೆ. ಇಂದು ಸಂಜೆ 5 ಗಂಟೆಗೆ ಅವರು ಭಂಡಾರಾ ಜಿಲ್ಲಾಸ್ಪತ್ರೆಗೆ ಭೇಟಿ ನೀಡಲಿದ್ದಾರೆ.

ಅವಘಡಕ್ಕೆ ಖಚಿತ ಕಾರಣ ಇನ್ನೂ ತಿಳಿದುಬಂದಿಲ್ಲ ಆದರೆ ಆಸ್ಪತ್ರೆಯ ಆಡಳಿತ ವಿದ್ಯುತ್ ಶಾರ್ಟ್-ಸರ್ಕ್ಯೂಟ್ ಘಟನೆಗೆ ಕಾರಣ ಎಂದು ಹೇಳಿದೆ.

ಭಂಡಾರ ಜಿಲ್ಲಾ ಜನರಲ್ ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ. ಪ್ರಮೋದ್ ಖಂಡಟೆ ಅವರು ಮಾಧ್ಯಮಕ್ಕೆ ಮಾತನಾಡಿ, 17 ಮಕ್ಕಳನ್ನು ಅನಾರೋಗ್ಯದ ನವಜಾತ ಆರೈಕೆ ಘಟಕಕ್ಕೆ ದಾಖಲಿಸಲಾಗಿತ್ತು. “ಶನಿವಾರದ ಮುಂಜಾನೆ, ಈ ವಾರ್ಡ್‌ನಿಂದ ನರ್ಸ್ ಹೊಗೆ ಹೊರಹೊಮ್ಮುತ್ತಿರುವುದನ್ನು ಗಮನಿಸಿ ವೈದ್ಯರಿಗೆ ತಿಳಿಸಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ಮಕ್ಕಳನ್ನು ಉಳಿಸಲು ತಮ್ಮ ಅತ್ಯುತ್ತಮ ಪ್ರಯತ್ನ ಮಾಡಿದರು. ಆದರೆ ಘಟನೆಯಲ್ಲಿ ಹತ್ತು ಮಕ್ಕಳು ಸಾವನ್ನಪ್ಪಿದ್ದಾರೆ, ಏಳು ಮಂದಿ ಸುರಕ್ಷಿತವಾಗಿವೆ” ಎಂದಿದ್ದಾರೆ.

ಅಗ್ನಿ ದುರಂತದ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ರಾಜ್ಯ ಆರೋಗ್ಯ ಸಚಿವ ರಾಜೇಶ್ ಟೊಪೆ ಜೊತೆಗೆ ಭಂಡಾರ ಜಿಲ್ಲೆಯ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಮಾತನಾಡಿದರು. ಈ ಬಗ್ಗೆ ತನಿಖೆ ನಡೆಸಲು ಮುಖ್ಯಮಂತ್ರಿ ಆದೇಶಿಸಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights