ಪ್ಯಾಕ್ಟ್‌ಚೆಕ್: ಪ್ರತಿಭಟನೆಯಲ್ಲಿ ಗುಂಡು ಹಾರಿಸಿದ ಮುಸ್ಲಿಮರು ಎಂದು ಹಳೆಯ ವಿಡಿಯೋ ಹಂಚಿಕೊಂಡ BJP ಬೆಂಬಲಿಗರು

BJP ವಕ್ತಾರೆ ನೂಪುರ್ ಶರ್ಮ, ಪ್ರವಾದಿಗಳ ಕುರಿತು ನೀಡಿದ್ದ ನಿಂದನಾತ್ಮಕ ಹೇಳಿಕೆಯನ್ನು ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಮುಸಲ್ಮಾನರು ಗುಂಡು ಹಾರಿಸುತ್ತಿದ್ದಾರೆ ಎಂದು ವಿಡಿಯೊವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. ಮುಸ್ಲಿಮರು ಪೊಲೀಸರ ಮೇಲೆ ಗುಂಡು ಹಾರಿಸುತ್ತಿರುವ ದೃಶ್ಯಗಳು ಎಂಬ ಹೇಳಿಕೆಯೊಂದಿಗೆ ಬಿಜೆಪಿ ಬೆಂಬಲಿಗರು ವಿಡಿಯೋ ವೈರಲ್ ಮಾಡುತ್ತಿದ್ದಾರೆ. ಈ ಪೋಸ್ಟ್‌ನ ಸತ್ಯಾಸತ್ಯತೆಗಳನ್ನು ಪರಿಶೀಲಿಸೋಣ.

https://twitter.com/VISHNUK35030487/status/1535297807086546944

ಫ್ಯಾಕ್ಟ್‌ಚೆಕ್:

ವೈರಲ್ ವಿಡಿಯೊದ ಕೀವರ್ಡ್‌ನ ಸಹಾಯದಿಂದ ಗೂಗಲ್ ಸರ್ಚ್ ಮಾಡಿದಾಗ, ವೈರಲ್ ವಿಡಿಯೋವನ್ನು ಮೇ 2021 ರಂದು, ಒಂದು ವರ್ಷದ  ಹಿಂದೆ ಟ್ವಿಟರ್ ನಲ್ಲಿ ಹಂಚಿಕೊಂಡಿರುವುದು ಕಂಡುಬಂದಿದೆ. ವೈರಲ್ ವಿಡಿಯೋದಲ್ಲಿ ಕಂಡುಬರುವ ಅದೇ ರೀತಿಯ ತುಣುಕನ್ನು ಅಲ್ಲಿ ನೋಡಬಹುದು. ಹಾಗಾಗಿ ವೈರಲ್ ವೀಡಿಯೊ ಇತ್ತೀಚಿನದಲ್ಲ ಎಂದು ಸ್ಪಷ್ಟವಾಗಿ ತಿಳಿದು ಬಂದಿದೆ.

“ಬರೇಲಿಯಲ್ಲಿ ಅಕ್ರಮ ಗೋವು ಸಾಗಾಣಿಕೆ ವೇಳೆ ಗೂಂಡಾಗಿರಿ, ಭೋಜಿಪುರ ಪೊಲೀಸ್ ಠಾಣೆಯ ಧೌರಾ ತಾಂಡಾ ಟೌನ್‌ನಲ್ಲಿ ಅಕ್ರಮ ಶಸ್ತ್ರಾಸ್ತ್ರಗಳನ್ನು ಬಳಸಿ  ಗುಂಡು ಹಾರಿಸಲಾಗಿದ್ದು, ಈ ಪ್ರದೇಶದಲ್ಲಿ ಜನರ ಗುಂಪು ಭಯದಿಂದ ಓಡಿದಾಗ ಕಾಲ್ತುಳಿತ ಉಂಟಾಗಿದೆ ಎಂದು” ಎಂದು ಬರೆಯಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಕೀವರ್ಡ್ ಸರ್ಚ್ ನಡೆಸಿದಾಗ, 12 ಮೇ 2021 ರ ಅಮರ್ ಉಜಾಲಾ ವರದಿಯನ್ನು ಕಂಡುಬಂದಿದ್ದು, ಅದರಲ್ಲಿ ಇದೇ ರೀತಿಯ ತುಣುಕನ್ನು ಕಾಣಬಹುದು. ವೀಡಿಯೊದ ಶೀರ್ಷಿಕೆಯು, “ಬರೇಲಿ, ಧೌರಾ ತಾಂಡಾದಲ್ಲಿ ಒಂದೇ ಸಮುದಾಯದ ಎರಡು ಗುಂಪಿನ ನಡುವೆ ಘರ್ಷಣೆ ವೇಳೆ ಫೈರಿಂಗ್ ಮಾಡಲಾಗಿದೆ” ಎಂದಿದೆ.

ವರದಿಯ ಪ್ರಕಾರ, ಭೋಜಿಪುರದ ಧೌರತಾಂಡದ ಬಂಜಾರ ಸಮುದಾಯದ ಜಲೀಶ್ ಅಹಮದ್ ತನ್ನ ಅಂಗಡಿಯನ್ನು ಸಲೀಂ ಖುರೇಷಿಗೆ ಬಾಡಿಗೆಗೆ ನೀಡಿದ್ದಾನೆ ಮತ್ತು ಅಲ್ಲಿ ಕಾನೂನುಬದ್ಧ ಮಾಂಸ  ಮಾರಾಟಕ್ಕೆ ಮಾತ್ರ ಅವಕಾಶ ಮಾಡುವುದಾಗಿ ಷರತ್ತು ಹಾಕಿದ್ದಾನೆ. ಬೆಳಗ್ಗೆ 9 ಗಂಟೆ ಸುಮಾರಿಗೆ ಸಲೀಂ ಖುರೇಷಿ ಅಂಗಡಿಯಲ್ಲಿ ಗೋವಿನ ಮಾಂಸ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಮಾರುಕಟ್ಟೆಯಲ್ಲಿ ಜನರು ಹೆಚ್ಚಿರುವುದನ್ನು ಕಂಡು ಕೆಜಿಗೆ ರೂ. 150 ಇದ್ದ ಮಾಂಸದ ಬೆಲೆಯನ್ನು ರೂ 250 ಕ್ಕೆ ಏರಿಸುತ್ತಾನೆ. ಬಂಜಾರದ ಜನರು ಇದನ್ನು ವಿರೋಧಿಸಿದಾಗ, ಜಲೀಶ ಅಹಮದ್ ಅಲ್ಲಿಗೆ ಆಗಮಿಸಿ ಅಂಗಡಿ ತೆರವು ಮಾಡುವಂತೆ ಸೂಚಿಸಿದ್ದಾನೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿದೆ, ಬಂಜಾರ ಸಮುದಾಯದ ಜನರು ಸಲೀಂ ಖುರೇಷಿಗೆ ಥಳಿಸಿದ್ದಾರೆ. ಅಷ್ಟರಲ್ಲಿ ಸಲೀಂಗೆ ಬೆಂಬಲವಾಗಿ ಆತನ ಕುಟುಂಬಸ್ಥರು ಆಯುಧಗಳೊಂದಿಗೆ ಅಲ್ಲಿಗೆ ಆಗಮಿಸಿ ಮಾರುಕಟ್ಟೆಯಲ್ಲಿ ಗುಂಡು ಹಾರಿಸಿದ್ದಾರೆ. ಇದರಿಂದ ನೂಕು ನುಗ್ಗಲು ಶುರುವಾಗಿ ಕಾಲ್ತುಳಿತ ಉಂಟಾಗಿದೆ. ನಂತರ ಭೋಜಿಪುರ ಪೊಲೀಸರು ಸ್ಥಳಕ್ಕಾಗಮಿಸಿದರಾದರೂ ಅಷ್ಟರಲ್ಲಿ ಆರೋಪಿಗಳೆಲ್ಲರೂ ಸ್ಥಳದಿಂದ ಪರಾರಿಯಾಗಿದ್ದರು ಎಂದು ವರದಿಯಾಗಿದೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸ್‌ ಅಧಿಕಾರಿಗಳು ಟ್ವೀಟ್ ಮಾಡಿದ್ದು “ಭೋಜಿಪುರ ಜಿಲ್ಲೆ ಬರೇಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗುತ್ತಿದೆ. ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂಬ ಹೇಳಿಕೆಯನ್ನು ಟ್ವೀಟ್ ಮೂಲಕ ಹಂಚಿಕೊಂದಿದ್ದಾರೆ ಅದನ್ನು ಇಲ್ಲಿ ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ವೈರಲ್ ವೀಡಿಯೊ ನೂಪುರ್ ಶರ್ಮಾ ಅವರ ಹೇಳಿಕೆಯ ನಂತರ ನಡೆದ ಘರ್ಷಣೆಯಿಂದಲ್ಲ ಎಂಬುದು  ಸ್ಪಷ್ಟವಾಗಿದೆ. ಮೇ 2021 ರ ಬರೇಲಿಯ ಧೌರಾ ತಾಂಡಾದಲ್ಲಿ ಮಾಂಸದ ಖರೀದಿಗೆ ಸಂಬಂಧಿಸಿದಂತೆ ಮುಸ್ಲಿಂ ಸಮುದಾಯದ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಾಗ ಸೆರೆಯಾದ ವಿಡಿಯೋ ಎಂದು ಸ್ಪಷ್ಟವಾಗಿದೆ. ಭೋಜ್ಪುರ ಪೊಲೀಸರು ಕೂಡ ವೈರಲ್ ಹೇಳಿಕೆಯನ್ನು ನಿರಾಕರಿಸಿದ್ದಾರೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಪಾಕ್‌ ದೇವಸ್ಥಾನ ಧ್ವಂಸದ ಹಳೆಯ ಫೋಟೋವನ್ನುಇತ್ತೀಚಿನದ್ದು ಎಂದು ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “ಪ್ಯಾಕ್ಟ್‌ಚೆಕ್: ಪ್ರತಿಭಟನೆಯಲ್ಲಿ ಗುಂಡು ಹಾರಿಸಿದ ಮುಸ್ಲಿಮರು ಎಂದು ಹಳೆಯ ವಿಡಿಯೋ ಹಂಚಿಕೊಂಡ BJP ಬೆಂಬಲಿಗರು

  • June 13, 2022 at 8:23 pm
    Permalink

    ಹಳೆಯದಾದರೂ ,ಹೊಸದಾದರೂ ಈ ಭಶೀರರ ಬಂದೂಕು ಪ್ರಯೋಗ ಒಂದೇ ತಾನೇ ,ಅವರ ರಕ್ತದ ಕಣಕಣದಲ್ಲೂ ನರ ರಾಕ್ಷಸ ಇದ್ದಾನೇ ಹಾಗಾಗಿ ಇವರನ್ನಾ ಹಿಂದೂ ಸಮಾಜ ಕ್ಷಮಿಸುವ ಪ್ರಮಯವೇ ಇಲ್ಲಾ,ಇವರು ಪರಲೋಕಕ್ಕೆ ಹೋಗಬೇಕು , ಇಲ್ಲವೆ ದೇಶದಿಂದ ಓಡಬೇಕು ಎರಡೇ ಇಂತವರಿಗೆ ಬದಲಾಗಲು ದಾರಿ .

    Reply

Leave a Reply

Your email address will not be published.