ಫ್ಯಾಕ್ಟ್‌ಚೆಕ್: BJP ಅಧಿಕಾರಕ್ಕೆ ಬಂದ ಮೇಲೆ ಉತ್ತರ ಪ್ರದೇಶದಲ್ಲಿ ನಿರುದ್ಯೋಗ ಕಡಿಮೆ ಆಗಿದೆ ಎಂಬುದು ದಿಕ್ಕುತಪ್ಪಿಸುವಂತಿದೆ

ಜೂನ್ 3 ರಂದು ಲಕ್ನೋದ ಇಂದಿರಾಗಾಂಧಿ ಪ್ರತಿಷ್ಠಾನದಲ್ಲಿ ಉತ್ತರ ಪ್ರದೇಶ ಹೂಡಿಕೆದಾರರ ಶೃಂಗಸಭೆಯ ಶಿಲಾನ್ಯಾಸ ಸಮಾರಂಭದಲ್ಲಿ ಮಾತನಾಡಿದ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ಆಡಳಿತದಲ್ಲಿ ರಾಜ್ಯದಲ್ಲಿ ನಿರುದ್ಯೋಗ ದರವು 18 ಪ್ರತಿಶತದಿಂದ 2.9 ಪ್ರತಿಶತಕ್ಕೆ ಇಳಿದಿದೆ ಎಂದು ಪ್ರತಿಪಾದಿಸಿದ್ದಾರೆ. ಪ್ರಧಾನಿ ಮೋದಿ ಅವರ ಮಾರ್ಗದರ್ಶನದಲ್ಲಿ ‘ಒಂದು ಜಿಲ್ಲೆ, ಒಂದು ಉತ್ಪನ್ನ’ ಎಂಬ ಯೋಜನೆ ಕೈಗೊಂಡೆವು. ಇದರಿಂದ ನಿರುದ್ಯೋಗ ಪ್ರಮಾಣ ಕಡಿಮೆ ಆಯಿತು ಎಂದಿದ್ದರು.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು, ತಾವು ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಗಣನೀಯವಾಗಿ ಕಡಿಮೆ ಆಗಿದ್ದು. ‘2017ರಲ್ಲಿ ಬಿಜೆಪಿ ಅಧಿಕಾರ ಹಿಡಿಯುವಾಗ ಉತ್ತರ ಪ್ರದೇಶದಲ್ಲಿ ನಿರುದ್ಯೋಗ ಪ್ರಮಾಣ ಶೇ 18ರಷ್ಟು ಇತ್ತು. ಹೂಡಿಕೆದಾರರಿಗೆ ನೆರವಾಗುವಂಥ ವಾತಾವರಣವನ್ನು ನಾವು ನಿರ್ಮಾಣ ಮಾಡಿದ ಪರಿಣಾಮ ಈ ಬದಲಾವಣೆ ಆಗಿದೆ  ಎಂದಿದ್ದಾರೆ. ಯೋಗಿ ಆದಿತ್ಯನಾಥ್ ಅವರ ಹೇಳಿಕೆಯಲ್ಲಿ ವಾಸ್ತವಾಂಶ ಇದೆಯೇ ಎಂದು ಪರಿಶೀಲಿಸೋಣ.
ಏನ್‌ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others

ಫ್ಯಾಕ್ಟ್‌ಚೆಕ್:

ಆದಿತ್ಯನಾಥ ಅವರು ನೀಡಿರುವ ಹೇಳಿಕೆ ದಾರಿ ತಪ್ಪಿಸುವಂತಿದೆ ಎಂದು ‘ದಿ ಕ್ವಿಂಟ್‌’ ವೇದಿಕೆ ವರದಿ ಮಾಡಿದೆ. ‘ಸೆಂಟರ್‌ ಫಾರ್‌ ಮಾನಿಟರಿಂಗ್‌ ದ ಇಂಡಿಯನ್‌ ಎಕಾನಮಿ’ (ಸಿಎಂಐಇ) ಸಂಸ್ಥೆಯು ಪ್ರಕಟಿಸಿದ, ದೇಶದಲ್ಲಿ ಉದ್ಯೋಗಕ್ಕೆ ಸಂಬಂಧಿಸಿದ ವರದಿ ಪ್ರಕಾರ, ಉತ್ತರ ಪ್ರದೇಶದಲ್ಲಿ 2017ರ ಮಾರ್ಚ್‌ನಲ್ಲಿ ನಿರುದ್ಯೋಗ ಪ್ರಮಾಣ ಶೇ 2.4ರಷ್ಟಿತ್ತು. ಅದೇ ವೇಳೆ ಆದಿತ್ಯನಾಥ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದರು. 2020ರ ಏಪ್ರಿಲ್‌ನಲ್ಲಿ ನಿರುದ್ಯೋಗ ಪ್ರಮಾಣ ಶೇ 21.5ರಷ್ಟಕ್ಕೆ ತಲುಪಿತ್ತು. 2022ರ ಏಪ್ರಿಲ್‌ನಲ್ಲಿ ನಿರುದ್ಯೋಗ ಪ್ರಮಾಣ ಶೇ 2.9 ರಷ್ಟಿತ್ತು. ಆದಿತ್ಯನಾಥ ಅಧಿಕಾರ ಹಿಡಿಯುವ ಮುನ್ನವೇ ರಾಜ್ಯದಲ್ಲಿ ನಿರುದ್ಯೋಗ ಪ್ರಮಾಣ ಕಡಿಮೆ ಇತ್ತು ಎಂದು ಸಿಎಂಐಇ ವರದಿ ಹೇಳುತ್ತದೆ ದಿ ಕ್ವಿಂಟ್‌ ವರದಿಯಲ್ಲಿ ವಿವರಿಸಲಾಗಿದೆ.

2016 ರಿಂದ ಮೇ 2022 ರವರೆಗೆ ಉತ್ತರ ಪ್ರದೇಶದಲ್ಲಿ ನಿರುದ್ಯೋಗ ದರವನ್ನು ಈ ಕೆಳಗಿನ ಚಿತ್ರದಲ್ಲಿ ನೋಡಬಹುದು.

2.9 ಪ್ರತಿಶತ ನಿರುದ್ಯೋಗ ದರದ ಅಂಕಿ ಅಂಶವು ಏಪ್ರಿಲ್ 2022 ರ CMIE ಡೇಟಾದಿಂದ ಕಂಡುಬಂದಿದೆ. ಆದಿತ್ಯನಾಥ್ ಅಧಿಕಾರ ವಹಿಸಿಕೊಂಡಾಗ ನಿರುದ್ಯೋಗ ದರವು ಕಡಿಮೆ ಇತ್ತು ಎಂದು ತೋರಿಸುತ್ತದೆ. ಇದಲ್ಲದೆ, COVID-19 ಸಾಂಕ್ರಾಮಿಕದ ಮಧ್ಯೆ ನಿರುದ್ಯೋಗ ದರವು ಏಪ್ರಿಲ್ 2020 ರಲ್ಲಿ 21.5 ಪ್ರತಿಶತದಷ್ಟು ಹೆಚ್ಚಾಗಿದೆ. ಮತ್ತು 2017-2018 ರಲ್ಲಿ ನಿರುದ್ಯೋಗ ದರ 6.2 ರಷ್ಟಿತ್ತು ಎಂಬುದು ಗಮನಾರ್ಹ.

ಜುಲೈ 2021 ರಲ್ಲಿ ಪ್ರಕಟವಾದ ಇ ವಾರ್ಷಿಕ ಪಿಎಲ್‌ಎಫ್‌ಎಸ್ ವರದಿಗಳು ಯುಪಿಯಲ್ಲಿ ನಿರುದ್ಯೋಗ ದರವು 2019-20 ರಲ್ಲಿ ಶೇಕಡಾ 4.4 ರಷ್ಟಿದೆ ಎಂದು ಹೇಳಿದೆ. ಅಕ್ಟೋಬರ್-ಡಿಸೆಂಬರ್ 2021 ರ ತ್ರೈಮಾಸಿಕಕ್ಕೆ ಬಿಡುಗಡೆಯಾದ ತ್ರೈಮಾಸಿಕ PLFS ಡೇಟಾವು ನಗರ ಪ್ರದೇಶಗಳಲ್ಲಿ 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರಲ್ಲಿ ನಿರುದ್ಯೋಗ ದರವು 9.4 ಪ್ರತಿಶತ ಎಂದು ತೋರಿಸುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ ಉತ್ತರ ಪ್ರದೇಶದಲ್ಲಿ BJPಯ ಯೋಗಿ ಆದಿತ್ಯನಾಥ್ ಅವರು ಅಧಿಕಾರಕ್ಕೆ ಬರುವ ಮುಂಚೆಯೇ ಇದ್ದ ಅಂಕಿ ಅಂಶಗಳನ್ನು ಉಲ್ಲೇಖಿಸಿ ಹಿಂದಿನ ಸರ್ಕಾರಗಳು ಅಧಿಕಾರಾವಧಿಯಲ್ಲಿದ್ದಾಗ ಆಗಿರುವ ಬೆಳವಣಿಗೆಯನ್ನು ತಮ್ಮ ಸರ್ಕಾರದ ಸಾಧನೆ ಎಂಬಂತೆ ನಿರುದ್ಯೋಗ ದರವು 2017 ರಲ್ಲಿ ಶೇಕಡಾ 18 ರಿಂದ ಶೇಕಡಾ 2.9 ಕ್ಕೆ ಇಳಿದಿದೆ ಎಂಬ ಆದಿತ್ಯನಾಥ್ ಅವರ ಹೇಳಿಕೆಯು ದಿಕ್ಕುತಪ್ಪಿಸುವಂತಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಗಲ್ಫ್ ಕಂಪನಿಗಳು ಭಾರತದ ಕಾರ್ಮಿಕರನ್ನು ವಜಾಗೊಳಿಸಿ ವಾಪಸ್ ಕಳುಹಿಸುತ್ತಿವೆ ಎಂಬುದು ಸುಳ್ಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.