ಫ್ಯಾಕ್ಟ್‌ಚೆಕ್: ಗಲ್ಫ್ ಕಂಪನಿಗಳು ಭಾರತದ ಕಾರ್ಮಿಕರನ್ನು ವಜಾಗೊಳಿಸಿ ವಾಪಸ್ ಕಳುಹಿಸುತ್ತಿವೆ ಎಂಬುದು ಸುಳ್ಳು

ಗಲ್ಫ್ ಕಂಪನಿಗಳು ತಮ್ಮ ದೇಶಕ್ಕೆ ವಲಸೆ ಬಂದ ಭಾರತೀಯ ಕಾರ್ಮಿಕರನ್ನು ಭಾರತಕ್ಕೆ ವಾಪಸ್ ಕಳುಹಿಸಲಾಗುತ್ತಿದೆ ಎಂದು ಹೇಳುವು ಇತ್ತೀಚಿನ ದೃಶ್ಯಗಳು ಎಂದು ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಪ್ರವಾದಿ ಮುಹಮ್ಮದ್ ಕುರಿತು ಬಿಜೆಪಿ ವಕ್ತಾರರು ಇತ್ತೀಚೆಗೆ ಮಾಡಿದ್ದ ನಿಂದಾತ್ಮಕ ಹೇಳಿಕೆಗಳ ಬಗ್ಗೆ ಹಲವು ಇಸ್ಲಾಮಿಕ್ ದೇಶಗಳು ಅಸಮಾಧಾನ ವ್ಯಕ್ತಪಡಿಸಿದ್ದವು, ಅಲ್ಲದೆ ಈ ಘಟನೆಯಿಂದ ಕೆಂಡಾಮಂಡಲವಾಗಿರುವ ಗಲ್ಫ್ ದೇಶಗಳು, ತಮ್ಮ ದೇಶದ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಿ ಭಾರತಕ್ಕೆ ಕಳುಹಿಸುತ್ತಿದ್ದಾರೆ ಎಂದು ಈ ಪೋಸ್ಟ್ ಹೇಳುತ್ತದೆ. ಹಾಗಿದ್ದರೆ ಗಲ್ಫ ದೇಶಗಳು ಈ ರೀತಿ ತೀರ್ಮಾನ ತೆಗೆದುಕೊಂಡಿವೆಯೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಗೂಗಲ್‌ನಲ್ಲಿ ಸಂಬಂಧಿತ ಕೀವರ್ಡ್‌ಗಳೊಂದಿಗೆ ಈ ವೀಡಿಯೊವನ್ನು ಸರ್ಚ್ ಮಾಡಿದಾಗ, ಕತಾರ್‌ನ ದೋಹಾದಲ್ಲಿರುವ ರೆಡ್‌ಕೋ ಇಂಟರ್‌ನ್ಯಾಶನಲ್ ಕಂಪನಿಯಲ್ಲಿ ನಡೆದ ಮೂರು ತಿಂಗಳ ಹಿಂದಿನ ಘಟನೆ ಎಂದು ತಿಳಿದುಬಂದಿದೆ. ಅದೇ ವೀಡಿಯೊವನ್ನು ಹಂಚಿಕೊಂಡ ಇತ್ತೀಚಿನ ಫೇಸ್‌ಬುಕ್ ಪೋಸ್ಟ್ ಅನ್ನು ನಾವು ಕಂಡುಕೊಂಡಿದ್ದೇವೆ. ಕಂಪನಿಯು ನಷ್ಟದಲ್ಲಿ ನಡೆಯುತ್ತಿರುವುದರಿಂದ ಕಾರ್ಮಿಕರು ಕಂಪನಿಯನ್ನು ತೊರೆಯುತ್ತಿದ್ದಾರೆ ಎಂದು ಈ ಫೇಸ್‌ಬುಕ್ ಬಳಕೆದಾರರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಮೂಲಗಳನ್ನು ಮತ್ತಷ್ಟು ಸರ್ಚ್ ಮಾಡಿದಾಗ, ‘QN ಕತಾರ್’ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಕಟವಾದ ಅದೇ ವೀಡಿಯೊವನ್ನು ನಾವು ಕಂಡುಕೊಂಡಿದ್ದೇವೆ. ಮಾರ್ಚ್ 2022 ರಲ್ಲಿ, ‘ರೆಡ್ಕೋ ಇಂಟರ್ನ್ಯಾಷನಲ್’ ನಲ್ಲಿನ ಕಾರ್ಮಿಕರು ತಮ್ಮ 3 ತಿಂಗಳ ಸಂಬಳವನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಮುಷ್ಕರವನ್ನು ನಡೆಸಿದರು. ಪ್ರತಿಭಟನೆಯ ನಂತರ, ‘ರೆಡ್ಕೋ ಇಂಟರ್ನ್ಯಾಷನಲ್’ ತಮ್ಮ ದೇಶಗಳಿಗೆ ತೆರಳಲು ಏರ್ ಟಿಕೇಟ್‌ಗಳನ್ನು ಒದಗಿಸಿತು. ‘ರೆಡ್ಕೋ ಇಂಟರ್‌ನ್ಯಾಶನಲ್’ನಲ್ಲಿ ಕಾರ್ಮಿಕರು ಮುಷ್ಕರ ಮಾಡುತ್ತಿರುವುದನ್ನು ತೋರಿಸುವ ಕೆಲವು ಹಳೆಯ ವೀಡಿಯೊಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. 3 ತಿಂಗಳ ಹಳೆಯ ಘಟನೆಯ ಸಂದರ್ಭವನ್ನು,  ಭಾರತದ ಕಾರ್ಮಿಕರನ್ನು ವಜಾಗೊಳಿಸಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ಇತ್ತೀಚೆಗಷ್ಟೇ ಅರಬ್ ರಾಷ್ಟ್ರಗಳ ಸೂಪರ್‌ಮಾರ್ಕೆಟ್‌ಗಳು ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸಿ ಬಿಜೆಪಿ ವಕ್ತಾರರು ಪ್ರವಾದಿ ಮುಹಮ್ಮದ್ ಕುರಿತು ಮಾಡಿದ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂಬ ಸುದ್ದಿ ವರದಿಯಾಗಿದೆ. ಸೌತ್ ಏಷ್ಯನ್ ಜರ್ನಲ್ ಮತ್ತು ಇತರ ಕೆಲವು ಮಾಧ್ಯಮ ವೆಬ್‌ಸೈಟ್‌ಗಳು ಅರಬ್ಬರು ಭಾರತೀಯ ಹಿಂದೂ ವಲಸೆ ಕಾರ್ಮಿಕರನ್ನು ತಮ್ಮ ಕಂಪನಿಗಳಿಂದ ತೆಗೆದುಹಾಕಲು ಪ್ರಾರಂಭಿಸಿದ್ದಾರೆ ಎಂದು ವರದಿ ಮಾಡಿದೆ. ಆದರೆ ಈ ಬಗ್ಗೆ ಯಾವುದೇ ವಿಶ್ವಾಸಾರ್ಹ ವರದಿಗಳಿಲ್ಲ. ಭಾರತದಲ್ಲೂ ಕೂಡ ಬಾಯ್ಕಾಟ್ ಕತಾರ್ ಎನ್ನುವ ಅಭಿಯಾನವನ್ನು ಟ್ವಿಟರ್ ಟ್ರೆಂಡ್ ಮಾಡಲಾಗಿತ್ತು.

ಒಟ್ಟಾರೆಯಾಗಿ ಹೇಳುವುದಾದರೆ, ಗಲ್ಫ್ ಕಂಪನಿಗಳು ಭಾರತೀಯ ವಲಸೆ ಕಾರ್ಮಿಕರನ್ನು ಮರಳಿ ಕಳುಹಿಸುವ ಇತ್ತೀಚಿನ ದೃಶ್ಯಗಳಂತೆ ಸಂಬಂಧವಿಲ್ಲದ ಹಳೆಯ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ‘ಬಾಯ್ಕಾಟ್ ಕತಾರ್ 2022 ಕತಾರ್ ಎಕ್ಸ್‌ಪೋಸ್ಡ್’ ಬ್ಯಾನರ್‌ನ ಅಸಲಿಯತ್ತೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.