ಫ್ಯಾಕ್ಟ್‌ಚೆಕ್: ‘ಬಾಯ್ಕಾಟ್ ಕತಾರ್ 2022 ಕತಾರ್ ಎಕ್ಸ್‌ಪೋಸ್ಡ್’ ಬ್ಯಾನರ್‌ನ ಅಸಲಿಯತ್ತೇನು?

BJP ವಕ್ತಾರೆ ನೂಪುರ್ ಶರ್ಮ ಮತ್ತು ನವೀನ್ ಜಿಂದಾಲ್ ಅವರು ಪ್ರವಾದಿ ಮುಹಮ್ಮದ್‌ರ ಬಗ್ಗೆ ನೀಡಿದ್ದ ನಿಂದನಾತ್ಮಕ ಮತ್ತು ಆಕ್ಷೇಪಾರ್ಹ ಹೇಳಿಕೆಯನ್ನು ಹಲವಾರು ದೇಶಗಳು – ವಿಶೇಷವಾಗಿ ಮುಸ್ಲಿಂ-ಬಹುಸಂಖ್ಯಾತ ರಾಷ್ಟ್ರಗಳು -ಖಂಡಿಸಿದ್ದವು. ಈ ಹಿನ್ನಲೆಯಲ್ಲಿ ಸಾಮಾಜಿಕ ಮಾಧ್ಯಮದ ಬಳಕೆದಾರರು ನಿರ್ದಿಷ್ಟವಾಗಿ ಕತಾರ್ ಏರ್‌ಲೈನ್‌ ಅನ್ನು ಗುರಿಯಾಗಿಸಿಕೊಂಡು “ಬಾಯ್ಕಾಟ್ ಕತಾರ್ ಏರ್‌ವೇಸ್” ನಂತಹ ಪೋಸ್ಟ್‌ಗಳನ್ನು ಟ್ವೀಟರ್‌ನಲ್ಲಿ ಟ್ರೆಂಡ್ ಮಾಡಿದ್ದರು.

“ಬಾಯ್ಕಾಟ್ ಕತಾರ್ 2022 ” ಎನ್ನುವ ಬ್ಯಾನರ್ ಅನ್ನು ಕ್ರೀಡಾಂಗಣದಲ್ಲಿ ಹಿಡಿದಿರುವ ಫೋಟೋವನ್ನು ಪೋಸ್ಟ್‌ ಮಾಡಲಾಗಿದೆ . ಈಗ ಅಮಾನತುಗೊಂಡಿರುವ BJP ವಕ್ತಾರೆಯ ಹೇಳಿಕೆಗಳ ನಂತರ ಭಾರತ ಮತ್ತು ಕತಾರ್ ನಡುವಿನ ರಾಜತಾಂತ್ರಿಕ ವಿಷಯಗಳ ಕುರಿತು ಪೋಸ್ಟ್‌ಗಳನ್ನು ಮಾಡಲಾಗುತ್ತಿದೆ. ಟ್ವಿಟರ್‌ನಲ್ಲಿ ಹಲವರು “ಕತಾರ್ ಎಕ್ಸ್‌ಪೋಸ್ಡ್” ಎಂಬ ಹ್ಯಾಶ್‌ಟ್ಯಾಗ್‌ಗಳೊಂದಿಗೆ ಫೋಟೋವನ್ನು ಹಂಚಿಕೊಂಡಿದ್ದಾರೆ. Arnab goswami ಫ್ಯಾನ್ಸ್‌ ಹೆಸರಿನಲ್ಲಿ ಈ ಟ್ವೀಟ್ ಮಾಡಲಾಗಿದ್ದು , “ಭಾರತ ಜಗತ್ತನ್ನು ಮುನ್ನಡೆಸಲಿದೆ
ಇದು ಈ ರೀತಿ ಆಗುತ್ತದೆ ಎಂದು ನನಗೆ ತಿಳಿದಿರಲಿಲ್ಲ” ಎಂದು ಫೋಟೋವನ್ನು ಟ್ವೀಟ್ ಮಾಡಿದ್ದಾರೆ.

https://twitter.com/arnab_team/status/1534467529405386752

ಪೋಸ್ಟ್‌ನ ಆರ್ಕೈವ್ ಮಾಡಿದ ಲಿಂಕ್‌ಅನ್ನು ಇಲ್ಲಿ ನೋಡಬಹುದು.

ಫ್ಯಾಕ್ಟ್‌ಚೆಕ್:

ಟ್ವೀಟರ್‌ನಲ್ಲಿ ಪೋಸ್ಟ್‌ ಮಾಡಲಾಗಿರುವ ಪೋಟೋವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಅದು ಗೆಟ್ಟಿ ಇಮೇಜಸ್‌ನ ವೆಬ್‌ಸೈಟ್‌ನಲ್ಲಿ ಪ್ರಟವಾಗಿರುವ ಮೂಲ ಫೋಟೋ ಲಭ್ಯವಾಗಿದೆ. ಫೋಟೋವನ್ನು ಮ್ಯಾಥಿಯಾಸ್ ಹ್ಯಾಂಗ್ಸ್ಟ್ ಎಂಬುವವರು ತೆಗೆದಿದ್ದಾರೆ, “ಏಪ್ರಿಲ್ 02 ರಂದು ಯುರೋಪಾ-ಪಾರ್ಕ್ ಸ್ಟೇಡಿಯನ್‌ನಲ್ಲಿ ಸ್ಪೋರ್ಟ್-ಕ್ಲಬ್ ಫ್ರೀಬರ್ಗ್ ಮತ್ತು ಎಫ್‌ಸಿ ಬೇಯರ್ನ್ ಮುಂಚೆನ್ ನಡುವಿನ ಬುಂಡೆಸ್ಲಿಗಾ ಪಂದ್ಯದ ಪ್ರಾರಂಭಕ್ಕು ಮೊದಲು ಫ್ರೀಬರ್ಗ್ ಅಭಿಮಾನಿಗಳು ಕತಾರ್‌ನಲ್ಲಿ ಫಿಫಾ ವಿಶ್ವಕಪ್ 2022 ಅನ್ನು ಬಹಿಷ್ಕರಿಸುವ ಬ್ಯಾನರ್ ಅನ್ನು ಪ್ರದರ್ಶಿಸಲಾಗಿತ್ತು.

ಈ ಚಿತ್ರವನ್ನು ಮಿಡಲ್ ಈಸ್ಟ್ ಮಾನಿಟರ್ ಮತ್ತು ಇನ್‌ಸೈಡ್ ದಿ ಗೇಮ್ಸ್‌ನಂತಹ ವೆಬ್‌ಸೈಟ್‌ಗಳಲ್ಲಿ ಕತಾರ್‌ನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ವರದಿಗಳಲ್ಲಿ ಪ್ರಕಟಿಸಲಾಗಿದೆ. ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಇತ್ತೀಚೆಗೆ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಫಿಫಾ ವಿಶ್ವಕಪ್ 2022 ಹಿನ್ನಲೆಯಲ್ಲಿ ಕತಾರ್‌ನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ, ಶೋಷಣೆ ಮತ್ತು ವಲಸೆ ಕಾರ್ಮಿಕರ ಸಾವುಗಳ ಕುರಿತು ಪ್ರತಿಭಟನೆಯನ್ನು ದಾಖಲಿಸುವ ಕಾರಣಕ್ಕೆ ಬ್ಯಾನರ್ ಪ್ರರ್ಶಿಸಲಾಗಿದೆ.

ದಿ ಗಾರ್ಡಿಯನ್ ವರದಿಯ ಪ್ರಕಾರ, “ಕತಾರ್‌ನಲ್ಲಿ ಸಾವಿರಾರು ವಲಸೆ ಕಾರ್ಮಿಕರನ್ನು ಸೇವೆಗಾಗಿ ನೇಮಿಸಿಕೊಂಡಿರುವ ಖಾಸಗಿ ಭದ್ರತಾ ಸಂಸ್ಥೆಗಳಿಲ್ಲಿ ‘ಬಲವಂತದ ಕೆಲಸ’ ಮತ್ತು ಇತರ ನಿಂದನೆಯ ಪ್ರಕರಣಗಳು ದಾಖಲಾಗಿವೆ ಎಂದು ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಸಂಸ್ಥೆಯು ಇತ್ತೀಚಿಗೆ ವರದಿಯನ್ನು ಪ್ರಕಟಿಸಿತು. ಅವರು ಈ ಸಮಸ್ಯೆಗಳನ್ನು ಪರಿಹರಿಸುವಂತೆ ಕಾರ್ಮಿಕರಿಗೆ ರಕ್ಷಣೆ ನೀಡುವಂತೆ ಒತ್ತಾಯಿಸಿ “ಬ್ಯಾನರ್‌ ಹಿಡಿಯಲಾಗಿದೆ” ಇನ್ನಾದರೂ ಇಂತಹ ಕ್ರಮಗಳು ನಿಲ್ಲಬೇಕು ಎಂದು ಪ್ರತಿಭಟನೆ ನಡೆದಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಟ್ವೀಟರ್‌ನಲ್ಲಿ ವೈರಲ್ ಆಗಿರುವ ಬ್ಯಾನರ್ ಭಾರತದ ನೂಪುರ್ ಶರ್ಮಾ ಅವರ ಹೇಳಿಕೆಯ ನಂತರ ಕತಾರ್ ವಿರುದ್ದ ನಡೆಯುತ್ತಿರುವ Boycott Qatar ನ ಹಿನ್ನಲೆಯಲ್ಲಿ ಪ್ರದರ್ಶಿಸಲಾಗಿರುವ ಫೋಟೋ ಅಲ್ಲ. ಬದಲಿಗೆ, ಇದು ಕತಾರ್‌ನಲ್ಲಿ  ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಮುಂಬರುವ ಫುಟ್ಬಾಲ್ ವಿಶ್ವಕಪ್ ಬಗ್ಗೆ. ಫಿಫಾ ವಿಶ್ವಕಪ್ 2022 ಅನ್ನು ಬಹಿಷ್ಕರಿಸುವ ಬ್ಯಾನರ್ ಅನ್ನು ಪ್ರದರ್ಶಿಸಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ರಾಜಸ್ಥಾನದ ಝಲಾವರ್ ವಾಟರ್ ಪಾರ್ಕ್‌ನಲ್ಲಿ ತಲೆಗೆ ಪೆಟ್ಟಾದ ಯುವಕ ಸತ್ತಿಲ್ಲ!


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “ಫ್ಯಾಕ್ಟ್‌ಚೆಕ್: ‘ಬಾಯ್ಕಾಟ್ ಕತಾರ್ 2022 ಕತಾರ್ ಎಕ್ಸ್‌ಪೋಸ್ಡ್’ ಬ್ಯಾನರ್‌ನ ಅಸಲಿಯತ್ತೇನು?

Leave a Reply

Your email address will not be published.