ಫ್ಯಾಕ್ಟ್‌ಚೆಕ್: ಎರಡು ತಲೆಯ ಬಿಳಿಯ ಹಾವು ಎಂದು ಎಡಿಟ್ ಮಾಡಿದ ಫೋಟೋ ವೈರಲ್ !

ಎರಡು ತಲೆಯ ಬಿಳಿ ಹಾವನ್ನು ತೋರಿಸುವ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ನಿಸರ್ಗದಲ್ಲಿ ಏನೆಲ್ಲಾ ವಿಸ್ಮಯಗಳು ಅಡಗಿವೆಯೋ ಬಲ್ಲವರಾರೂ, ಆದರೂ ಪ್ರಕೃತಿಯು ತನ್ನ ಮಡಿಲಲ್ಲಿ ಇಂತಹ ಅನೇಕ ಜೀವರಾಶಿಗಳನ್ನುಹುದುಗಿಸಿಕೊಂಡಿದೆ. ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಫೋಟೋವನ್ನು ರನ್ ಮಾಡಿದಾಗ, ಅದೇ ರೀತಿಯ ಫೋಟೋವನ್ನು ಅನೇಕ ವೆಬ್‌ಸೈಟ್‌ಗಳಲ್ಲಿ ಅಪ್‌ಲೋಡ್ ಮಾಡಿರುವುದು ಕಂಡುಬಂದಿದೆ. ‘ಅನಿಮಲ್ ಪ್ಲಾನೆಟ್ ಇಂಡಿಯಾ’ದ ಅಧಿಕೃತ ಟ್ವಿಟ್ಟರ್ ಖಾತೆಯು 2016 ರಲ್ಲಿ ಫೋಟೋದ ಮೂಲ ಆವೃತ್ತಿಯನ್ನು ಟ್ವೀಟ್ ಮಾಡಿದೆ. ಮೂಲ ಆವೃತ್ತಿಯಲ್ಲಿ ಹಾವಿಗೆ ಒಂದೇ ತಲೆ ಇರುವುದನ್ನು ಕಾಣಬಹುದು. ಮೂಲ ಫೋಟೋವನ್ನು  ಎರಡನೇ ತಲೆ ಎಂದು ತೋರಿಸಲಾಗಿದೆ. ಆದ್ದರಿಂದ, ಪೋಸ್ಟ್ ಮಾಡಿದ ಫೋಟೋ ಎಡಿಟ್ ಆಗಿದೆ ಖಚಿತವಾಗಿದೆ.

ಆದರೂ, ಎರಡು ತಲೆಯ ಹಾವಿನ ನೈಜ ದೃಶ್ಯಗಳನ್ನು ಇಲ್ಲಿ ಕಾಣಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಎಡಿಟ್ ಮಾಡಿದ ಫೋಟೋವನ್ನು ಎರಡು ತಲೆಯ ಬಿಳಿ ಹಾವಿನ ದೃಶ್ಯ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ. ಅಲ್ಲದೆ ಕೆಲವೊಮ್ಮೆ ನೈಸರ್ಗಿಕವಾಗಿ ಎರಡು ತಲೆಯ ಹಾವು, ಎರಡು ತಲೆಯ ಕರು, ಎರಡು ತಲೆಯ ಮನುಷ್ಯ ಜನಿಸಿರುವ ಸುದ್ದಿಗಳು ಆಗಾಗ್ಗೆ ಪ್ರಸಾರವಾಗುತ್ತಿರುತ್ತವೆ. ಆದರೆ ಈ ಪೋಸ್ಟ್‌ನಲ್ಲಿ ತೋರಿಸಲಾಗಿರುವ ಪೋಟೊ ಎಡಿಟ್ ಮಾಡಿರುವ ಫೋಟೋ ಆಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಭಾರತದ ಧ್ವಜದ ಮೇಲೆ ವಾಹನ ಚಾಲನೆ – ಇದು ತಮಿಳುನಾಡಿನಲ್ಲಿ ನಡೆದ ಘಟನೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights