ಫ್ಯಾಕ್ಟ್‌ಚೆಕ್: ಮೋದಿ ಮಾಸ್ಟರ್ ಸ್ಟ್ರೋಕ್‌ಗೆ ಬೆಚ್ಚಿದ್ವಂತೆ ಅರಬ್ ರಾಷ್ಟ್ರಗಳು! ಯಪ್ಪಾ ಎಂಥಾ ಸುಳ್ಳು

ಮೋದಿಜೀ ಮಾಸ್ಟರ್ ಸ್ಟ್ರೋಕ್ “ಅರಬ್ ದೇಶಗಳಿಂದ ತೈಲ ಆಮದು ಬಂದ್ ಮಾಡಿ ರಷ್ಯಾದಿಂದ ಆಮದು ಮಾಡಲು ನಿರ್ಧರಿಸುತ್ತಿದ್ದಂತೆ ಭಾರತದ ವಿರುದ್ಧದ ಎಲ್ಲಾ ಪೋಸ್ಟ್‌ಗಳನ್ನು ಡಿಲಿಟ್ ಮಾಡಿದ ಅರಬ್ ಅಧಿಕಾರಿಗಳು”. “ಭಾರತದ ವಿರುದ್ಧ ನಿಂತು ಮಾತನಾಡಿದ್ದ ಗಲ್ಫ್ ರಾಷ್ಟ್ರಗಳು ಒಂದೇ ದಿನಕ್ಕೆ ಭಾರತದ ಮುಂದೆ ಮಂಡಿಯೂರಿವೆ, ಇದೇ ಮೋದಿಜೀಯ ತಾಕತ್ತು” ಎಂಬ ಹೇಳಿಕೆಯ ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ವರಲ್ ಆಗುತ್ತಿವೆ. ಈ ಪೋಸ್ಟ್‌ಗಳನ್ನು ಬಲಪಂಥೀಯ ಪ್ರತಿಪಾದಕರು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ಪೋಸ್ಟ್‌ರ್‌ಗಳಲ್ಲಿ ಹೇಳಿರುವಂತೆ ಭಾರತ ಅರಬ್ ರಾಷ್ಟ್ರಗಳಿಂದ ತೈಲವನ್ನು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿದೆಯೇ ಎಂದು ಈ ಪೋಸ್ಟ್‌ಗಳಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್:
ಕಳೆದ ವಾರ ಪ್ರವಾದಿ ಮಹಮ್ಮದ್‌ ಅವರನ್ನು ನಿಂದಿಸಿ ಬಿಜೆಪಿಯ ವಕ್ತಾರೆ ನೂಪುರ ಶರ್ಮಾ ಆಡಿದ ಮಾತು ಮತ್ತು ದಿಲ್ಲಿ ಬಿಜೆಪಿ ಮಾಧ್ಯಮ ಘಟಕದ ಮುಖ್ಯಸ್ಥ ನವೀನ್‌ ಕುಮಾರ್‌ ಜಿಂದಾಲ್‌ ಅವರ ಆಕ್ಷೇಪಾರ್ಹ ಟ್ವೀಟ್‌ಗಳಿಂದಾಗಿ ಅರಬ್ ರಾಷ್ಟ್ರಗಳಲ್ಲಿ ವ್ಯಾಪಕ ಟೀಕೆಗಳು ಕೇಳಿಬಂದಿದ್ದವು. ನಂತರ ಭಾರತ ಅಂತರಾಷ್ಟ್ರೀಯ ಮಟ್ಟದಲ್ಲಿ ಮುಜುಗರಕ್ಕೆ ಒಳಗಾಗಿತ್ತು. ಅರಬ್ ರಾಷ್ಟ್ರಗಳ ಟೀಕೆಗಳ ಹಿನ್ನಲೆಯಲ್ಲಿ ಬಿಜೆಪಿಯು ನೂಪುರ್ ಶರ್ಮಾ ಮತ್ತು ನಾಯಕ ನವೀನ್ ಜಿಂದಾಲ್ ಅವರನ್ನು ಅಮಾನತ್ತು ಮಾಡಿತ್ತು.
ಮೋದಿಜೀ ತಾಕತ್ತು ಎಂದು ಹೇಳುತ್ತಿರುವುದು ಸುಳ್ಳು
ಮುಸ್ಲಿಮ್‌ ಬಾಹುಳ್ಯದ ರಾಷ್ಟ್ರಗಳು ತಮ್ಮ ಅಸಮಾಧಾನ, ಅತೃಪ್ತಿಯನ್ನು ಹೊರ ಹಾಕುತ್ತಿವೆ. ವಿಶೇಷವಾಗಿ ಕೊಲ್ಲಿರಾಷ್ಟ್ರಗಳು ಈ ವಿಷಯದಲ್ಲಿ ಹೆಚ್ಚು ಆಕ್ರಮಣಕಾರಿಯಾಗಿವೆ. ಇದಕ್ಕೆ ಪ್ರತಿಯಾಗಿ ಬಿಜೆಪಿ, ವಿವಾದಕ್ಕೆ ಕಾರಣವಾದ ತನ್ನಿಬ್ಬರು ನಾಯಕರನ್ನು ಪಕ್ಷದಿಂದ ಅಮಾನತು ಮಾಡಿದೆ. ‘ಭಾರತ ಸರಕಾರವು ಎಲ್ಲ ಧರ್ಮಗಳನ್ನು ಸಮಾನ ಮತ್ತು ಗೌರವದಿಂದ ಕಾಣುತ್ತದೆ’ ಎಂದು ಹೇಳಿಕೆ ನೀಡಿದೆ. ಆದರೂ ಕೆಲವರು ಭಾರತವೇ ಅರಬ್ ರಾಷ್ಟ್ರಗಳಿಗೆ ಎಚ್ಚರಿಕೆ ಕೊಟ್ಟಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬೊಬ್ಬೆ ಹಾಕುತ್ತಿವೆ ಎನ್ನುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಅಂತಹ ಯಾವುದೇ ಕ್ರಮವನ್ನು ಭಾರತ ಕೈಗೊಂಡಿಲ್ಲ.
ಕಾರಣ:
ಈ ವಿಷಯದಲ್ಲಿ ಭಾರತ ಸರಕಾರವು ಯಾಕೆ ಇಷ್ಟೊಂದು ಸಾವಧಾನದ ಮಾರ್ಗವನ್ನು ಅನುಸರಿಸುತ್ತಿದೆ ಎಂಬ ಪ್ರಶ್ನೆ ಸಹಜ. ಇತ್ತೀಚಿನ ಕೆಲವು ವರ್ಷಗಳಲ್ಲಿ ‘ಭಾರತವು ವಿಶ್ವದ ಬಲಿಷ್ಠ ರಾಷ್ಟ್ರ’ ಎಂದು ಭಾವಿಸಿದವರಿಗೆ ಈಗಿನ ನಡೆ ಅಚ್ಚರಿ ತರುತ್ತಿದೆ. ಇದಕ್ಕೆ ಕಾರಣವಿದೆ. ಅದನ್ನು ಭಾರತೀಯರು, ಹಣ ರವಾನೆ, ಭದ್ರತೆ, ತೈಲ, ಗ್ಯಾಸ್‌ ಆಮದು ಮತ್ತು ರಫ್ತು ಕಾರಣಗಳಾಗಿ ವಿಂಗಡಿಸಬಹುದು.
ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿ ಹೆಚ್ಚು ಕಡಿಮೆ ಒಂದು ಕೋಟಿ ಭಾರತೀಯರಿದ್ದಾರೆ. ಈ ಪೈಕಿ 9 ರಾಷ್ಟ್ರಗಳಲ್ಲೇ 90 ಲಕ್ಷ ಜನರಿದ್ದಾರೆ! ಯುಎಇನಲ್ಲಂತೂ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಭಾರತೀಯರೇ ಇದ್ದಾರೆ. ಇಲ್ಲಿರುವವರು ಯಾರೂ ಅಲ್ಲಿನ ಪ್ರಜೆಗಳಲ್ಲ; ಅವರನ್ನು ಯಾವಾಗ ಬೇಕಾದರೂ ಯುಎಇ ವಾಪಸ್‌ ಕಳುಹಿಸಬಹುದು.
ದೇಶ ಭಾರತೀಯರು ಪ್ರಮಾಣ
ಯುಎಇ 34,25,144 34.6
ಸೌದಿ ಅರೇಬಿಯಾ 25,94,947 7.5
ಕುವೈತ್‌ 10,29,861 24.1
ಒಮನ್‌ 7,81,141 15.3
ಕತಾರ್‌ 7,46,550 25.9
ಬಹ್ರೇನ್‌ 3,26,568 19.2
ಜೋರ್ಡಾನ್‌ 20,760 0.2
ಇರಾಕ್‌ 18,007 0.04
ಲೆಬನಾನ್‌ 8,537 0.1

ಭಾರತದ ಒಟ್ಟು ಕಚ್ಚಾ ತೈಲ ಬೇಡಿಕೆಯಲ್ಲಿ ಶೇ. 60ರಷ್ಟು ಬೇಡಿಕೆಯನ್ನು ಗಲ್ಫ್‌ ರಾಷ್ಟ್ರಗಳೇ ಪೂರೈಸುತ್ತವೆ. ತೈಲ ಅವಲಂಬನೆ ಮಾತ್ರವಲ್ಲದೇ, ವ್ಯೂಹಾತ್ಮಕವಾಗಿ ಮತ್ತು ಭದ್ರತಾ ಉದ್ದೇಶಗಳಿಗಾಗಿಯೂ ಭಾರತವು ಗಲ್ಫ್‌ ರಾಷ್ಟ್ರಗಳ ಮೇಲೆ ಅವಲಂಬಿಸಿದೆ. ಕಳೆದ ಮಾರ್ಚ್‌ನಲ್ಲಿ ಸಂಸತ್ತಿಗೆ ಮಾಹಿತಿ ನೀಡಿದ್ದ ಇಂಧನ ಸಚಿವ ಹರ್ದೀಪ್‌ ಸಿಂಗ್‌ ಪುರಿ, “ನಿತ್ಯ ಭಾರತಕ್ಕೆ 50 ಲಕ್ಷ ಬ್ಯಾರೆಲ್‌ ತೈಲ ಬೇಕು. ಈ ಪೈಕಿ ಶೇ. 60 ಬೇಡಿಕೆಯನ್ನು ಅರಬ್‌ ರಾಷ್ಟ್ರಗಳೇ ಪೂರೈಕೆ ಮಾಡುತ್ತವೆ,” ಎಂದು ತಿಳಿಸಿದ್ದರು.

ಕೊಲ್ಲಿ ರಾಷ್ಟ್ರಗಳಿಂದಲೇ ಶೇ. 60ರಷ್ಟು ಕಚ್ಚಾ ತೈಲ
2019ರಲ್ಲಿ ಭಾರತ ಕಚ್ಚಾ ತೈಲ ಆಮದು ಮಾಡಿಕೊಂಡ ಲೆಕ್ಕದ ಪ್ರಮಾಣ

ಇರಾಕ್‌ ಶೇ. 22
ಸೌದಿ ಅರೇಬಿಯಾ ಶೇ. 19
ಯುಎಇ ಶೇ. 09
ನೈಜೇರಿಯಾ ಶೇ. 08
ವೆನೆಜುವೆಲಾ ಶೇ. 07
ಕುವೈತ್‌ ಶೇ. 05
ಮೆಕ್ಸಿಕೊ ಶೇ. 04
ಇರಾನ್‌ ಶೇ. 02

ಭಾರತದ ಒಟ್ಟು ಕಚ್ಚಾ ತೈಲ ಬೇಡಿಕೆಯಲ್ಲಿ ಶೇ. 60ರಷ್ಟು ಬೇಡಿಕೆಯನ್ನು ಗಲ್ಫ್‌ ರಾಷ್ಟ್ರಗಳೇ ಪೂರೈಸುತ್ತದೆ.

 

  • ಮೊಹಮ್ಮದ್ ಪೈಗಂಬರ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ಅವರನ್ನು  ಭಾರತೀಯ ಜನತಾ ಪಕ್ಷ (ಬಿಜೆಪಿ) ಪಕ್ಷದಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
  • ಅಮಾನತುಗೊಂಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ, ಉಚ್ಛಾಟಿತ ನಾಯಕ ನವೀನ್ ಜಿಂದಾಲ್ ಮತ್ತು ಪತ್ರಕರ್ತೆ ಸಬಾ ನಖ್ವಿ ಸೇರಿದಂತೆ ಇತರರ ವಿರುದ್ಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದನ್ನು ತಡೆಯಬಹುದಿತ್ತಲ್ಲವೇ?
  • ಅರಬ್ ರಾಷ್ಟ್ರಗಳು ಭಾರತದ ವಿರುದ್ದ ಇಷ್ಟೆಲ್ಲಾ ಟೀಕೆಗಳನ್ನು ಮಾಡುತ್ತಿದ್ದರು ಮೋದಿಜೀ ತುಟಿಕ್ ಪಿಟಿಕ್ ಎನ್ನುತ್ತಿಲ್ಲ ಯಾಕೆ?
  • ಉಕ್ರೇನ್-ರಷ್ಯಾ ಯುದ್ದದ ನಂತರ ಅಮೇರಿಕಾ , ಆಸ್ಟ್ರೇಲಿಯಾ ಮತ್ತು ಯೂರೋಪ್ ದೇಶಗಳು ರಷ್ಯಾದ ಮೇಲೆ ವಿಧಿಸಿದ್ದ ಆರ್ಥಿಕ ಧಿಗ್ಭಂಧನದಿಂದಾಗಿ US$ 80-90 ಇರುವ ಕಚ್ಚಾ ತೈಲವನ್ನು US$ 40-45 ಡಾಲರ್ ಪ್ರತಿ ಬ್ಯಾರಲ್ ಗೆ ನೀಡುತ್ತಿದೆ. ಆದರೆ ಭಾರತೀಯರಾದ ನಮಗೆ ಈ ಪ್ರಯೋಜನ ಸಿಗುತ್ತಿಲ್ಲ ಕಾರಣ ಈ ಲಿಂಕ್ ಓದಿ.
  • ರಾಷ್ಟ್ರ, ಅಂತರಾಷ್ಟ್ರ ಮಟ್ಟದಲ್ಲಿ ಏನೆಲ್ಲ ವಿದ್ಯಮಾನಗಳು ನಡೆಯುತ್ತವೆ ಎಂದು ತಿಳಿದುಕೊಳ್ಳದ ಕೆಲವರು BJP IT ಸೆಲ್, FAKE Factory ಪೋಸ್ಟ್‌ ಕಾರ್ಡ್ ಪೇಜ್‌ಗಳು ಹರಡುವ ಸುಳ್ಳು ಸುದ್ದಿಗಳ ಪೋಸ್ಟರ್‌ಗಳನ್ನು ಹಿಂದೆ ಮುಂದೆ ಯೋಚಿಸದೆ ಹಂಚಿಕೊಳ್ಳುತ್ತವೆ.

ಒಟ್ಟಾರೆಯಾಗಿ ಹೇಳುವುದಾದರೆ ಈ ರೀತಿ ಸುಳ್ಳು ಪೋಸ್ಟ್‌ರ್‌ಗಳನ್ನು ಹಂಚಿಕೊಳ್ಳುವ ಮೂಲಕ ಸುಳ್ಳನ್ನು ಪ್ರಸಾರ ಮಾಡಲಾಗುತ್ತಿದ್ದು ಇಂತಹ ಪೋಸ್ಟ್ಗಳನ್ನು ನಂಬುವ ಮುನ್ನ ಪರಿಶೀಲಿಸಿ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ರಾಜಸ್ಥಾನದ ಝಲಾವರ್ ವಾಟರ್ ಪಾರ್ಕ್‌ನಲ್ಲಿ ತಲೆಗೆ ಪೆಟ್ಟಾದ ಯುವಕ ಸತ್ತಿಲ್ಲ!


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights